ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagapally Crime: ಆಹಾರಕ್ಕೆ ಬೆರೆಸಲು ವಿಷಕಾರಿ ದತ್ತೂರ ಬೀಜದ ಪುಡಿ ನೀಡಿದ್ದ ‘ಮಾಂತ್ರಿಕ’ ಅರೆಸ್ಟ್

ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ಒಂದೇ ಕುಟುಂಬದ ೮ ಜನರನ್ನು ಸಾಮೂಹಿಕವಾಗಿ ಕೊಲೆ ಮಾಡುವ ಉದ್ದೇಶದಿಂದ ಪಾಪಿರೆಡ್ಡಿ ಎಂಬಾತ ನೀಡಿದ್ದ ವಿಷವನ್ನು ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆಗೆ ಪ್ರವೇಶ ಮಾಡಿದ್ದ ಚೌಡರೆಡ್ಡಿ ಎಂಬಾತ ಆಹಾರ ದಲ್ಲಿ(ಸಾಂಬಾರಿಗೆ) ವಿಷವನ್ನು ಬೆರೆಸಿದ್ದ

ದತ್ತುರ ಬೀಜದ ಗಿಡದ ಬೀಜದ ದೃಶ್ಯ

ಬಾಗೇಪಲ್ಲಿ: ಹಳೇ ಧ್ವೇಷದ ಹಿನ್ನಲೆಯಲ್ಲಿ ಆಹಾರಕ್ಕೆ ವಿಷ ಬೆರೆಸಿ ಸಾಮೂಹಿಕವಾಗಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದ ಅಮಾನವೀಯ ಘಟನೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ೧೦ ಸಾವಿರದ ಆಸೆಗೆ ವಿಷಕಾರಿ ದತ್ತೂರ ಪುಡಿಯನ್ನು ನೀಡಿದ್ದ ಮಾಂತ್ರಿಕನನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.

ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ಒಂದೇ ಕುಟುಂಬದ ೮ ಜನರನ್ನು ಸಾಮೂಹಿಕವಾಗಿ ಕೊಲೆ ಮಾಡುವ ಉದ್ದೇಶದಿಂದ ಪಾಪಿರೆಡ್ಡಿ ಎಂಬಾತ ನೀಡಿದ್ದ ವಿಷವನ್ನು ನೀರು
ಕುಡಿಯುವ ನೆಪದಲ್ಲಿ ಅಡುಗೆ ಮನೆಗೆ ಪ್ರವೇಶ ಮಾಡಿದ್ದ ಚೌಡರೆಡ್ಡಿ ಎಂಬಾತ ಆಹಾರ ದಲ್ಲಿ(ಸಾಂಬಾರಿಗೆ) ವಿಷವನ್ನು ಬೆರೆಸಿದ್ದ. ಈಗ ಅಮಾನುಷ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಮಾಂತ್ರಿಕನೊಬ್ಬನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದರೊಂದಿಗೆ ರಾಕ್ಷಸೀ ಕೃತ್ಯಕ್ಕೆ ಸಂಬಂಧಿಸಿದಂತೆ ೩ ಆರೋಪಿಗಳನ್ನು ಬಂಧಿಸಿದಂತಾಗಿದೆ.

ಇದನ್ನೂ ಓದಿ: Bagepally Crime: ಅನ್ನಕ್ಕೆ ವಿಷವಿಕ್ಕಿದ ಒಂದು ಅಡಿ ಜಾಗದ ದ್ವೇಷ : 8 ಜನರ ಸ್ಥಿತಿ ಚಿಂತಾಜನಕ, ಸ್ಥಳಕ್ಕೆ ಎಸ್ಪಿ ಭೇಟಿ

೧೦ ಸಾವಿರಕ್ಕೆ ವಿಷಕಾರಿ ದತ್ತೂರ ಬೀಜದ ಪುಡಿ ಮಾರಾಟ

ಸಾಮೂಹಿಕ ಕೊಲೆ ಪ್ರಯತ್ನದ ಘಟನೆಯ ಪ್ರಮುಖ ಆರೋಪಿಗಳಾದ ದೇವರೆಡ್ಡಿಪಲ್ಲಿ ಗ್ರಾಮದ ಪಾಪಿರೆಡ್ಡಿ ಮತ್ತು ಚೌಡರೆಡ್ಡಿ ಎಂಬುವವರನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಿರುವ ಪೊಲೀಸರು ಸುದೀರ್ಘ ವಿಚಾರಣೆಯಲ್ಲಿ ಕೃತ್ಯದಲ್ಲಿ ಮಾಂತ್ರಿಕನೊಬ್ಬನ ಪಾತ್ರವಿರುವುದು ಬೆಳಕಿಗೆ ಬಂದಿತ್ತು.

