ಮುಂಬೈ: ಮಹಾರಾಷ್ಟ್ರ(Maharashtra)ದ ಸತಾರ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳು ನಿರಂತರ ಅತ್ಯಾಚಾರ(Rape) ಎಸಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವೈದ್ಯೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಮತ್ತೊಂದು ತಿರುವ ಪಡೆದುಕೊಂಡಿದೆ. ತನಿಖೆಯಲ್ಲಿ ಯುವತಿ ಬರೆದಿಟ್ಟಿರುವ ನಾಲ್ಕು ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಬೆಚ್ಚಿ ಬೀಳಿಸುವ ಅಂಶವೊಂದು ಬೆಳಕಿಗದೆ ಬಂದಿದೆ. ಹೌದು.. 26 ವರ್ಷದ ವೈದ್ಯೆಯು ಬರೆದ ಡೆತ್ ನೋಟ್ ಲ್ಲಿ, ಆಕೆ ಸುಳ್ಳು ವೈದ್ಯಕೀಯ ಪ್ರಮಾಣಪತ್ರ ನೀಡಲು ನಿರಾಕರಿಸಿದ ನಂತರ, ಒಬ್ಬ ಸಂಸದರೊಬ್ಬ ಆಕೆಗೆ ಪರೋಕ್ಷವಾಗಿ ಬೆದರಿಸಿದ್ದಾನೆ ಎಂಬುದನ್ನೂ ಉಲ್ಲೇಖಿಸಲಾಗಿದೆ.
ಆತ್ಮಹತ್ಯೆಗೂ ಮುನ್ನ ವೈದ್ಯೆ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ, "ಪೊಲೀಸ್ ಪ್ರಕರಣಗಳಲ್ಲಿ ಆರೋಪಿತರಿಗೆ ನಕಲಿ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು. ಇದಕ್ಕೆ ನಿರಾಕರಿಸಿದಾಗ ಕಿರುಕುಳ ನೀಡಿದ್ದರು. ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೇ ಪ್ರಕರಣವೊಂದರಲ್ಲಿ ಸಂಸತ್ ಸದಸ್ಯ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಕೂಡ ಒತ್ತಡ ಹೇರಿದ್ದಾರೆ," ಎಂದು ಬರೆದಿದ್ದಾರೆ ಎಂಬುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿಯನ್ನು ಓದಿ: Viral News: ಗಲ್ಲಾ ಪೆಟ್ಟಿಗೆಗೇ ಕೈ ಇಟ್ಟ ಪೊಲೀಸರು... ಸಾಲದಕ್ಕೆ ಕಪಾಳಮೋಕ್ಷ ಮಾಡಿ ದರ್ಪ- ವಿಡಿಯೊ ನೋಡಿ
ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ 26 ವರ್ಷದ ಯುವತಿ ಮೇಲೆ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದ್ನೆ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಮಾಡಿದ್ದಾರೆ. ಇದರ ಜತೆಗೆ ಬೇರೆ ಬೇರೆ ಪ್ರಕರಣದಲ್ಲಿ ಸಂಸದರು ಹಾಗೂ ಮನೆ ಮಾಲೀಕರು ನೀಡಿದ್ದ ಕಿರುಕುಳದ ಬಗ್ಗೆ ವಿವರವಾಗಿ ಪ್ರತ್ಯೇಕ ಪತ್ರಯೊಂದನ್ನು ಬರೆದಿದ್ದರು. 5 ತಿಂಗಳಿಗೂ ಹೆಚ್ಚು ಕಾಲ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ವೈದ್ಯೆ ಅಂಗೈಯಲ್ಲಿ ಬರೆದುಕೊಂಡಿದ್ದರು. ಇನ್ನು ಈ ವೈದ್ಯೆಯು ಆಸ್ಪತ್ರೆಯಲ್ಲಿ 23 ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದರು ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕಾದ ಬಾಂಡ್ ಅವಧಿಯನ್ನು ಪೂರ್ಣಗೊಳಿಸಲು ಕೇವಲ ಒಂದು ತಿಂಗಳು ಬಾಕಿ ಇತ್ತು, ನಂತರ ಸ್ನಾತಕೋತ್ತರ ಪದವಿ ಪಡೆಯಬೇಕು ಎಂದು ಕನಸು ಕಂಡಿದ್ದರು.
"ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕರೆತರದೇ ಫಿಟ್ನೆಸ್ ಪ್ರಮಾಣಪತ್ರ ನೀಡುವಂತೆ ಒತ್ತಡ ಹೇರಿದ್ದರು. ಇದಕ್ಕೆ ನಿರಾಕರಿಸಿದಾಗ, ಬಾಡ್ನೆ ಮತ್ತು ಇತರರು ಹಲ್ಲೆ ಮಾಡಿದ್ದರು. ಮತ್ತೊಂದು ಘಟನೆಯಲ್ಲಿ “ನಾನು ಸುಳ್ಳು ಪ್ರಮಾಣಪತ್ರ ನೀಡಲು ನಿರಾಕರಿಸಿದ ನಂತರ, ಸಂಸದನ ಇಬ್ಬರು ಸಹಾಯಕರು ಆಸ್ಪತ್ರೆಗೆ ಬಂದು ನನ್ನನ್ನು ಫೋನ್‌ನಲ್ಲಿ ಅವರೊಂದಿಗೆ ಮಾತನಾಡುವಂತೆ ಒತ್ತಾಯಿಸಿದರು. ಸಂಸದನೂ ನನಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾನೆ,” ಎಂದು ವೈದ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಇಷ್ಟೇ ಅಲ್ಲದೇ, ಆ ಪತ್ರದಲ್ಲಿ ಆಕೆಯ ಮನೆ ಮಾಲೀಕ ಪ್ರಶಾಂತ್ ಬಂಕರ್ ಕೂಡ ಕಿರುಕುಳ ನೀಡಿದ್ದಾನೆಂದು ವೈದ್ಯೆ ತಿಳಿಸಿದ್ದಾಳೆ. “ಈ ಬಗ್ಗೆ ಅವಳು ಎರಡು ಮೂರು ಬಾರಿ ಪತ್ರದ ಮೂಲಕ ದೂರು ನೀಡಿದ್ದರೂ, ಎಸ್‌ಪಿ ಮತ್ತು ಡಿಎಸ್‌ಪಿಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ," ವೈದ್ಯಯ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಈವರೆಗೆ ದೊರೆತ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುನಿಲ್ ಫುಲಾರಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.