ಲಖನೌ, ಜ. 23: ಉತ್ತರ ಪ್ರದೇಶದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮತಾಂತರ ದಂಧೆಯಲ್ಲಿ (Conversion Racket) 50ಕ್ಕೂ ಹೆಚ್ಚು ಹಿಂದೂ ಮಹಿಳೆಯರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಹಿಳೆಯೊಬ್ಬಳು ಜಿಮ್ ಮಾಲಕನ ವಿರುದ್ಧ ದೂರು ದಾಖಲಿಸಿದ ಬಳಿಕೆ ಈ ವಿಚಾರ ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ (Uttar Pradesh) ಬಹು ಜಿಮ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ಸಂಘಟಿತ, ಡಿಜಿಟಲ್ ಚಾಲಿತ ಧಾರ್ಮಿಕ ಮತಾಂತರ ಜಾಲದ ಬೆಳಕಿಗೆ ಬಂದಿದೆ.
ಈ ನೆಟ್‌ವರ್ಕ್ ಜಿಮ್‌ಗಳನ್ನು ನೇಮಕಾತಿ ಕೇಂದ್ರಗಳಾಗಿ ಬಳಸಿಕೊಂಡು, ಸಾಮಾಜಿಕ ಮಾಧ್ಯಮವನ್ನು ಪ್ರಮುಖ ಸಾಧನವಾಗಿ ಬಳಸಲಾಗಿದೆ. ಸಂತ್ರಸ್ತರನ್ನು ಗುರುತಿಸಲು, ಹಿಂಬಾಲಿಸಲು ಮತ್ತು ಸಂಪರ್ಕಿಸಲು ವ್ಯವಸ್ಥಿತ ಮತ್ತು ಸಂಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ.
ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತೆ ಅರೆಸ್ಟ್
ಈ ಕಾರ್ಯಾಚರಣೆಯಲ್ಲಿ ಸನ್ನೋ ಎಂಬ ಮಹಿಳೆ ಕಿಂಗ್ ಪಿನ್ ಎಂದು ಗುರುತಿಸಲಾಗಿದೆ. ಆಕೆ ಮುಂಚೂಣಿ ಕಾರ್ಯನಿರ್ವಾಹಕಳಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಅದರ ಜತೆಗೆ ಹಲವು ಪುರುಷರು ನೆಟ್‌ವರ್ಕ್‌ನ ಮಾಸ್ಟರ್‌ಮೈಂಡ್ ಮತ್ತು ಪ್ರಮುಖ ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸನ್ನೋ ಮಹಿಳೆಯರೊಂದಿಗೆ ಸುಲಭವಾಗಿ ಸ್ನೇಹ ಬೆಳೆಸಿ, ಅವರ ನಂಬಿಕೆಯನ್ನು ಗಳಿಸುತ್ತಿದ್ದಳು. ಕ್ರಮೇಣ ಅವರನ್ನು ನೆಟ್‌ವರ್ಕ್‌ಗೆ ಸಂಬಂಧಿಸಿದ ಪುರುಷರೊಂದಿಗೆ ಪರಿಚಯ ಮಾಡಿಸುತ್ತಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರು, ಯುವತಿಯರು ಬಲೆಗೆ ಬೀಳುವ ಮೊದಲು ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಮತ್ತು ಅನುಮಾನವನ್ನು ಕಡಿಮೆ ಮಾಡುವಲ್ಲಿ ಸನ್ನೋ ಪಾತ್ರ ನಿರ್ಣಾಯಕವಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಗಳು ಗುರಿಗಳನ್ನು ತಮ್ಮ ನಡುವೆ ಹಂಚಿಕೊಂಡಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಜಿಮ್‌ನಲ್ಲಿ ಹುಡುಗಿಯನ್ನು ಆಕರ್ಷಿಸಲು ಸಾಧ್ಯವಾಗದಿದ್ದರೆ, ಜವಾಬ್ದಾರಿಯನ್ನು ನೆಟ್‌ವರ್ಕ್ ನಡೆಸುವ ಅಥವಾ ಅದರೊಂದಿಗೆ ಸಂಪರ್ಕ ಹೊಂದಿರುವ ಇನ್ನೊಂದು ಜಿಮ್‌ಗೆ ಹಸ್ತಾಂತರ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ತನಿಖೆಯ ಸಮಯದಲ್ಲಿ, ಬಂಧಿತ ಆರೋಪಿಗಳಲ್ಲಿ ಒಬ್ಬನ ಮೊಬೈಲ್ ಫೋನ್‌ನಿಂದ ಪೊಲೀಸರು ವಿಶೇಷ ಫೋಲ್ಡರ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಫೋಲ್ಡರ್‌ನಲ್ಲಿ ಫೋಟೊಗಳು, ವಿಡಿಯೊಗಳು ಮತ್ತು ಚಾಟ್ ದಾಖಲೆಗಳು ಸೇರಿದಂತೆ ನೂರಾರು ಡಿಜಿಟಲ್ ಫೈಲ್‌ಗಳಿವೆ ಎಂದು ವರದಿಯಾಗಿದೆ. ತನಿಖೆಯ ಭಾಗವಾಗಿ ಇದನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವು ಮಹಿಳೆಯರು, ಯುವತಿಯರನ್ನು ಯಶಸ್ವಿಯಾಗಿ ಬಲೆಗೆ ಬೀಳಿಸಿ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಲಾಗಿದೆ ಎನ್ನಲಾಗಿದೆ.
ರಾಜ್ಯದ ಖ್ಯಾತ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್; 1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ ಮಹಿಳೆ ಅರೆಸ್ಟ್
ಇನ್ನು ಈ ಜಾಲದ ಸೂತ್ರಧಾರ ಲಕ್ಕಿ ಅಲಿ ಎಂದು ಗುರುತಿಸಲಾಗಿದ್ದು, ಅವನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಅವನು ಜಿಮ್‌ಗಳ ಮೂಲಕ ಕಾರ್ಯಾಚರಣೆಗಳನ್ನು ಸಂಘಟಿಸುತ್ತಿದ್ದ ಮತ್ತು ಪ್ರಮುಖ ಕಾರ್ಯಕರ್ತರನ್ನು ನಿರ್ವಹಿಸುತ್ತಿದ್ದ ಎಂದು ಮೂಲಗಲು ತಿಳಿಸಿವೆ.
ತಲೆಮರೆಸಿಕೊಂಡಿರುವ ಲಕ್ಕಿ ಅಲಿ ಮತ್ತು ಮತ್ತೊಬ್ಬ ಆರೋಪಿ ಇಮ್ರಾನ್ ಖಾನ್‌ನ ಸುಳಿವು ನೀಡಿದವರಿಗೆ ತಲಾ 25,000 ರು. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಇಮ್ರಾನ್ ಖಾನ್ ತನ್ನ ಸಿಕ್ಸ್ ಪ್ಯಾಕ್ ದೇಹವನ್ನು ಪ್ರದರ್ಶಿಸುವ ಮೂಲಕ ಹಿಂದೂ ಮಹಿಳೆಯರನ್ನು ಆಕರ್ಷಿಸುತ್ತಿದ್ದ. ಅವನು ಅಂತಹ ಫೋಟೊಗಳನ್ನು ಮತಾಂತರ ದಂಧೆಗೆ ಬಳಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಇಲ್ಲಿಯವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ.