ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಛೇ ಇವನೆಂತಾ ಪಾಪಿ; ಮಾಟ-ಮಂತ್ರ ಮಾಡಿದ್ದಾರೆ ಎಂದು ಅನುಮಾನಗೊಂಡು ತಾಯಿಯನ್ನೇ ಜೀವಂತವಾಗಿ ಸುಟ್ಟ ಮಗ

Crime News: ತಾಯಿ ಮಾಟಮಂತ್ರ ಮಾಡಿದ್ದಾರೆ ಎಂದು ಅನುಮಾನಗೊಂಡ ಯುವಕನೊಬ್ಬ ತನ್ನ ಅಮ್ಮನನ್ನೇ ಜೀವಂತವಾಗಿ ಸುಟ್ಟು ಹತ್ಯೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ 40 ವರ್ಷದ ಕರ್ರೆ ಸಾಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ತಾಯಿಯನ್ನೇ ಕೊಂದ ಮಗ

ಹೈದರಾಬಾದ್‌, ಅ.12: ತಾಯಿ ಮಾಟಮಂತ್ರ ಮಾಡಿದ್ದಾರೆ ಎಂದು ಅನುಮಾನಗೊಂಡ ಯುವಕನೊಬ್ಬ ತನ್ನ ಅಮ್ಮನನ್ನೇ ಜೀವಂತವಾಗಿ ಸುಟ್ಟು ಹತ್ಯೆ ಮಾಡಿದ ಘಟನೆ ತೆಲಂಗಾಣ (Telangana) ದಲ್ಲಿ ನಡೆದಿದೆ. ಹಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಸಂಭವಿಸಿದ್ದ ಸಾವುಗಳಿಗೆ ಆಕೆಯೇ ಕಾರಣ ಎಂಬ ಅನುಮಾನದ ಹಿನ್ನೆಲೆಯಲ್ಲಿ 21 ವರ್ಷದ ಯುವಕನೊಬ್ಬ (Crime News) ತನ್ನ ತಾಯಿಯನ್ನೇ ಹತ್ಯೆ ಮಾಡಿದ್ದಾನೆ. ಆರೋಪಿ ಕರ್ರೆ ದುರ್ಗೇಶ್ ಆಟೋರಿಕ್ಷಾ ಚಾಲಕನಾಗಿದ್ದು, ತನ್ನ ಆಟೋದಲ್ಲಿದ್ದ ಡೀಸೆಲ್‌ ಬಳಸಿ ತಾಯಿಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.

ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ 40 ವರ್ಷದ ಕರ್ರೆ ಸಾಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಅವರ ಮಗ ದುರ್ಗೇಶ್‌ನನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಘಟನೆ ನಡೆಯುವ ಸುಮಾರು 10 ದಿನಗಳ ಮೊದಲು ಆತ ಹೈದರಾಬಾದ್‌ನಿಂದ ಮೇದಕ್ ಜಿಲ್ಲೆಯ ತನ್ನ ಹಳ್ಳಿಗೆ ಮರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಏಕೆಂದರೆ ಆತ ಮದ್ಯ ವ್ಯಸನಿಯಾಗಿದ್ದ. ಆಕೆಯ ತಾಯಿ ಆಪಾದಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದರು.

ಗಣಿಗಾರಿಕೆ ವಿವಾದ: ಬಿಜೆಪಿ ಮಾಜಿ ಶಾಸಕನನ್ನೇ ಹತ್ಯೆಗೈದ ಉದ್ರಿಕ್ತ ಗ್ರಾಮಸ್ಥರು

ಕೃಷಿ ಕಾರ್ಮಿಕಳಾದ ತನ್ನ ತಾಯಿ ಮಾಂತ್ರಿಕ ವಿಧಿವಿಧಾನಗಳನ್ನು ಮಾಡುತ್ತಿದ್ದಾಳೆಂದು ದುರ್ಗೇಶ್ ಆರೋಪಿಸಿದ್ದಲ್ಲದೆ, ಕೆಲ ವರ್ಷಗಳ ಹಿಂದೆ ಗ್ರಾಮದಲ್ಲಿ ನಡೆದ ಹಲವಾರು ಸಾವುಗಳಿಗೆ ಅವರನ್ನೇ ಹೊಣೆ ಮಾಡಿದ್ದ ಎಂದು ಆರೋಪಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಸರ್ಕಲ್ ಇನ್ಸ್‌ಪೆಕ್ಟರ್ ರೇಣುಕಾ ಮತ್ತು ಟೆಕ್ಮಲ್ ಸಬ್-ಇನ್‌ಸ್ಪೆಕ್ಟರ್ ಅರವಿಂದ್ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ, ತನಿಖೆ ಆರಂಭಿಸಿದರು. ಮೃತರ ಶವವನ್ನು ಜೋಗಿಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು. ಆದರೆ ಇಲ್ಲಿಯವರೆಗೆ, ಮೃತರ ವಿರುದ್ಧದ ಮಾಟಮಂತ್ರದ ಆರೋಪಗಳನ್ನು ದೃಢೀಕರಿಸುವ ಯಾವುದೇ ಸಾಕ್ಷ್ಯಗಳು ತನಿಖಾಧಿಕಾರಿಗಳಿಗೆ ಕಂಡುಬಂದಿಲ್ಲ.

“ನಮ್ಮ ತನಿಖೆಯಲ್ಲಿ ಮಾಂತ್ರಿಕತೆಯ ಯಾವುದೇ ಪುರಾವೆಗಳಿಲ್ಲ. ನಾವು ಹಲವಾರು ಗ್ರಾಮಸ್ಥರೊಂದಿಗೆ ಮಾತನಾಡಿದ್ದೇವೆ. ಯಾರೂ ಕೂಡ ಅವರು ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಹೇಳಲಿಲ್ಲ” ಎಂದು ಅಲ್ಲದುರ್ಗ್ ವೃತ್ತ ನಿರೀಕ್ಷಕ ಎಂ. ರೇಣುಕಾ ಹೇಳಿದರು. ಕೊಲೆಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ಮಗನನ್ನು ವಶಕ್ಕೆ ಪಡೆಯಲಾಗಿದೆ.