ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical abuse: ಹಾಸ್ಟೆಲ್ ಒಳ ನುಗ್ಗಿ ಮಲಗಿದ್ದ ಟೆಕ್ಕಿಯ ಮೇಲೆ ಲಾರಿ ಚಾಲಕನಿಂದ ಲೈಂಗಿಕ ದೌರ್ಜನ್ಯ

ಹಾಸ್ಟೆಲ್ ನಲ್ಲಿ ಮಲಗಿದ್ದ ಟೆಕ್ಕಿಯ ಮೇಲೆ ಲಾರಿ ಚಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೇರಳದಲ್ಲಿ ನಡೆದಿದೆ. ಐಟಿ ವೃತ್ತಿಪರಳಾದ ಮಹಿಳೆ ಪ್ರತಿಭಟಿಸಿದ್ದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ಚಾಲಕನನ್ನು ಮಧುರೈ ಮೂಲದವನು ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕೇರಳ: ಮಲಗಿದ್ದ ಮಹಿಳಾ ಟೆಕ್ಕಿಯ (Techie) ಮೇಲೆ ಲೈಂಗಿಕ ದೌರ್ಜನ್ಯ (Physical abuse) ಎಸಗಿದ ಮಧುರೈ (Madurai) ಮೂಲದ ಲಾರಿ ಚಾಲಕನನ್ನು (Tamil Nadu lorry driver) ಕೇರಳ ಪೊಲೀಸರು (Kerala Police) ಬಂಧಿಸಿದ್ದಾರೆ. ತಿರುವನಂತಪುರದ ಕಜಕೂಟಂನಲ್ಲಿರುವ ಹಾಸ್ಟೆಲ್ ನಲ್ಲಿ ಮಲಗಿದ್ದ ಐಟಿ ವೃತ್ತಿಪರ ಮಹಿಳೆಯ ಮೇಲೆ ಲಾರಿ ಚಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪೊಲೀಸರು ಸಿಸಿಟಿವಿ ಮತ್ತು ಲಾರಿ ಚಾಲಕನ ವಾಹನದ ಗುರುತಿನ ಆಧಾರದಲ್ಲಿ ಆತನನ್ನು ಹಿಂಬಾಲಿಸಿ ಬಂಧಿಸಿದ್ದಾರೆ. ಲಾರಿ ಚಾಲಕನಾಗಿರುವ ಆರೋಪಿ ಕೆಲಸದ ನಿಮಿತ್ತ ಕೇರಳಕ್ಕೆ ಬಂದಿದ್ದು, ಆತನ ಗುರುತನ್ನು ಬಹಿರಂಗಪಡಿಸಲಾಗಿಲ್ಲ.

ಈ ಕುರಿತು ಮಾಹಿತಿ ನೀಡಿರುವ ತಿರುವನಂತಪುರಂ ನಗರ ಉಪ ಪೊಲೀಸ್ ಆಯುಕ್ತ ಫರಾಶ್ ಟಿ., ಆರೋಪಿಯ ಬಗ್ಗೆ ಆರಂಭದಲ್ಲಿ ಯಾವುದೇ ಪ್ರಾಥಮಿಕ ಮಾಹಿತಿ ಇರಲಿಲ್ಲ. ನಾವು ಆ ಪ್ರದೇಶದಲ್ಲಿ ಶೋಧ ಮತ್ತು ತನಿಖೆ ನಡೆಸಿದ್ದೇವೆ. ಅಲ್ಲಿ ಅಳವಡಿಸಲಾದ ಸಿಸಿಟಿವಿ ಕೆಮರಗಳನ್ನು ಪರಿಶೀಲಿಸಿದ ಬಳಿಕ ಆರೋಪಿ ಮತ್ತು ವಾಹನವನ್ನು ಗುರುತಿಸಲಾಗಿದೆ. ಅವನ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ನಾವು ಅವನನ್ನು ವಿಚಾರಣೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಐಟಿ ವೃತ್ತಿಪರಳಾದ ಮಹಿಳೆ ಅಕ್ಟೋಬರ್ 17 ರಂದು ರಾತ್ರಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ನಿದ್ರಿಸುತ್ತಿದ್ದಾಗ ತನ್ನ ಮೇಲೆ ಯಾರೋ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಆಕೆ ಎಚ್ಚರಗೊಂಡು ಆತನನ್ನು ವಿರೋಧಿಸಿದಾಗ ಆತ ಓಡಿಹೋದ. ಅವಳಿಗೆ ಅವನ ಮುಖ ಸ್ಪಷ್ಟವಾಗಿ ಕಾಣಲಿಲ್ಲ ಎಂದು ಕೂಡ ಆಕೆ ಹೇಳಿದ್ದಾಳೆ.

