ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌-ABVP ನಾಯಕಿ ಸೇರಿದಂತೆ ಇಬ್ಬರ ಬಂಧನ

ಒಡಿಶಾದ ಬಾಲಸೋರ್‌ ನಲ್ಲಿ ನಡೆದ ಬಿಎಡ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಬಿವಿಪಿ ನಾಯಕಿ ಸೇರಿದಂತೆ ಇಬ್ಬರ ಬಂಧಿಸಲಾಗಿದೆ. ಶಿಕ್ಷಕನ ವಿರುದ್ಧದ ಲೈಂಗಿಕ ಕಿರುಕುಳ ದೂರಿನ ಬಗ್ಗೆ ಕಾಲೇಜು ಕ್ರಮ ಕೈಗೊಳ್ಳದ ಕಾರಣ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಜುಲೈ ತಿಂಗಳ ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಬಿಎಡ್ ವಿದ್ಯಾರ್ಥಿನಿ ಆತ್ಮಹತ್ಯೆ-ಎಬಿವಿಪಿ ನಾಯಕಿ ಅರೆಸ್ಟ್

ಬಾಲಸೋರ್‌: ಕಾಲೇಜು ವಿದ್ಯಾರ್ಥಿನಿ (colleage student) ಆತ್ಮಹತ್ಯೆ (self harming case) ಪ್ರಕರಣಕ್ಕೆ ಸಂಬಂಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಾಯಕಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಶಿಕ್ಷಕ ವಿರುದ್ಧದ ಲೈಂಗಿಕ ಕಿರುಕುಳ (sexual harassment) ದೂರಿನ ಬಗ್ಗೆ ಕಾಲೇಜು ಕ್ರಮ ಕೈಗೊಳ್ಳದ ಕಾರಣ 20 ವರ್ಷದ ಬಾಲಸೋರ್‌ನಲ್ಲಿ (Balasore) ಕಾಲೇಜು ವಿದ್ಯಾರ್ಥಿನಿ ಜುಲೈ ತಿಂಗಳ ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ಒಡಿಶಾ ಜಂಟಿ ಕಾರ್ಯದರ್ಶಿ ಮತ್ತು ಇನ್ನೋರ್ವ ವ್ಯಕ್ತಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಹಿರಿಯ ಅಧ್ಯಾಪಕ ಸದಸ್ಯರ ವಿರುದ್ಧದ ಲೈಂಗಿಕ ಕಿರುಕುಳ ದೂರಿನ ಬಗ್ಗೆ ಕಾಲೇಜು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ನೊಂದ ವಿದ್ಯಾರ್ಥಿನಿ ಜುಲೈ ತಿಂಗಳ ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಒಡಿಶಾ ಪೊಲೀಸರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ರಾಜ್ಯ ಜಂಟಿ ಕಾರ್ಯದರ್ಶಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರ ಕಚೇರಿಯ ಹೊರಗೆ ಎರಡನೇ ವರ್ಷದ ಬಿಇಡಿ ವಿದ್ಯಾರ್ಥಿನಿ ಜುಲೈ ತಿಂಗಳ ಆರಂಭದಲ್ಲಿ ಬೆಂಕಿ ಹಚ್ಚಿಕೊಂಡಾಗ ಎಬಿವಿಪಿ ನಾಯಕ ಸುಭತ್ ಸಂದೀಪ್ ನಾಯಕ್ ಮತ್ತು ಜ್ಯೋತಿ ಪ್ರಕಾಶ್ ಬಿಸ್ವಾಲ್ ಸ್ಥಳದಲ್ಲಿದ್ದರು. ಘಟನೆಯಿಂದ ಶೇ. 90ರಷ್ಟು ಸುಟ್ಟ ಗಾಯಗಳಾಗಿ ವಿದ್ಯಾರ್ಥಿನಿ ಎರಡು ದಿನಗಳ ಬಳಿಕ ಸಾವನ್ನಪ್ಪಿದಳು, ಇದು ಒಡಿಶಾದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಭಾಗದ ಮುಖ್ಯಸ್ಥ (ಎಚ್‌ಒಡಿ) ಸಮೀರ್ ರಂಜನ್ ಸಾಹೂ ವಿರುದ್ಧ ಪದೇ ಪದೇ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ ಅನಂತರ ವಿದ್ಯಾರ್ಥಿನಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ. ಪ್ರಾಂಶುಪಾಲ ದಿಲ್ಲಿಪ್ ಘೋಷ್ ನೇತೃತ್ವದ ಕಾಲೇಜು ಆಡಳಿತ ಮಂಡಳಿಯು ಈ ಘಟನೆಯನ್ನು ನಿರ್ಲಕ್ಷಿಸಿತ್ತು. ಸಾಹೂ ನಿರಂತರವಾಗಿ ಲೈಂಗಿಕವಾಗಿ ವಿದ್ಯಾರ್ಥಿನಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಸಹಕರಿಸದೇ ಇದ್ದರೆ ಶೈಕ್ಷಣಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಬೆದರಿಕೆ ಹಾಕುತ್ತಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜಿನ ಆಂತರಿಕ ದೂರು ಸಮಿತಿ (ಐಸಿಸಿ) ಗೆ ನೀಡಿದ ದೂರನ್ನು ಮಾನ್ಯ ಮಾಡದ ಕಾರಣ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಆಂತರಿಕ ದೂರು ಸಮಿತಿ ಸಭೆಯಲ್ಲಿ ಆಕೆ ತನ್ನ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರಲಾಗಿದೆ. ಸಾಹೂ ಮೇಲಿನ ಆರೋಪಗಳನ್ನು ಹಿಂಪಡೆಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಾಂಶುಪಾಲರು ಆಕೆಗೆ ಬೆದರಿಕೆ ಹಾಕಿದ್ದರು ಎಂದು ಆಕೆಯ ಕುಟುಂಬ ಎಫ್‌ಐಆರ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: Tamannaah Bhatia: ವಿರಾಟ್ ಕೊಹ್ಲಿ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ನಟಿ ತಮನ್ನಾ ಹೇಳಿದ್ದೇನು?

ಇಷ್ಟು ಮಾತ್ರವಲ್ಲದೆ ಎಚ್‌ಒಡಿ ಸಾಹೂ ವಿದ್ಯಾರ್ಥಿನಿಯ ವಿರುದ್ಧ ಇತರ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಲೇಜು ಆಡಳಿತ ಮಂಡಳಿ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜು ಪ್ರಾಂಶುಪಾಲರು ಮತ್ತು ಎಚ್‌ಒಡಿ ಸಾಹೂ ಈ ಇಬ್ಬರನ್ನೂ ಮೊದಲೇ ಬಂಧಿಸಿ ಅವರ ಹುದ್ದೆಗಳಿಂದ ಅಮಾನತುಗೊಳಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ, ಲೈಂಗಿಕ ಕಿರುಕುಳ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದಿರುವುದು ಸೇರಿದಂತೆ ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.