ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಶ್ಲೀಲ ವಿಡಿಯೊ ನೋಡುತ್ತ ಅಪ್ರಾಪ್ತ ವಯಸ್ಸಿನ ಪುತ್ರಿ ಮೇಲೆ 4 ವರ್ಷ ಅತ್ಯಾಚಾರ ಎಸಗಿದ ಕಾಮುಕ ತಂದೆ; ದೇಶವೇ ತಲೆತಗ್ಗಿಸುವ ಘಟನೆ ಬೆಳಕಿಗೆ ಬಂದಿದ್ದೇಗೆ?

Physical Abuse: ಗುಜರಾತ್‌ನಲ್ಲಿ ಕಾಮುಕನೊಬ್ಬ ತನ್ನ ಅಪ್ರಾಪ್ತ ಪುತ್ರಿಯ ಮೇಲೆ 4 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿರುವ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ. ನಿರಂತರ ದೌರ್ಜನ್ಯದಿಂದ ಬೇಸತ್ತ ಆಕೆ ಮನೆಯಿಂತ ತಪ್ಪಿಸಿಕೊಳ್ಳುವ ಮೂಲಕ ಪ್ರಕರಣ ಹೊರ ಜಗತ್ತಿಗೆ ಗೊತ್ತಾಗಿದೆ.

ಸಾಂದರ್ಭಿಕ ಚಿತ್ರ.

ಗಾಂಧಿನಗರ, ಜ. 31: ಲವೊಮ್ಮೆ ತಂದೆ-ಮಗಳ ಸಂಬಂಧಕ್ಕೆ ಬೆಲೆಯೇ ಇಲ್ಲ ಎನ್ನುವಂತಹ, ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆ ಆಗಾಗ ನಡೆಯುತ್ತದೆ (Crime News). ಅದಕ್ಕೆ ತಾಜಾ ಉದಾಹರಣೆ ಈ ಘಟನೆ. ಗುಜರಾತ್‌ನಲ್ಲಿ ಕಾಮುಕನೊಬ್ಬ ತನ್ನ ಅಪ್ರಾಪ್ತ ಪುತ್ರಿಯ ಮೇಲೆ 4 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿರುವ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ (Physical Abuse). ನಿರಂತರ ದೌರ್ಜನ್ಯದಿಂದ ಬೇಸತ್ತ ಆಕೆ ಮನೆಯಿಂತ ತಪ್ಪಿಸಿಕೊಳ್ಳುವ ಮೂಲಕ ನರಕದಿಂದ ಹೊರ ಬಂದಿದ್ದು, ಆ ಮೂಲಕ ಪ್ರಕರಣ ಹೊರ ಜಗತ್ತಿಗೆ ಗೊತ್ತಾಗಿದೆ.

ರಾಜ್‌ಕೋಟ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕ್ಯಾನ್ಸರ್‌ ಬಾಧಿತ ಪತ್ನಿ ಕೆಲವು ಸಮಯಗಳಿಂದ ಹಾಸಿಗೆ ಹಿಡಿದಿದ್ದು ಪತಿ ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ

ಉಪ್ಲೆಟಾದ ಮನೆಯೊಂದರಿಂದ 19 ವರ್ಷದ ಯುವತಿ ಇದ್ದಕ್ಕಿದ್ಧಂತೆ ನಾಪತ್ತೆಯಾಗುವ ಮೂಲಕ ಪ್ರಕರಣದ ಎಳೆ ಬಿಚ್ಚತೊಡಗಿತು. ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ. ಪ್ರಕರಣ ಕೈಗೆತ್ತಿಕೊಂಡ ಉಪ್ಲೆಟಾ ಠಾಣೆಯ ಪೊಲೀಸರು ಮತ್ತು ರಾಜ್‌ಕೋಟ್‌ ರೂರಲ್‌ ಕ್ರೈಂ ಬ್ರ್ಯಾಂಚ್‌ ಸಿಬ್ಬಂದಿ ತನಿಖೆ ಆರಂಭಿಸಿ ಯುವತಿಯನ್ನು ಪತ್ತೆ ಹಚ್ಚಿದರು. ಪೊಲೀಸರ ಬಳಿ ಯುವತಿ ಘಟನೆಯನ್ನು ಬಿಚ್ಚಿಡುತ್ತಿದ್ದಂತೆ ದೇಶವೇ ನಾಚಿಕೆಯಿಂದ ತಲೆತಗ್ಗಿಸುವ ವಿಚಾರ ಗೊತ್ತಾಗಿದೆ.