ಐಟಿ ಪಾರ್ಕ್, ಟೆಕ್ನೋಪಾರ್ಕ್ ಇರುವ ಕಜಕೂಟಂ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಜನರನ್ನು ಆಕರ್ಷಿಸುತ್ತದೆ. ಈ ಪ್ರದೇಶದಲ್ಲಿ ಪೊಲೀಸ್ ಗಸ್ತು ಕೂಡ ಉತ್ತಮವಾಗಿ ಇದೆ. ಎಲ್ಲಾ ಹಾಸ್ಟೆಲ್‌, ಪಿಜಿ ಮತ್ತು ಲಾಡ್ಜ್‌ಗಳು ಸರಿಯಾದ ಅನುಮತಿಗಳೊಂದಿಗೆ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಸರಿಯಾದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಹಾಸ್ಟೆಲ್‌ಗಳಿಗೆ ಸೂಚನೆ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Self Harming: ಸೋದರಳಿಯನೊಂದಿಗೆ ಲವ್ವಿ ಡವ್ವಿ; ಗಂಡನಿಗೆ ತಿಳಿಯುತ್ತಲೇ ಈಕೆ ಮಾಡಿದ್ದು ಏನು ಗೊತ್ತಾ?

ವಿದ್ಯಾರ್ಥಿನಿ ಆತ್ಮಹತ್ಯೆ

ಸೀನಿಯರ್‌ ವಿದ್ಯಾರ್ಥಿ ನೀಡುವ ಕಿರುಕುಳದಿಂದ ಮನನೊಂದು ಬೆಂಗಳೂರಿನ ಬಾಗಲೂರಿನ ಪಿಜಿಯಲ್ಲಿ ಬಿಬಿಎ ವಿದ್ಯಾರ್ಥಿನಿಯೊಬ್ಬಳು ತಾನು ವಾಸಿಸುತ್ತಿದ್ದ ಪಿಜಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಸನಾ ಪರ್ವೀನ್ ಎಂದು ಗುರುತಿಸಲಾಗಿದೆ.

ಸನಾ ಸಾವಿಗೆ ಆಕೆ ಓದುತ್ತಿದ್ದ ಕಾಲೇಜಿನ ಪಾಸ್ ಔಟ್ ವಿದ್ಯಾರ್ಥಿ ಕಾರಣ ಎಂದು ಹೇಳಲಾಗುತ್ತಿದೆ. ಮೃತ ಸನಾ ಕುಟುಂಬದವರಿಂದ ರಿಫಾಸ್ ಎನ್ನುವ ವಿದ್ಯಾರ್ಥಿಯ ವಿರುದ್ಧ ಆರೋಪ ಕೇಳಿ ಬಂದಿದೆ. ಸನಾ ಪರ್ವೀನ್ ಓದುತ್ತಿದ್ದ ಕಾಲೇಜಿನಲ್ಲಿ ರಿಫಾಸ್ ಸಹ ಓದುತ್ತಿದ್ದ. ಈತ ಪಾಸ್ ಔಟ್ ಆಗಿದ್ದರೂ ಸನಾಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ.

ರಿಫಾಸ್ ಮೂಲತಃ ಕೇರಳ ವಿದ್ಯಾರ್ಥಿಯಾಗಿದ್ದು ಕಳೆದ 10 ತಿಂಗಳ ಹಿಂದೆ ಪರ್ವೀನ್‌ಗೆ ಸಾಕಷ್ಟು ಕಿರುಕುಳ ನೀಡಿದ್ದಾನೆ. ಪಾಸ್ ಔಟ್ ಆದ ನಂತರ ಕೂಡ ಈಕೆ ಓದುತ್ತಿದ್ದ ಕಾಲೇಜಿಗೆ ಬಂದು ಹೋಗಿ ಮಾಡುತ್ತಿದ್ದ. ಪಿಜಿ ಬಳಿಗೆ ಬಂದು ಸಾಕಷ್ಟು ಹಿಂಸೆ ಕೊಡುತ್ತಿದ್ದ ಎಂದು ಸ್ನೇಹಿತರು ಹೇಳಿದ್ದಾರೆ. ಈ ಸಂಬಂಧ ಕಾಲೇಜಿನಲ್ಲಿ ಕೆಲವು ಘಟನೆಗಳು ನಡೆದಿವೆ ಎಂದು ಸನಾ ಸ್ನೇಹಿತೆಯರು ತಿಳಿಸಿದ್ದಾರೆ. ಈ ಕುರಿತು ಬಾಗಲೂರು ಪೊಲೀಸ್ ಠಾಣೆಯಲ್ಲಿಕೇಸು ದಾಖಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author