ರೋಹಿತ್ ಶರ್ಮ ಫಿಟ್ನೆಸ್ ಕಂಡು ದಂಗಾದ ಅಭಿಮಾನಿಗಳು
Rohit Sharma: ಇಂಡಿಯನ್ ಪ್ರೀಮಿಯರ್ ಲೀಗ್ 2026 ಮಾರ್ಚ್ 28 ರಂದು ಆರಂಭವಾಗಲಿದೆ. ಮುಂಬೈ ತಂಡವು 29 ರಂದು ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ತವರು ಮೈದಾನವಾದ ವಾಂಖೇಡೆ ಕ್ರೀಡಾಂಗಣದಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.
Rohit Sharma fittest -
ಮುಂಬಯಿ, ಮಾ.14: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(Rohit Sharma) ತಮ್ಮ ದೈಹಿಕ ಬದಲಾವಣೆಯೊಂದಿಗೆ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಕಾಣಿಸಿಕೊಳ್ಳಲು ಸಿದ್ಧರಾಗಿರುವ ಅವರು ಸಿಕ್ಸ್ ಪ್ಯಾಕ್ ಹೊಂದಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ಭಾರೀ ವೈರಲ್ ಆಗಿದೆ.
ಕಳೆದ ಐಪಿಎಲ್ ಋತುವಿನಲ್ಲಿ ರೋಹಿತ್ ಅವರನ್ನು ಕೆಲವು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಮಾತ್ರ ಬಳಸಿಕೊಳ್ಳಲಾಗಿತ್ತು. ಈ ಬಾರಿ ಅವರನ್ನು ಪೂರ್ಣ ಪ್ರಮಾಣದ ಆಟಗಾರನಾಗಿ ಬಳಸಿಕೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
"ರೋಹಿತ್ ಅವರಂತಹ ಅನುಭವಿ ಆಟಗಾರನನ್ನು ಬದಲಿ ಆಟಗಾರನಾಗಿ ಬಳಸಿಕೊಳ್ಳುವುದಕ್ಕೆ ಸೀಮಿತಗೊಳಿಸಬಾರದು, ಏಕೆಂದರೆ ಅವರ ಕ್ರಿಕೆಟ್ ಚಾತುರ್ಯವು ಮುಂಬೈ ಮೂಲದ ಫ್ರಾಂಚೈಸಿ ಫೀಲ್ಡಿಂಗ್ ಮಾಡುವಾಗ ಕಠಿಣ ಸಂದರ್ಭಗಳಲ್ಲಿ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ" ಎಂದು ಚೋಪ್ರಾ ಹೇಳಿದರು.
Rohit Sharma complete weight transformation.
— 𝐒𝐚𝐟𝐟𝐫𝐨𝐧 𝐒𝐚𝐠𝐚𝐫 𝐆𝐨𝐮𝐝 (@Sagar4BJP) March 10, 2026
This is true spirit of a sportsman. @ImRo45 take a bow. pic.twitter.com/moEA8r6bDg
ಹರ್ಭಜನ್ ಸಿಂಗ್ ಕೂಡ ರೋಹಿತ್ ಅವರನ್ನು ಬದಲಿ ಆಟಗಾರನನ್ನಾಗಿ ಆಡಿಸುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. "ರೋಹಿತ್ ಶರ್ಮಾ ಅವರನ್ನು ಕೇವಲ ಬ್ಯಾಟಿಂಗ್ ಮಾಡುವ 12 ನೇ ಆಟಗಾರನಾಗಿ ಬಳಸಲಾಗಿದೆ. ಆದರೆ ಅವರು ನಾಯಕರಾಗಿದ್ದಂತಹ ಆಟಗಾರ. ಅವರು ಮೈದಾನದಲ್ಲಿರಬೇಕು ಎಂದು ನಾನು ಭಾವಿಸುತ್ತೇನೆ. ಕಠಿಣ ಪಂದ್ಯಗಳಲ್ಲಿ, ನೀವು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ, ನಾಯಕನಿಗೆ ಸಲಹೆ ಅಗತ್ಯವಿದ್ದಾಗ, ರೋಹಿತ್ ಅವರು ಹಾರ್ದಿಕ್ ಪಾಂಡ್ಯ ಪರವಾಗಿ ಅದನ್ನು ಮಾಡಬಹುದು" ಎಂದು ಹರ್ಭಜನ್ ಜಿಯೋಸ್ಟಾರ್ ಮೂಲಕ ಹೇಳಿದರು.
Batting highlight of Rohit Sharma from today's practice session at shivaji park📹
— 𝐑𝐮𝐬𝐡𝐢𝐢𝐢⁴⁵ (@rushiii_12) March 7, 2026
The Hitman coming for IPL🐐 pic.twitter.com/p3HmQNDhHt
ಇಂಡಿಯನ್ ಪ್ರೀಮಿಯರ್ ಲೀಗ್ 2026 ಮಾರ್ಚ್ 28 ರಂದು ಆರಂಭವಾಗಲಿದೆ. ಮುಂಬೈ ತಂಡವು 29 ರಂದು ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ತವರು ಮೈದಾನವಾದ ವಾಂಖೇಡೆ ಕ್ರೀಡಾಂಗಣದಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.