ಉಡುಪಿ: ಉದ್ಯಮಿಯನ್ನು ಹತ್ಯೆಗೈದು (Murder case) ಪರಾರಿಯಾಗಲು ಯತ್ನಿಸಿದ ಹಂತಕನನ್ನು ಕಾಪು (Kapu) ಮತ್ತು ಕಾರ್ಕಳ (Karkala) ಗ್ರಾಮಾಂತರ ಪೊಲೀಸ್ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿ (Mudarangadi crime news) ಪೇಟೆಯಲ್ಲಿ ಶುಕ್ರವಾರ ಸಂಜೆ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ, ಕಾಂಗ್ರೆಸ್ ಮುಖಂಡ ಡೇವಿಡ್ ಡಿ'ಸೋಜಾ ಕೊಲೆಯಾದವರು. ಉತ್ತರ ಪ್ರದೇಶ (Uttar Pradesh) ಮೂಲದ ರಾಜು ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಪರಾರಿಯಾಗಿದ್ದಾರೆ.
ಮುದರಂಗಡಿ ಪೇಟೆಯಲ್ಲಿ ನೂರಾರು ಜನರ ಎದುರೇ ಶುಕ್ರವಾರ ಸಂಜೆ ಮುದರಂಗಡಿ- ಪಿಲಾರ್ ಖಾನದಲ್ಲಿ ಪ್ರಿನ್ಸ್ ಪಾಯಿಂಟ್ ಉದ್ಯಮ ಸಂಸ್ಥೆ ಹೊಂದಿರುವ ಡೇವಿಡ್ ಡಿ'ಸೋಜಾ ಅವರನ್ನು ಕೊಲೆ ಮಾಡಲಾಗಿದೆ.
ಪ್ರಧಾನಿ ಮೋದಿ ವಿಡಿಯೋಗೆ "I'm a criminal", "Millions of lies", ಹಾಡನ್ನು ಬಳಕೆ ಮಾಡಿದ ಬಿಜೆಪಿ; ಭಾರಿ ಟೀಕೆ
ಮುದರಂಗಡಿ ಚರ್ಚ್ ಎದುರಿನ ತಮ್ಮ ಕಚೇರಿಯಿಂದ ಡೇವಿಡ್ ಡಿ'ಸೋಜಾ ಅವರು ಶುಕ್ರವಾರ ಅಪರಾಹ್ನ 3.50ರ ಸುಮಾರಿಗೆ ಹೊರ ಬಂದು ಕಾರಿನ ಬಳಿ ಬಂದಾಗ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರ ಹತ್ತಿರ ಬಂದು ಅವರ ಮೇಲೆ ಗುಂಡು ಹರಿಸಿದ್ದಾರೆ. ತಕ್ಷಣವೇ ಅವರು ನೆಲಕ್ಕೆ ಉರುಳಿದ್ದಾರೆ. ದುಷ್ಕರ್ಮಿಗಳು ಹಾರಿಸಿದ ಗುಂಡು ಅವರ ತಲೆ ಮತ್ತು ಎದೆಗೆ ಬಿದ್ದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾಹಿತಿ ತಿಳಿದ ತಕ್ಷಣ ಆರೋಪಿಗಳ ಬಂಧನಕ್ಕೆ ಮಿಂಚಿನ ಕಾರ್ಯಾಚರಣೆ ಪ್ರಾರಂಭಿಸಿದ ಕಾಪು ಮತ್ತು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಓರ್ವನನ್ನು ಬೈಂದೂರು ತಾಲೂಕಿನ ಒತ್ತಿನೆಣೆಯ ರಾಘವೇಂದ್ರ ಮಠದ ಬಳಿಕ ನಿರ್ಜನ ಪ್ರದೇಶದಲ್ಲಿ ಬಂಧಿಸಿದರು. ಇನ್ನಿಬ್ಬರು ಪೊಲೀಸರನ್ನು ನೋಡಿ ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿಗಳು ಪೋಲೀಸರ ಮೇಲೆ ಪಿಸ್ತೂಲಿನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಕಾಪು ಎಸ್ ಐ ತೇಜಸ್ವಿ ಅವರು ಓರ್ವನ ಕಾಲಿಗೆ ಶೂಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ತೇಜಸ್ವಿ ಅವರಿಗೂ ಗುಂಡೇಟು ತಗಲಿದೆ. ಘಟನಾ ಸ್ಥಳದಲ್ಲಿ ಆರೋಪಿಗಳ ಬ್ಯಾಗ್, ಪಿಸ್ತೂಲ್ ಪತ್ತೆಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಬಿದ್ದ ಬಸ್: ಏಳು ಮಂದಿ ಪ್ರಯಾಣಿಕರು ಸಾವು
ಎಸ್ ಐ ತೇಜಸ್ವಿ ಮತ್ತು ಕಾಲಿಗೆ ಗಾಯಗೊಂಡಿರುವ ಆರೋಪಿ ರಾಜುನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಉಡುಪಿ ಎಸ್ ಪಿ ಹರಿರಾಮ್ ಅವರು ತೇಜಸ್ವಿ ಅವರ ಯೋಗಕ್ಷೇಮ ವಿಚಾರಿಸಿದರು. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಓರ್ವ ಆರೋಪಿಯನ್ನು ಬಂಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನಿಬ್ಬರ ಬಂಧನಕ್ಕೆ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.