ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming Case: ಐಎಎಸ್ ಅಧಿಕಾರಿಯಿಂದ ಲೈಂಗಿಕ ಕಿರುಕುಳ- ಬೇಸತ್ತ ಯುವಕ ಆತ್ಮಹತ್ಯೆ

ಕಳೆದ ಗುರುವಾರ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಟಾಲೋ ಪೋಟಮ್ ಗೆ ಲುಕ್‌ಔಟ್ ನೊಟೀಸ್ ಜಾರಿ ಮಾಡಲಾಗಿದೆ. ಅಧಿಕಾರಿ ವಿರುದ್ಧ ಯುವಕನ ಕುಟುಂಬದವರು ಮಾನಸಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.

ಅರುಣಾಚಲ ಪ್ರದೇಶ: ಯುವಕನ ಆತ್ಮಹತ್ಯೆ ಪ್ರಕರಣಕ್ಕೆ (Self Harming Case) ಸಂಬಂಧಿಸಿ ಐಎಎಸ್ ಅಧಿಕಾರಿಯೊಬ್ಬರಿಗೆ ಲುಕ್‌ಔಟ್ ನೊಟೀಸ್ ಜಾರಿ (Lookout notice against IAS officer) ಮಾಡಲಾಗಿದೆ. ಅರುಣಾಚಲ ಪ್ರದೇಶದಲ್ಲಿ (arunachal pradesh) ಕಳೆದ ಗುರುವಾರ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನು. ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಟಾಲೋ ಪೋಟಮ್ (IAS officer Talo Potom) ವಿರುದ್ಧ ಯುವಕನ ಕುಟುಂಬದವರು ಮಾನಸಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದು ಎಫ್ ಐಆರ್ ದಾಖಲಾಗಿದೆ.

ಯುವಕನ ಆತ್ಮಹತ್ಯೆಗೆ ಸಂಬಂಧಿಸಿ ಎಫ್‌ಐಆರ್‌ನಲ್ಲಿ ಐಎಎಸ್ ಅಧಿಕಾರಿ ಟಾಲೋ ಪೋಟಮ್ ಹೆಸರು ಸೇರ್ಪಡೆಯಾದ ಬಳಿಕ ಅರುಣಾಚಲ ಪ್ರದೇಶ ಪೊಲೀಸರು ಆತನ ವಿರುದ್ಧ ಲುಕ್‌ಔಟ್ ನೊಟೀಸ್ ಜಾರಿ ಮಾಡಿದ್ದಾರೆ.ಅಕ್ಟೋಬರ್ 23 ಗುರುವಾರ 19 ವರ್ಷದ ಯುವಕನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಐಎಎಸ್ ಅಧಿಕಾರಿ ಟಾಲೋ ಪೋಟಮ್ ಅವರ ಹೆಸರು ಸೇರ್ಪಡೆಯಾದ ಅನಂತರ ಅರುಣಾಚಲ ಪ್ರದೇಶ ಪೊಲೀಸರು ಆತನ ವಿರುದ್ಧ ಲುಕ್‌ಔಟ್ ನೊಟೀಸ್ ಜಾರಿಗೊಳಿಸಿದರು.

ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪೋಟಮ್ ಘಟನೆ ಬಳಿಕ ನಾಪತ್ತೆಯಾಗಿದ್ದಾನೆ. ಈತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಕೇಳಿ ಬಂದಿದೆ. ಐಎಎಸ್ ಅಧಿಕಾರಿಯನ್ನು ಬಂಧಿಸುವವರೆಗೆ ಯುವಕನ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಯುವಕನ ಹಿಡಿದಿದೆ.

ಯುವಕ ಸಾವನ್ನಪ್ಪಿದ ಕೆಲವು ಗಂಟೆಗಳ ಬಳಿಕ ಗ್ರಾಮೀಣ ಕಾಮಗಾರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಲಿಕ್ವಾಂಗ್ ಲೋವಾಂಗ್ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎರಡು ಘಟನೆಗಳು ಅರುಣಾಚಲ ಪ್ರದೇಶದಾದ್ಯಂತ ಆಘಾತ ಉಂಟು ಮಾಡಿದೆ.

