Pune Horror: ಪುಣೆ ಪ್ರಕರಣ; ದೀದೀ ಎಂದು ಕರೆದು ಅತ್ಯಾಚಾರ ನಡೆಸಿದ !
ಪುಣೆಯ ಸ್ವರ್ಗೇಟ್ ಡಿಪೋದಲ್ಲಿ ನಿಂತಿರುವ ಸರ್ಕಾರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪುಣೆ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದು, ನ್ಯಾಯಾಲಯದ ಎದುರು ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿ ದತ್ತಾತ್ರೇಯ ಗಡೆಯನ್ನು ಮಾರ್ಚ್ 12 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಅತ್ಯಾಚಾರ ಆರೋಪಿಯ ಬಂಧನ

ಮುಂಬೈ: ಪುಣೆಯ ಸ್ವರ್ಗೇಟ್ ಡಿಪೋದಲ್ಲಿ ನಿಂತಿರುವ ಸರ್ಕಾರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ (Pune Horror) ಎಸಗಿದ ಆರೋಪಿಯನ್ನು ಪುಣೆ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದ್ದು, ಪೊಲೀಸರು ಶುಕ್ರವಾರ ಸಂಜೆ 6.15 ರ ಸುಮಾರಿಗೆ ಆರೋಪಿಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಟಿಎಸ್ ಗೈಗೋಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿ ದತ್ತಾತ್ರೇಯ ಗಡೆಯನ್ನು ಮಾರ್ಚ್ 12 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಪೊಲೀಸರ ಹೇಳಿಕೆಯ ಪ್ರಕಾರ ಆರೋಪಿ ದತ್ತಾತ್ರೇಯ ರಾಮದಾಸ್ ಗಡೆ 26 ವರ್ಷದ ಮಹಿಳೆಯನ್ನು 'ದೀದಿ' (ಸಹೋದರಿ) ಎಂದು ಕರೆದು ಸ್ವರ್ಗೇಟ್ ಡಿಪೋದಲ್ಲಿ ನಿಲ್ಲಿಸಿದ್ದ ಖಾಲಿ 'ಶಿವ ಶಾಹಿ' ಬಸ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಆರೋಪಿ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ದೂರು ನೀಡಿದವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡ್ರೋನ್‌ಗಳು ಮತ್ತು 100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ 13 ಪೊಲೀಸ್ ತಂಡ ಆರೋಪಿಯನ್ನು ಸೆರೆ ಹಿಡಿದು, ಪುಣೆ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. . ಪೊಲೀಸರು ನ್ಯಾಯಾಲಯಕ್ಕೆ ರಿಮಾಂಡ್ ಅರ್ಜಿಯನ್ನು ಸಲ್ಲಿಸಿ, ಆರೋಪಿಯನ್ನು 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿದ್ದರು. ನ್ಯಾಯಾಲಯ ಮಾರ್ಚ್ 12 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಾಥಮಿಕ ವೈದ್ಯಕೀಯ ವರದಿಯ ಪ್ರಕಾರ, ಆರೋಪಿಯು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಶಂಕಿಸಲಾಗಿದೆ.
ಫೆ. 25ರ ಬೆಳಗ್ಗೆ ಮಹಿಳೆ ಪ್ಲಾಟ್‌ಫಾರ್ಮ್‌ನಲ್ಲಿ ಪೈಥಾನ್‌ಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಮಹಿಳೆ ಬಳಿಗೆ ಬಂದು ಸಹೋದರಿ ಎಂದು ಕರೆದು ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿದ್ದಾನೆ. ಆಕೆಯನ್ನು ನಿಲ್ದಾಣದ ಆವರಣದಲ್ಲಿ ಬೇರೆಡೆ ನಿಲ್ಲಿಸಿದ್ದ ಶಿವಶಾಹಿ ಎಸಿ ಬಸ್ಸಿನ ಬಳಿಗೆ ಕರೆದೊಯ್ದಿದ್ದಾನೆ. ನಂತರ ಬಸ್ಸಿನೊಳಗಿನ ದೀಪಗಳು ಉರಿಯದ ಕಾರಣ ಮೊದಲು ಬಸ್ ಹತ್ತಲು ಹಿಂಜರಿದಳು, ಆದರೆ ಆ ವ್ಯಕ್ತಿ ಅದು ಸರಿಯಾದ ವಾಹನ ಎಂದು ಮನವೊಲಿಸಿ ಒಳಗೆ ಹೋಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ.ಅಲ್ಲದೇ ಈ ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.
ಈ ಸುದ್ದಿಯನ್ನೂ ಓದಿ: Pune Horror: ಪುಣೆ ಅತ್ಯಾಚಾರ ಪ್ರಕರಣ; ಸ್ನೀಫರ್ ಡಾಗ್, ಡ್ರೋನ್, ನೂರಕ್ಕೂ ಅಧಿಕ ಪೊಲೀಸರು, ಹೇಗಿತ್ತು ಆರೋಪಿ ಬಂಧನದ ರೋಚಕ ಕಾರ್ಯಾಚರಣೆ?
ನ್ಯಾಯಾಲಯದ ಎದುರು ಆರೋಪಿಯ ವರ ವಕೀಲ ವಾಜಿದ್ ಖಾನ್, ವಾದ ಮಾಡಿ ದೂರುದಾರರು ಸ್ವತಃ ಬಸ್ ಒಳಗೆ ಹೋಗಿದ್ದಾರೆ. ಪರಸ್ಪರ ಒಪ್ಪಿಗೆಯೊಂದಿಗೆ ಅವರ ನಡುವೆ ದೈಹಿಕ ಸಂಬಂಧ ನಡೆದಿದೆ. ಇದೀಗ ಮಹಿಳೆ ಅತ್ಯಾಚಾರ ಎಂದು ದೂರು ಸಲ್ಲಿಸಿದ್ದಾರೆ ಎಂದು ಹೇಳಿದರು.