ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ನಿಂದ ಯಾರಿಗೂ ತಿಳಿಸದೆ ಬಂದು ಸ್ನೇಹಿತನ ಸಹಾಯದಿಂದ ತಾಯಿಯನ್ನೇ ಹತೈಗೈದ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

Crime news: ಇಂಗ್ಲೆಂಡ್‌ನಿಂದ ಹಿಂತಿರುಗಿದ ಪಾಪಿಯೊಬ್ಬ ತನ್ನ ಸ್ನೇಹಿತನ ಸಹಾಯದಿಂದ ತಾಯಿಯನ್ನು ಹತ್ಯೆ ಮಾಡಿದ ಶಾಕಿಂಗ್ ಘಟನೆ ಹರಿಯಾಣದಲ್ಲಿ ನಡೆದಿದೆ. ಕೌಟುಂಬಿಕ ಜಗಳದ ನಂತರ ಸ್ನೇಹಿತನ ಸಹಾಯದಿಂದ ತಾಯಿಯನ್ನು ಕೊಂದಿದ್ದಾನೆ. ಪ್ರಕರಣ ಸಂಬಂಧ ಮೃತ ಮಹಿಳೆಯ ಪುತ್ರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

ಇಂಗ್ಲೆಂಡ್‌ನಿಂದ ಹಿಂತಿರುಗಿದ ಪಾಪಿ ತಾಯಿಯನ್ನೇ ಹತ್ಯೆಗೈದ

ಸಾಂದರ್ಭಿಕ ಚಿತ್ರ -

Priyanka P
Priyanka P Jan 11, 2026 11:33 PM

ಚಂಡೀಗಢ, ಜ. 11: ಮಹಿಳೆಯೊಬ್ಬರ ಹತ್ಯೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಆಕೆಯ ಪುತ್ರನೇ ಕೊಲೆಗಾರ ಎಂಬುದನ್ನು ಪತ್ತೆಹಚ್ಚಿದ್ದಾರೆ. ಹರಿಯಾಣದ (Haryana) ಯಮುನಾನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಬೆಚ್ಚಿ ಬೀಳಿಸುವ ಸಂಗತಿ ಗೊತ್ತಾಗಿದೆ. ತನಿಖೆ ನಡೆಸಿದಾಗ ಈ ಅಪರಾಧವನ್ನು ಹೊರಗಿನವರು ಮಾಡಿಲ್ಲ, ಬದಲಿಗೆ ಆಕೆಯ ಸ್ವಂತ ಮಗನೇ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕೌಟುಂಬಿಕ ಜಗಳದ ನಂತರ ಸ್ನೇಹಿತನ ಸಹಾಯದಿಂದ ತಾಯಿಯನ್ನು ಕೊಂದಿದ್ದಾನೆ (Crime news).

ಹೌದು, ಇಂಗ್ಲೆಂಡ್‌ನಿಂದ ಯಾರಿಗೂ ಗೊತ್ತಾಗದಂತೆ ಭಾರತಕ್ಕೆ ಮರಳಿದ ಯುವಕನೊಬ್ಬ ತನ್ನ ಹೆತ್ತ ತಾಯಿಯನ್ನೇ ಕೊಂದಿದ್ದಾನೆ. ಡಿಸೆಂಬರ್ 24ರ ರಾತ್ರಿ ಶ್ಯಾಮ್‌ಪುರ ಗ್ರಾಮದ ಸರಪಂಚ್ ಅವರ ಪತ್ನಿ ಬಲ್ಜಿಂದರ್ ಕೌರ್ ಅನುಮಾನಾಸ್ಪದವಾಗಿ ಮೃತಪಟ್ಟ ನಂತರ ಈ ಘಟನೆ ಬೆಳಕಿಗೆ ಬಂತು. ತಾಂತ್ರಿಕ ಪುರಾವೆಗಳು, ಮೊಬೈಲ್ ಸ್ಥಳ ಟ್ರ್ಯಾಕಿಂಗ್ ಮತ್ತು ಕರೆ ವಿವರ ದಾಖಲೆಗಳು ಪ್ರಕರಣವನ್ನು ಬಯಲು ಮಾಡಲು ಸಹಾಯ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯದ ವಿಡಿಯೋ ವೈರಲ್‌ ಮಾಡಿದ ಪಾಪಿಗಳು

