ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಲಿವ್-ಇನ್ ಗೆಳೆಯ ದಿಲೀಪ್ ಎಂಬಾತ ಕೊಲೆ ಮಾಡಿದ್ದಾನೆ. ಆರೋಪಿ ದಿಲೀಪ್ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೊಲೆ ನಡೆಸಿದ ಬಳಿಕ ದಿಲೀಪ್ ಡಾಂಗ್ಚಿಯಾ, ಅಂಜರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಯಾದ ಅರುಣಾಬೆನ್ ನಟುಭಾಯ್ ಜಾದವ್ ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ರಾತ್ರಿ, 25 ವರ್ಷದ ಅರುಣಾಬೆನ್ ಮತ್ತು ದಿಲೀಪ್ ಜಗಳವಾಡಿದ್ದರು.
ಜಗಳದಲ್ಲಿ ಅರುಣಾಬೆನ್ ನಟುಭಾಯ್ ಜಾದವ್, ದಿಲೀಪ್ ತಾಯಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾಳೆ. ಇದರಿಂದ ಕೋಪಗೊಂಡ ಆತ ಅರುಣಾಬೆನ್‌ಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯಲ್ಲಿ ನಿಯೋಜಿತನಾಗಿರುವ ಆರೋಪಿಯು ಅರುಣಾ ಜೊತೆ ದೀರ್ಘಕಾಲದ ಸಂಬಂಧ ಹೊಂದಿದ್ದನು. ಇಬ್ಬರೂ ಮದುವೆಯಾಗಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 2021 ರಿಂದ ಇನ್‌ಸ್ಟಾಗ್ರಾಮ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಅಂದಿನಿಂದ ಇಲ್ಲಿಯ ವರೆಗೆ ಅವರು ಲಿವ್ ಇನ್ ಸಂಬಂಧದಲ್ಲಿದ್ದರು ಎಂದು ಹೇಳಲಾಗಿದೆ.
ಅಂಜಾರ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಮುಖೇಶ್ ಚೌಧರಿ ಈ ಕುರಿತು ಮಾತನಾಡಿ, CRPF ನಲ್ಲಿ ಸೇವೆ ಸಲ್ಲಿಸುತ್ತಿರುವ ದಿಲೀಪ್ ಮಹಿಳಾ ಅಧಿಕಾರಿಯನ್ನು ಕೊಲೆ ಮಾಡಿರುವುದನ್ನು ಧೃಡಪಡಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು. 2021ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದ ದಿಲೀಪ್ ಮತ್ತು ಅರುಣಾವೆನ್, ಅಂದಿನಿಂದ ಒಟ್ಟಿಗೆ ವಾಸಿಸುತ್ತಿದ್ದರು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು ಎಂದುಕೊಂಡಿದ್ದ ಈ ಜೋಡಿ, ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಕೊಲೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Crime News: ಥಾಣೆಯಲ್ಲಿ ಘೋರ ದುರಂತ; ಜಗಳದ ವೇಳೆ ಮಹಿಳೆಯನ್ನು ರೈಲಿನ ಮುಂದೆ ತಳ್ಳಿ ಕೊಲೆಗೈದ ಪಾಪಿ
ಪ್ರತ್ಯೇಕ ಘಟನೆಯಲ್ಲಿ
ಮಾಜಿ ಲಿವ್ ಇನ್ ರಿಲೇಷನ್ ಸಂಗಾತಿಗೆ ವಿಷ ಹಾಕಿ ಕೊಂದಿರುವ ಯುವಕನೊಬ್ಬ ‘ಅವಳು ಸಾಯಲು ಬಯಸಿದ್ದಳು, ಅದಕ್ಕೆ ನಾನೇ ಅವಳನ್ನು ಕೊಂದೆ’ ಎಂದು ಹೇಳುವ ಮೂಲಕ ಪೊಲೀಸರಿಗೇ ಶಾಕ್ ನೀಡಿದ್ದಾನೆ. ಉತ್ತರ ಪ್ರದೇಶದ ಲಲಿತಪುರದಲ್ಲಿ ಈ ಘಟನೆ ನಡೆದಿದೆ. ತನ್ನ ಮಾಜಿ ಪ್ರೇಯಸಿಗೆ ವಿಷಪ್ರಾಶನ ಮಾಡಿ ಕೊಲೆ ಮಾಡಿದ ನಂತರ ಯುವಕ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಜಗದೀಶ್ ರಾಯ್ಕ್ವಾರ್ ತನ್ನ ಪ್ರಿಯತಮೆಯನ್ನು ಹೇಗೆ ಕೊಲ್ಲುವುದು ಮತ್ತು ನಂತರ ಆಕೆಗೆ ವಿಷ ಕುಡಿಸಿ ದೇಹವನ್ನು ನದಿಗೆ ಎಸೆಯುವುದು ಎಂದು ಗೂಗಲ್‌ನಲ್ಲಿ ಹುಡುಕಿದ್ದ.