ಜಿಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತಾಂತರ ಜಾಲ; ಆರು ಮಂದಿಯ ಬಂಧನ
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಬುರ್ಖಾ ಧರಿಸಲು, ಇಸ್ಲಾಂಗೆ ಮತಾಂತರವಾಗಲು ಸಹಪಾಠಿಗಳೇ ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದ ಬಳಿಕ ಇದೀಗ ಮಿರ್ಜಾಪುರದ ಜಿಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತಾಂತರ ಜಾಲವನ್ನು ಭೇದಿಸಿರುವ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ -
ಉತ್ತರಪ್ರದೇಶ: ಜಿಮ್ (gyms) ಕೇಂದ್ರಗಳಲ್ಲಿ ಮತಾಂತರಕ್ಕೆ (Religious conversion) ಪ್ರಯತ್ನಿಸುತ್ತಿದ್ದ ಆರೋಪದಲ್ಲಿ ಆರು ಮಂದಿಯನ್ನು ಉತ್ತರ ಪ್ರದೇಶದ (uttar pradesh) ಮಿರ್ಜಾಪುರದಲ್ಲಿ (Mirzapur) ಪೊಲೀಸರು ಬಂಧಿಸಿದ್ದಾರೆ. ಶನಿವಾರವಷ್ಟೇ ಮೊರಾದಾಬಾದ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಬುರ್ಖಾ ಧರಿಸಲು, ಇಸ್ಲಾಂಗೆ (Islam) ಮತಾಂತರವಾಗಲು ಸಹಪಾಠಿಗಳೇ ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದ ಬಳಿಕ ಇದೀಗ ಮಿರ್ಜಾಪುರದ ಜಿಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತಾಂತರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳಾ ಸಹಾಯವಾಣಿಗೆ ಬಂದ ದೂರಿನ ಆಧಾರದಲ್ಲಿ ಈ ದಾಳಿ ನಡೆದಿದೆ. ಪ್ರಮುಖ ಆರೋಪಿಯ ಮೊಬೈಲ್ ನಲ್ಲಿ 50ಕ್ಕೂ ಹೆಚ್ಚು ಮಹಿಳೆಯರ ಛಾಯಾಚಿತ್ರ ಮತ್ತು ವಿಡಿಯೊಗಳಿವೆ ಎನ್ನಲಾಗಿದೆ.
ಮಹಿಳಾ ಸಹಾಯವಾಣಿ 1090 ನಂಬರ್ ಗೆ ಕರೆ ಮಾಡಿದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಉತ್ತರ ಪ್ರದೇಶದ ಮಿರ್ಜಾಪುರದ ಪೊಲೀಸರು ಜಿಮ್ ಕೇಂದ್ರಗಳ ಮೇಲೆ ದಾಳಿ ನಡೆಸಿ ಧಾರ್ಮಿಕ ಮತಾಂತರ ಮತ್ತು ಸುಲಿಗೆ ಜಾಲವನ್ನು ಭೇದಿಸಿದ್ದಾರೆ.
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ; ಜೀವಂತವಾಗಿ ಸುಟ್ಟು ಹಾಕಿದ ಪಾಪಿಗಳು
ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸೋಮೆನ್ ವರ್ಮಾ, ಪ್ರಮುಖ ಆರೋಪಿಯ ಮೊಬೈಲ್ ನಲ್ಲಿ ಪಾಸ್ವರ್ಡ್ ಹೊಂದಿದ್ದ ಫೋಲ್ಡರ್ ನಲ್ಲಿ 50ಕ್ಕೂ ಹೆಚ್ಚು ಮಹಿಳೆಯರ ಛಾಯಾಚಿತ್ರಗಳು ಮತ್ತು ವಿಡಿಯೊಗಳು ಕಂಡು ಬಂದಿವೆ. ಎಲ್ಲ ಡಿಜಿಟಲ್ ಪುರಾವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಆರೋಪಿಯ ಫೋನ್ ನಲ್ಲಿ ವಿಹಾರ ಮತ್ತು ವಿವಾಹ ಸಮಾರಂಭಗಳ ತೆಗೆದಿರುವ ಮಹಿಳೆಯರ ಚಿತ್ರಗಳಿವೆ. ಆತ ಹಲವಾರು ಮಹಿಳೆಯರು, ಆರೋಪಿಗಳೊಂದಿಗೆ ಸಂಪರ್ಕ ಹೊಂದಿರುವುದು ಇದರಿಂದ ಬೆಳಕಿಗೆ ಬಂದಿದೆ. ಇದೊಂದು ಜಾಲದಂತೆ ಕಾರ್ಯನಿರ್ವಹಿಸುತ್ತಿದ್ದುದಾಗಿ ಅವರು ಹೇಳಿದರು.