ಯುವಕನ ಕೊನೆಯ ಪತ್ರ ಸಿಕ್ಕಿದ್ದು, ಇದರಲ್ಲಿ ಆತ ಸಂಬಂಧಗಳಲ್ಲಿ ಆಗಿರುವ ವಂಚನೆ, ಹಣದ ವಹಿವಾಟಿನಲ್ಲಿ ಆಗಿರುವ ನಷ್ಟ, ತನಗಿದ್ದ ಬೆದರಿಕೆಗಳ ಕುರಿತು ಉಲ್ಲೇಖಿಸಿದ್ದಾನೆ. ಅಲ್ಲದೇ ತಾನು ಎಚ್‌ಐವಿ ಸೋಂಕಿಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾನೆ. ತನ್ನ ಸಾವಿಗೆ ಟಾಲೋ ಪೋಟೋಮ್ ಅವರೇ ಕಾರಣ ಎಂದು ಆರೋಪಿಸಿರುವ ಯುವಕ, ನನ್ನನ್ನು ಈ ಹುದ್ದೆಗೆ ನೇಮಿಸದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಅವರಿಂದಾಗಿ ನಾನು ಮಾಡಬಾರದ ಕಾರ್ಯವನ್ನೆಲ್ಲ ಮಾಡಿದೆ. ಈಗ ನನಗೆ ಬದುಕಲು ಯಾವುದೇ ಮಾರ್ಗ ಉಳಿದಿಲ್ಲ ಎಂದು ಹೇಳಿದ್ದಾನೆ.

ಯುವಕನ ತಂದೆ ನಿರ್ಜುಲಿ ಅವರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೋಟೋಮ್ ಮತ್ತು ಲೋವಾಂಗ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಲೈಂಗಿಕ ಶೋಷಣೆ ಮತ್ತು ಮಾನಸಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಅವರು ಎಫ್‌ಐಆರ್ ದಾಖಲಿಸಿದ ಬಳಿಕ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿತು.

ಎಸ್‌ಐಟಿ ರಚನೆ

ಪೋಟೋಮ್ ಸೇರಿದಂತೆ ಹಿರಿಯ ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಅವಳಿ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಅರುಣಾಚಲ ಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ.

ಈ ಕುರಿತು ಇಟಾನಗರ ಉಪ ಪೊಲೀಸ್ ಮಹಾನಿರ್ದೇಶಕ ತುಮ್ಮೆ ಅಮೋ ಅವರು ಶನಿವಾರ ದೃಢಪಡಿಸಿದ್ದು, ಎಸ್‌ಐಟಿಗೆ ಇಟಾನಗರ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಕೆಂಗೊ ಡಿರ್ಚಿ ನೇತೃತ್ವ ವಹಿಸಿದ್ದಾರೆ. ಪೊಟೊಮ್ ಇನ್ನೂ ತಲೆಮರೆಸಿಕೊಂಡಿದ್ದಾನೆ ಮತ್ತು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಎರಡನೇ ಆರೋಪಿ ಲೋವಾಂಗ್ ಕೂಡ ಎಚ್‌ಐವಿ ಪಾಸಿಟಿವ್ ಎಂದು ತಿಳಿದುಬಂದಿದೆ. ಈ ಕುರಿತು ಡಿರ್ಚಿ ಮತ್ತು ಅವರ ತಂಡ ಪೊಲೀಸ್ ವರಿಷ್ಠಾಧಿಕಾರಿ ತಿರಪ್ ಅವರೊಂದಿಗೆ ಸೇರಿ ತನಿಖೆ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಲೋವಾಂಗ್‌ನ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ.

ಬಂಧನಕ್ಕೊಳಗಾದ ಬಳಿಕ ಪೋಟೊಮ್ ಎಚ್‌ಐವಿ ಪರೀಕ್ಷೆ ನಡೆಸಲಾಗುತ್ತದೆ. ಶುಕ್ರವಾರ ಪೋಟೊಮ್‌ನ ಇಟಾನಗರ ನಿವಾಸದ ಮೇಲೆ ಪೊಲೀಸ್ ತಂಡ ದಾಳಿ ನಡೆಸಿದೆ. ಪೊಟೊಮ್ ತನ್ನ ಸಿಮ್ ಕಾರ್ಡ್‌ಗಳಲ್ಲಿ ಒಂದನ್ನು ಹೊಸ ಮೊಬೈಲ್ ಫೋನ್‌ಗೆ ಸೇರಿಸಿ ಅದನ್ನು ಆತ ಮಲಗುವ ಕೋಣೆಯಲ್ಲಿ ಬಿಟ್ಟಿದ್ದಾನೆ. ಎರಡನೇ ಸಿಮ್ ಕಾರ್ಡ್ ಕೇರ್‌ಟೇಕರ್ ಬಳಿ ಸಿಕ್ಕಿದೆ ಎಂದು ಎಸ್‌ಡಿಪಿಒ ಡಿರ್ಚಿ ತಿಳಿಸಿದ್ದಾರೆ.

ಇದನ್ನೂ ಓದಿ: Self Harming Case: ಸರ್ಕಾರಿ ಆಸ್ಪತ್ರೆ ವೈದ್ಯೆ ಆತ್ಮಹತ್ಯೆ ಕೇಸ್; ಡೆತ್‌ನೋಟ್‌ನಲ್ಲಿದೆ ಸಂಸದನ ಹೆಸರು!

ಪೋಟೊಮ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ), 271 ಮತ್ತು 272/3(5) (ಸೋಂಕನ್ನು ಹರಡುವ ಸಾಧ್ಯತೆಯ ನಿರ್ಲಕ್ಷ್ಯ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author