ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದಿಂದ ಜಮ್ಮು-ಕಾಶ್ಮೀರಕ್ಕೆ ಡ್ರೋನ್‌ ಮೂಲಕ ಮಾದಕ ವಸ್ತು, ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆ: ಬೃಹತ್‌ ಜಾಲ ಬೇಧಿಸಿದ ಪೊಲೀಸರು

ಗಡಿಯಾಚೆಗೆ ಮಾದಕ ವಸ್ತು, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಅರ್ನಿಯಾದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪಾಕಿಸ್ತಾನ ಸಂಪರ್ಕಿತ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ.

ಸಂಗ್ರಹ ಚಿತ್ರ

ಜಮ್ಮು: ಡ್ರೋನ್‌ಗಳ (drone) ಮೂಲಕ ಗಡಿಯಾಚೆಗೆ ಮಾದಕ ವಸ್ತು, ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆ (smuggle drugs and weapons) ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಅರ್ನಿಯಾದಲ್ಲಿ ಕಾರ್ಯಾಚರಣೆ ನಡೆಸಿದ ಜಮ್ಮು ಮತ್ತು ಕಾಶ್ಮೀರ (jammu and kashmir) ಪೊಲೀಸರು ಪಾಕಿಸ್ತಾನ ಸಂಪರ್ಕಿತ ಜಾಲವೊಂದನ್ನು (Pak-linked module) ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆ ವೇಳೆ ಒಂದು ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು, ನಾಲ್ಕು ಜೀವಂತ ಗುಂಡುಗಳು, 500 ಗ್ರಾಂ ಹೆರಾಯಿನ್ ಮತ್ತು 500 ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿದೆ.

ಭಾರತ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಅರ್ನಿಯಾದಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಸರಕುಗಳನ್ನು ಕೆಳಗಿಳಿಸುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳು ಡ್ರೋನ್‌ಗಳ ಮೂಲಕ ಎರಡು ಬಾರಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಪಡೆದಿದ್ದರು. ಇವರಿಗೆ ಪಾಕಿಸ್ತಾನ ಮೂಲದಿಂದ ಈ ಸರಕುಗಳು ಬರುತ್ತಿದ್ದವು ಎಂದು ಶಂಕಿಸಲಾಗಿದೆ.

ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಗ್ರೆನೇಡ್ ಸ್ಫೋಟ: ಕೈ ಕಳೆದುಕೊಂಡ ಬಾಲಕ

ಈ ಕುರಿತು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (NDPS) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.

ಕೆಲವು ದಿನಗಳ ಹಿಂದೆ ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಯೂಸ್‌ಮಾರ್ಗ್‌ನಲ್ಲಿ ಪಾಕಿಸ್ತಾನ ಸೇನೆಯ ವಿಶೇಷ ಪಡೆ 'ಸ್ಪೆಷಲ್ ಸರ್ವಿಸಸ್ ಗ್ರೂಪ್'ನ ಮಾಜಿ ಕಮಾಂಡೋ ಎನ್ನಲಾದ ಉನ್ನತ ಪಾಕಿಸ್ತಾನಿ ಉಗ್ರನೊಬ್ಬನನ್ನು ಭಾರತೀಯ ಸೇನಾ ಪಡೆ ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಈ ಘಟನೆ ನಡೆದಿದೆ.

ಲಷ್ಕರ್-ಎ-ತೈಬಾದ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿದ್ದ ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾ ಹತ್ಯೆಯಾದವನು. ಈತ ಪಹಲ್ಗಾಮ್ ದಾಳಿಯ ಮುಖ್ಯ ಸಂಚುಕೋರರಲ್ಲಿ ಒಬ್ಬನಾಗಿದ್ದನು.

ಹಣಕಾಸಿನ ವಿಚಾರದಲ್ಲಿ ವಿವಾದ: ಬೆಂಗಳೂರಿನಲ್ಲಿ ಜಿಮ್ ತರಬೇತುದಾರನ ಕೊಂದ ಸಹೋದ್ಯೋಗಿಗಳು

ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾ ಹತ್ಯೆಯೊಂದಿಗೆ 2022ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದ್ದ ನಾಲ್ವರು ಹಿರಿಯ ಎಲ್‌ಇಟಿ ಕಮಾಂಡರ್‌ಗಳ ನಿರ್ಮೂಲನೆಯಾದಂತಾಗಿದೆ. ಇವರು 2023ರಲ್ಲಿ ನಡೆದ ಹಲನ್, ಡಿ‌ಕೆ‌ಜಿ, ಕಂಡಿ, 2024ರಲ್ಲಿ ನಡೆದ ಶಾಹಸಿತಾರ್, ಶಿವ ಖೋರಿ, ಗಗನ್‌ಗಿರ್, ಬೂಟಾಪತ್ರಿ ಮತ್ತು 2025ರಲ್ಲಿ ನಡೆದಿರುವ ಬೈಸರಾನ್ ದಾಳಿಗೆ ಕಾರಣರಾಗಿದ್ದರು.

ವಿದ್ಯಾ ಇರ್ವತ್ತೂರು

View all posts by this author