ಮೃತರ ಮಗ ಗೋಮಿತ್ ರಥಿ ಡಿಸೆಂಬರ್ 18ರಂದು ತನ್ನ ಕುಟುಂಬಕ್ಕೆ ತಿಳಿಸದೆ ಇಂಗ್ಲೆಂಡ್‌ನಿಂದ ಭಾರತಕ್ಕೆ ರಹಸ್ಯವಾಗಿ ಮರಳಿದ್ದಾನೆ ಎಂದು ತನಿಖಾಧಿಕಾರಿಗಳು ಕಂಡುಕೊಂಡರು. ಅವನ ಆಗಮನವು ಆತನ ಆಪ್ತ ಸ್ನೇಹಿತ ಪಂಕಜ್‌ಗೆ ಮಾತ್ರ ತಿಳಿದಿತ್ತು. ಇಬ್ಬರೂ ಸೇರಿ ಈ ಕೊಲೆ ಮಾಡಿದ್ದು, ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಗೆ ಗೊತ್ತಾಗದಂತೆ ನಿರ್ವಹಿಸಿದ್ದಾರೆ.

ಪೊಲೀಸ್ ಅಧಿಕಾರಿ ರಾಕೇಶ್ ಕುಮಾರ್ ಅವರ ಪ್ರಕಾರ, ಗೋಮಿತ್ ತನ್ನ ತಾಯಿ ಬಲ್ಜಿಂದರ್ ಕೌರ್ ಅವರೊಂದಿಗೆ ಆಗಾಗ ಜಗಳವಾಡುತ್ತಿದ್ದನು. ಅವರು ಅವನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಬೇರೆ ಜಾತಿಯ ಮಹಿಳೆಯೊಂದಿಗಿನ ಅವನ ಸಂಬಂಧವನ್ನು ಅವರು ವಿರೋಧಿಸಿದ ನಂತರ ಜಗಳ ಹೆಚ್ಚಾಯಿತು. ಇದು ಅವನನ್ನು ತೀವ್ರವಾಗಿ ಕೋಪಗೊಳಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಪರಿಹರಿಸಲು ಸಾಧ್ಯವಾಗದ ಕುಟುಂಬ ಸದಸ್ಯರು, ಗೋಮಿತ್‌ನನ್ನು ಅಧ್ಯಯನ ವೀಸಾದಲ್ಲಿ ಇಂಗ್ಲೆಂಡ್‌ಗೆ ಕಳುಹಿಸಿದರು. ವಿದೇಶದಲ್ಲಿದ್ದ ಅವನು ತನ್ನ ಅಧ್ಯಯನದ ಜತೆಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅವನು ತನ್ನ ತಾಯಿಯ ಬಗ್ಗೆ ಇದ್ದ ದ್ವೇಷವನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ‌ ಮಾಜಿ ಕಾರ್ಪೊರೇಟರ್ ಶವ ಕಾರಿನೊಳಗೆ ಸುಟ್ಟು ಕರಕಲಾಗಿ ಪತ್ತೆ, ಶಂಕೆಗಳ ಸುಳಿ

ಡಿಸೆಂಬರ್ 24ರಂದು ಗೋಮಿತ್ ತನ್ನ ಗ್ರಾಮಕ್ಕೆ ಹಿಂತಿರುಗಿ ದನದ ಕೊಟ್ಟಿಗೆಯಲ್ಲಿ ಅಡಗಿಕೊಂಡು ಅವಕಾಶಕ್ಕಾಗಿ ಕಾಯುತ್ತಿದ್ದ. ಆ ರಾತ್ರಿ ಅವನು ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಂದಿದ್ದಾನೆ. ಕೊಲೆ ಆಕಸ್ಮಿಕ ಎಂದು ಬಿಂಬಿಸಲು, ಶವವನ್ನು ನೀರಿನ ಟ್ಯಾಂಕ್‌ನಲ್ಲಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.

ಪಂಕಜ್‍ ಸ್ನೇಹಿತ ಗೋಮಿತ್ ಭಾರತಕ್ಕೆ ಮರಳಿರುವುದನ್ನು ಮರೆಮಾಚಿದ್ದಲ್ಲದೆ, ಕೊಲೆಯ ಮೊದಲು ಮತ್ತು ನಂತರ ಅವನಿಗೆ ಸಹಾಯ ಮಾಡಿದ್ದಾನೆ. ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.