ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ಮೋದಿ ವಿಡಿಯೋಗೆ "I'm a criminal", "Millions of lies", ಹಾಡನ್ನು ಬಳಕೆ ಮಾಡಿದ ಬಿಜೆಪಿ; ಭಾರಿ ಟೀಕೆ

Narendra Modi: ಭಾರತೀಯ ಜನತಾ ಪಕ್ಷದ (BJP) ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ಪ್ರಚಾರದ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಬಳಸಲಾದ ಹಿನ್ನೆಲೆ ಹಾಡು ಇದೀಗ ಬಾರೀ ಸದ್ದು ಮಾಡುತ್ತಿದೆ. ಪ್ರಧಾನಿ ಮೋದಿ ನಡೆದುಕೊಂಡು ಹೋಗುವುದು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸುವ ದೃಶ್ಯಗಳನ್ನು ಒಳಗೊಂಡಿರುವ ಈ ವಿಡಿಯೊಗೆ ಅಮೆರಿಕದ ರ‍್ಯಾಪರ್ ಎನ್‌ಎಫ್ (NF) ಅವರ ದಿ ಸರ್ಚ್‌ ಹಾಡನ್ನು ಬಳಸಿಕೊಳ್ಳಾಗಿದೆ.

ಮೋದಿ ವಿಡಿಯೋಗೆ  I'm a criminal ಹಾಡನ್ನು ಬಳಕೆ ಮಾಡಿದ ಬಿಜೆಪಿ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 7, 2026 7:41 PM

ನವದೆಹಲಿ: ಭಾರತೀಯ ಜನತಾ ಪಕ್ಷದ (BJP) ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಒಳಗೊಂಡ ಪ್ರಚಾರದ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಬಳಸಲಾದ ಹಿನ್ನೆಲೆ ಹಾಡು ಇದೀಗ ಬಾರೀ ಸದ್ದು ಮಾಡುತ್ತಿದೆ. ಪ್ರಧಾನಿ ಮೋದಿ ನಡೆದುಕೊಂಡು ಹೋಗುವುದು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸುವ ದೃಶ್ಯಗಳನ್ನು ಒಳಗೊಂಡಿರುವ ಈ ವಿಡಿಯೊಗೆ ಅಮೆರಿಕದ ರ‍್ಯಾಪರ್ ಎನ್‌ಎಫ್ (NF) ಅವರ ದಿ ಸರ್ಚ್‌ ಹಾಡನ್ನು ಬಳಸಿಕೊಳ್ಳಾಗಿದ್ದು, ಹಾಡಿನ ಸಾಲುಗಳು ಇದೀಗೆ ವಿಪಕ್ಷಗಳ ಟೀಕೆಗೆ ಕಾರಣವಾಗಿದೆ.

ಮೋದಿಯವರು ವಿಡಿಯೋದಲ್ಲಿ ನಡೆದುಬರುವಾಗ ಹಾಡಿನ ಹಿನ್ನೆಲೆಯಲ್ಲಿ "ಐ ಆಮ್ ಎ ಕ್ರಿಮಿನಲ್" (ನಾನೊಬ್ಬ ಅಪರಾಧಿ) ಮತ್ತು "ಮಿಲಿಯನ್ಸ್ ಆಫ್ ಲೈಸ್" (ಲಕ್ಷಾಂತರ ಸುಳ್ಳುಗಳು) ಎಂಬ ಸಾಲುಗಳು ಸಬ್ಟೈಟಲ್ಸ್‌ಗಳೊಂದಿಗೆ ಕೇಳಿಬರುತ್ತವೆ. ವಿರೋಧ ಪಕ್ಷದವರು ಮತ್ತು ನೆಟ್ಟಿಗರು ಇದನ್ನು "ಬಿಜೆಪಿಯ ದೊಡ್ಡ ತಪ್ಪೊಪ್ಪಿಗೆ" ಎಂದು ಲೇವಡಿ ಮಾಡುತ್ತಿದ್ದಾರೆ. ಪ್ರಧಾನಿ ಅವರ ಪ್ರಚಾರದ ವಿಡಿಯೊಗೆ ಇಂತಹ ಸಾಹಿತ್ಯವನ್ನು ಬಳಸಿರುವುದನ್ನು ಹಲವರು ಪ್ರಶ್ನಿಸಿದ್ದರೆ , ಇನ್ನೂ ಕೆಲವರು ಪ್ರಧಾನಿಗೆ ಈ ಸಾಲುಗಳು ಹೇಳಿ ಮಾಡಿಸಿದ್ದಾಗಿದೆ ಎಂದು ಹೇಳಿದ್ದಾರೆ.

ವಿಡಿಯೋ ನೋಡಿ



ಯುವ ಪೀಳಿಗೆಯನ್ನು (Gen Z) ಆಕರ್ಷಿಸಲು ಇಂಗ್ಲಿಷ್ ರ‍್ಯಾಪ್ ಹಾಡನ್ನು ಬಳಸುವ ಉತ್ಸಾಹದಲ್ಲಿ, ಬಿಜೆಪಿಯ ಸೋಷಿಯಲ್ ಮೀಡಿಯಾ ತಂಡವು ಹಾಡಿನ ಸಾಹಿತ್ಯದ ಅರ್ಥವನ್ನು ಸರಿಯಾಗಿ ಪರಿಶೀಲಿಸದೆ ಈ ಎಡವಟ್ಟು ಮಾಡಿದೆ ಎಂದು ಹೇಳಲಾಗುತ್ತಿದೆ. NF ಅವರ The Search ಹಾಡು ಮಾನಸಿಕ ಒತ್ತಡ, ಆತಂಕ ಮತ್ತು ಸ್ವಯಂ ಸಂಘರ್ಷದ ಕುರಿತಾಗಿದ್ದು, ಇಂತಹ ಹಾಡನ್ನು ಪ್ರಧಾನಿ ಅವರ 'ಹೀರೋ ವಾಕ್' ದೃಶ್ಯಗಳಿಗೆ ಬಳಸಿರುವುದು ಅಚ್ಚರಿ ಮೂಡಿಸಿದೆ ಎಂದು ಹಲವರು ಹೇಳಿದ್ದಾರೆ.

ಸಂಸತ್ತಿನಲ್ಲಿ ನರೇಂದ್ರ ಮೋದಿ-ಮಲ್ಲಿಕಾರ್ಜುನ ಖರ್ಗೆ ನಡುವೆ ಲಘು ಹಾಸ್ಯ, ಹಸ್ತಲಾಘವ; ಅಂಬೇಡ್ಕರ್ ಜಯಂತಿ ವೇಳೆ ಅಪರೂಪದ ಕ್ಷಣ

ವಿರೋಧ ಪಕ್ಷದ ಪ್ರಮುಖ ನಾಯಕರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಾ, "ಕಳೆದ ಕೆಲವು ವರ್ಷಗಳಲ್ಲಿ ನೀಡಿದ ಭರವಸೆಗಳೆಲ್ಲವೂ ಸುಳ್ಳು ಎಂದು ಈ ವಿಡಿಯೋ ಸಾಬೀತುಪಡಿಸುತ್ತಿದೆ. 'ಮಿಲಿಯನ್ಸ್ ಆಫ್ ಲೈಸ್' ಎಂಬ ಸಾಲು ದೇಶದ ಜನರಿಗೆ ಮೋದಿ ಸರ್ಕಾರ ಮಾಡಿದ ವಂಚನೆಯನ್ನು ನೆನಪಿಸುತ್ತದೆ" ಎಂದು ವಿಪಕ್ಷಗಳು ಹೇಳಿವೆ.