ವಿಚಾರಣೆ ವೇಳೆ ಯುವತಿ ತನ್ನ ಮೇಲೆ ತಂದೆಯಿಂದ ಆದ ಕಿರುಕುಳವನ್ನು ತಿಳಿಸಿದ್ದಾಳೆ. ಅಪ್ರಾಪ್ತ ವಯಸ್ಸಿನಿಂದಲೂ ತಂದೆ ದೌರ್ಜನ್ಯ ಎಸಗುತ್ತಿದ್ದ. ತಾಯಿ ಹಾಸಿಗೆ ಹಿಡಿದ ಬಳಿಕ ತನ್ನ ಮೇಲೆ ಕಿರುಕುಳ ಆರಂಭವಾಯಿತು ಎಂದು ವಿವರಿಸಿದ್ದಾಳೆ. ʼʼ3-4 ವರ್ಷಗಳಿಂದ ಆತನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಬಲವಂತಪಡಿಸುತ್ತಿದ್ದʼʼ ಎಂದಿದ್ದಾಳೆ.

7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಬಿಜೆಪಿ ಯುವ ಮುಖಂಡ ಅರೆಸ್ಟ್‌

ರಾತ್ರಿಯಾದರೆ ಸಾಕು ತಂದೆ ತನ್ನನ್ನು ಹಿಂಸಿಸುತ್ತಿದ್ದ. ಯಾರಲ್ಲಾದರೂ ಈ ವಿಚಾರ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಬೆದರಿಕೆ ಹಾಕಿದ್ದ. ಪೋರ್ನ್‌ ವಿಡಿಯೊ ಹಾಕಿ ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅಲ್ಲದೆ ತಾನು ಕಿರಿಚಿದರೆ ಕೇಳಬಾರದೆಂದು ಟಿವಿಯ ವ್ಯಾಲ್ಯೂಮ್‌ ದೊಡ್ಡದಾಗಿ ಇಡುತ್ತಿದ್ದ ಎಂದು ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಹೀಗೆ ಇತರರಿಗೆ ಗೊತ್ತಾಗದೆ ವರ್ಷಗಳ ಕಾಲ ಈ ರೀತಿ ಕಿರುಕುಳ ಮುಂದುವರಿಯಿತು ಎಂದು ಆಕೆ ಹೇಳಿದ್ದಾಗಿ ವರದಿಯೊಂದು ತಿಳಿಸಿದೆ.

ವಿಚಾರಣೆ

ಸಂತ್ರಸ್ತೆಯ ದೂರಿನ ನಂತರ ಆಕೆಯ ತಂದೆಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆತನ ರೂಮ್‌ನಿಂದ ಹಲವು ಅನುಮಾನಾಸ್ಪದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಆತ ತನ್ನ ಸೋದರ ಸೊಸೆಯ ಮೇಲೂ ಹಲವು ವರ್ಷಗಳ ಹಿಂದೆ ಅತ್ಯಾಚಾರ ಎಸಗಿರುವ ವಿಚಾರವೂ ಬೆಳಕಿಗೆ ಬಂದಿದೆ. ಆ ಸಂತ್ರಸ್ತೆಯನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದು, ಹೇಳಿಕೆಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯ ಪತ್ನಿ 4ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ವಿಚಾರ ತಿಳಿದು ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.