ಪ್ರಮುಖ ಆರೋಪಿಯನ್ನು ಮೊಹಮ್ಮದ್ ಶೇಖ್ ಅಲಿ ಎಂದು ಗುರುತಿಸಲಾಗಿದ್ದು, ವಿಚಾರಣೆ ವೇಳೆ ಆತ ಆರಂಭದಲ್ಲಿ ತನ್ನ ಮೇಲಿನ ಎಲ್ಲ ಆರೋಪವನ್ನು ನಿರಾಕರಿಸಿದ್ದಾನೆ. ಆತನ ಸಂಪರ್ಕ ಜಾಲವನ್ನು ಆಧರಿಸಿ ಪೊಲೀಸರು ಮಿರ್ಜಾಪುರದಾದ್ಯಂತ ದಾಳಿ ನಡೆಸಿದ್ದು, ಈ ವೇಳೆ ಸರ್ಕಾರಿ ರೈಲ್ವೆ ಪೊಲೀಸ್ ಕಾನ್‌ಸ್ಟೆಬಲ್ ಶಾದಾಬ್ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಇಮ್ರಾನ್ ಮತ್ತು ಲಕ್ಕಿ ಎಂಬವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆಹಚ್ಚಲು ಲುಕೌಟ್ ನೊಟಿಸ್‌ಗಳನ್ನು ಹೊರಡಿಸಲಾಗಿದ್ದು, ಮಾಹಿತಿ ನೀಡುವವರಿಗೆ ಬಹುಮಾನಗಳನ್ನು ಘೋಷಿಸಲಾಗಿದೆ.
ಮತಾಂತರ ಜಾಲವು ಶ್ರೀಮಂತ ಕುಟುಂಬಗಳ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ. ಜಿಮ್ ನಲ್ಲಿ ಒಬ್ಬ ಸದಸ್ಯ ಮಹಿಳೆಯನ್ನು ಸಂಪರ್ಕಿಸುತ್ತಿದ್ದ. ಅವನು ವಿಫಲವಾದರೆ ಇನ್ನೊಬ್ಬ ಪ್ರಯತ್ನಿಸುತ್ತಿದ್ದ. ಈ ಪ್ರಯತ್ನಗಳು ವಿಫಲವಾದರೆ ಮಹಿಳೆಯರನ್ನು ಒಂದು ಜಿಮ್‌ನಿಂದ ಇನ್ನೊಂದು ಜಿಮ್‌ಗೆ ಕಳುಹಿಸಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರಿಗೆ ಉಚಿತ ಜಿಮ್ ತರಬೇತಿಯ ಆಮಿಷವೊಡ್ಡಿ, ತರಬೇತಿ ಅವಧಿಯಲ್ಲಿ ಅವರ ಛಾಯಾಚಿತ್ರಗಳನ್ನು ತೆಗೆದುಕೊಂಡು ಸಂಪರ್ಕಿಸಲಾಗುತ್ತಿತ್ತು. ಬಳಿಕ ಅವರ ವೈಯಕ್ತಿಕ ವಿಷಯಗಳನ್ನು ಕಲೆ ಹಾಕಿ ಅವರ ಮನವೊಲಿಸಿ . ಮಾರುಕಟ್ಟೆ, ದೇವಾಲಯ ಸೇರಿದಂತೆ ಹಲವು ಸ್ಥಳಗಳಿಗೆ ವಿಹಾರಕ್ಕಾಗಿ ಕರೆದುಕೊಂಡು ಹೋಗಲಾಗುತ್ತಿತ್ತು. ಮಾರುಕಟ್ಟೆ, ದೇವಾಲಯ, ದೇವಾಲಯಗಳು ಮತ್ತು ಇತರ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿ ಬಳಿಕ ರಾಜಿ ಮಾಡಿಕೊಳ್ಳಲು ಛಾಯಾಚಿತ್ರಗಳನ್ನು ಸಂಗ್ರಹಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ವೇಳೆ ಹಣ ನೀಡಲು ನಿರಾಕರಿಸಿದರೆ ಧಾರ್ಮಿಕ ಮತಾಂತರಕ್ಕಾಗಿ ಒತ್ತಾಯಿಸಲಾಗುತ್ತಿತ್ತು. ಕೆಲವರು ಭಯದಿಂದ ಹಣ ನೀಡಿದ್ದಾರೆ. ಈವರೆಗೆ ಕೇವಲ ಇಬ್ಬರು ಮಹಿಳೆಯರು ಔಪಚಾರಿಕ ದೂರುಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚನೆ ಮಾಡ್ತಾರೆ ಹುಶಾರ್! ಯಾಮಾರಿದ್ರೆ ಹಣವೆಲ್ಲ ಮಾಯ
ಪ್ರಕರಣಕ್ಕೆ ಸಂಬಂಧಿಸಿ ಸುಮಾರು 25 ರಿಂದ 30 ಮಹಿಳೆಯರನ್ನು ಪೊಲೀಸರು ಸಂಪರ್ಕಿಸಿದ್ದು, ಇವರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ವಿಹಾರಕ್ಕಾಗಿ ಬಳಸಲಾದ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮತಾಂತರದ ಬೆದರಿಕೆ ಒಡ್ಡಿ ಸುಮಾರು 5 ರಿಂದ 7 ಕೋಟಿ ರೂ. ಗಳನ್ನು ಆರೋಪಿಗಳು ಸಂಗ್ರಹಿಸಿದ್ದಾರೆ. ಇದನ್ನು ಬಳಸಿಕೊಂಡು ಜಿಮ್ ಕೇಂದ್ರಗಳನ್ನು ವಿಸ್ತರಿಸಲಾಗಿದೆ ಎಂದು ತನಿಖಾಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.