ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

AU Jewellers robbery case: ಎಯು ಜ್ಯೂಯೆಲ್ಲರ್ಸ್ ದರೋಡೆ ಪ್ರಕರಣ ಭೇದಿಸಿದ ಪೊಲೀಸರು: ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿನ ಎ ಯು ಜ್ಯೂಯೆಲ್ಲರಿ ಅಂಗಡಿಯಲ್ಲಿ ಡಿಸೆಂಬರ್ 22 ರ ರಾತ್ರಿ 139 ಕೆ.ಜಿ. ಬೆಳ್ಳಿ ಕಳ್ಳತನವಾಗಿತ್ತು. ದರೋಡೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಯಲ್ಲಿ ಎಯು ಜ್ಯೂಯೆಲ್ಲರಿ ಮಾಲೀಕ ಜಗದೀಶ್ ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿ ಸಿ ಕ್ಯಾಮೆರಾಗಳನ್ನು ಮುರಿದು ಒಳನುಗ್ಗಿದ್ದ ಕಳ್ಳರ ಸುಳಿವು ಪಕ್ಕದ ಜ್ಯೂಯೆಲ್ಲರಿ ಅಂಗಡಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು

ದರೋಡೆ ಪ್ರಕರಣ ಭೇದಿಸಿದ ಪೊಲೀಸರು: ಆರೋಪಿಗಳ ಬಂಧನ

-

Ashok Nayak
Ashok Nayak Jan 21, 2026 9:15 PM

ಚಿಕ್ಕಬಳ್ಳಾಪುರ: ನಗರದ ಎ.ಯು ಜ್ಯೂವೆಲರಿ ಅಂಗಡಿಯ ಬಾಗಿಲು ಮುರಿದು‌ 139 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ದರೋಡೆಕೋರರನ್ನು ಮಾಲು ಸಮೇತ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿನ ಎ ಯು ಜ್ಯೂಯೆಲ್ಲರಿ ಅಂಗಡಿಯಲ್ಲಿ ಡಿಸೆಂಬರ್ 22 ರ ರಾತ್ರಿ 139 ಕೆ.ಜಿ. ಬೆಳ್ಳಿ ಕಳ್ಳತನವಾಗಿತ್ತು. ದರೋಡೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಯಲ್ಲಿ ಎಯು ಜ್ಯೂಯೆಲ್ಲರಿ ಮಾಲೀಕ ಜಗದೀಶ್ ನೀಡಿದ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿ ಸಿ ಕ್ಯಾಮೆರಾಗಳನ್ನು ಮುರಿದು ಒಳನುಗ್ಗಿದ್ದ ಕಳ್ಳರ ಸುಳಿವು ಪಕ್ಕದ ಜ್ಯೂಯೆಲ್ಲರಿ ಅಂಗಡಿ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. 

ಇದನ್ನೂ ಓದಿ: Crime News: ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗಿಳಿಸಿದ ಪಾಪಿ ತಂದೆ, ಅಜ್ಜಿ ಸೇರಿ 12 ಮಂದಿ ಬಂಧನ

ಕಳ್ಳರು ಬಳಸಿದ್ದ ಮುಸುಕು ಕಳ್ಳತನಕ್ಕೆ ಬಳಸಿದ್ದ ಕಾರಿನ ಜಾಡು ಹಿಡಿದು ಹುಡುಕಾಟ ಪ್ರಾರಂಭಿ ಸಿದ್ದು, ಕೊನೆಗೂ ಕಳ್ಳರನ್ನ ಪತ್ತೆ ಹಚ್ಚಿದ್ದಾರೆ. ಬಂಧಿತರು ರಾಜಸ್ಥಾನ ಮೂಲದ ಹನುಮಂತ್ ಸಿಂಗ್ ಚೌಹಾಣ್ (26), ಬೈರು ಸಿಂಗ್ ಚೌಹಾಣ್ (26) ಎನ್ನಲಾಗಿದೆ. ಮತ್ತೊಬ್ಬ ಆರೋಪಿ ರಮೇಶ್ ಕುಮಾರ್ ಪಂಡಿತ್ ತಲೆಮರೆಸಿಕೊಂಡಿದ್ದಾನೆ. ಸದರಿ ಆರೋಪಿಯ ಪತ್ತೆ ಕಾರ್ಯ ಮುಂದು ವರೆದಿದೆ.  

ತನಿಖಾ ತಂಡವು ಆರೋಪಿಗಳಿಂದ 20 ಕೆಜಿ ತೂಕದ 08 ಬೆಳ್ಳಿಯ ಬಿಸ್ಕೆಟ್‌ಗಳು, 13 ಲಕ್ಷ ನಗದು ಹಣ, ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳರಿಂದ ವಶಪಡಿಸಿ ಕೊಂಡ ಮಾಲುಗಳ ಒಟ್ಟು ಅಂದಾಜು ಮೌಲ್ಯ 58 ಲಕ್ಷ ರೂಗಳಾಗಿರುತ್ತದೆಂದು ಅಂದಾಜಿಸ ಲಾಗಿದೆ ಎಂದು ಎಸ್ ಪಿ ಕುಶಾಲ್ ಚೌಕ್ಸೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು

ಕಳ್ಳರನ್ನು ಹಿಡಿದು ಮಾಲು ಸಮೇತ ವಶಪಡಿಸಿಕೊಂಡ ಚಿಕ್ಕಬಳ್ಳಾಪುರ ಉಪವಿಭಾಗದ ಉಪಾಧೀಕ್ಷಕ ಪ್ರಕಾಶ.ಆರ್ ಮತ್ತು ನಿಕಟಪೂರ್ವ ಡಿ.ವೈ.ಎಸ್.ಪಿ ಶಿವಕುಮಾರ್.ಎಸ್ ನೇತೃತ್ವದಲ್ಲಿ ಸಿಪಿಐ ರಂಜನ್ ಕುಮಾರ್.ಡಿ, ಸೂರ್ಯಪ್ರಕಾಶ್, ಸುರೇಶ.ಎಂ.ಎನ್. ಶ್ರೀನಿವಾಸ್, ಮತ್ತು ಪಿಎಸ್‌ಐ ಅಮರ್.ಎಸ್.ಎಂ. ಶರಣಪ್ಪ ಕೆ.ಬಿ ತಂಡವನ್ನು ಎಸ್ ಪಿ ಕುಶಾಲ್ ಚೌಕ್ಷೆ ಅಭಿನಂದಿಸಿದ್ದಾರೆ.