ಘಟನೆಯ ಆರೋಪಿ ಪಾಪಿರೆಡ್ಡಿ ನೀಡಿದ ಮಾಹಿತಿಯ ಬೆನ್ನಟ್ಟಿದ ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ಮತ್ತು ಸಿಬ್ಬಂದಿ ಮಾಂತ್ರಿಕ ಹಾಗು ರೈತ ಸಂಘವೊಂದರ ಗೌರವಾಧ್ಯಕ್ಷ ನೆಂದು ಬಿಂಬಿಸಿಕೊAಡಿದ್ದ ಗುಡಿಬಂಡೆ ತಾಲ್ಲೂಕಿನ ಗರುಡಾರ‍್ಲಹಳ್ಳಿ ಗ್ರಾಮದ ವೆಂಕಟ ರಮಣಪ್ಪ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಹಾರದಲ್ಲಿ ಬೆರೆಸಲು ವಿಷಯಕಾರಿ ದತ್ತೂರ ಪುಡಿಯನ್ನು ಪ್ರಮುಖ ಆರೋಪಿ ಪಾಪಿರೆಡ್ಡಿಗೆ ೧೦ ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ನೀಡಿದ್ದೇ ಅಲ್ಲದೆ ಅದನ್ನು ಆಹಾರದಲ್ಲಿ ವಿಷಕಾರಿ ಯಾಗಿ ಬಳಸುವ ವಿಧಾನವನ್ನು ಸಹ ಹೇಳಿಕೊಟ್ಟದ್ದ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾನೆ.

ಬಾಗೇಪಲ್ಲಿ ಪೊಲೀಸರು ಬಂಧಿಸಿರುವ ಮಾಂತ್ರಿಕ ವೆಂಕಟರವಣಪ್ಪ

ಗ್ರಾಮಗಳಲ್ಲಿ ಮಾಟ-ಮಂತ್ರದ ಹೆಸರಿನಲ್ಲಿ ಯಾವುದೇ ವೈದ್ಯಕೀಯ ಅರ್ಹತೆಯಿಲ್ಲ ದಿದ್ದರೂ ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತಿದ್ದ ಮಾಂತ್ರಿಕ ವೆಂಕಟರವಣಪ್ಪ ಹಲವಾರು ವರ್ಷಗಳಿಂದ ಚಿರಪರಿಚಿತನಾಗಿದ್ದ ಆರೋಪಿ ಪಾಪಿರೆಡ್ಡಿಗೆ ವಿಷಕಾರಿ ದತ್ತೂರ ಬೀಜದ ಪುಡಿಯನ್ನು ಸರಬರಾಜು ಮಾಡಿ ಸಾಮೂಹಿಕ ಕೊಲೆ ಯತ್ನದ ಘಟನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ದತ್ತೂರ ಗಿಡ’ ಔಷದವೂ ಹೌದು
ದತ್ತೂರ ಒಂದು ಶಾಶ್ವತ ವಾರ್ಷಿಕ ಸಸ್ಯವಾಗಿದ್ದು ಸಾಮಾನ್ಯವಾಗಿ ೧-೧.೨ ಮೀ ಎತ್ತರ ಬೆಳೆಯುತ್ತದೆ. ಇದರ ಕಾಂಡ ನೆಟ್ಟಗಿರುವುದು, ಕಡಿಮೆ ತರಂಗವು, ಮತ್ತು ದೊಡ್ಡ ಹಸಿರು ಎಲೆಗಳಿವೆ. ಹೂವುಗಳು ಬಿಳಿ ಅಥವಾ ಪರ್ಪಲ್ ಬಣ್ಣದಲ್ಲಿದ್ದು ಗಾಜಿನಾಕಾರದ ರೂಪ ದಲ್ಲಿರುತ್ತವೆ.

ಆಯುರ್ವೇದ ಚಿಕಿತ್ಸಾ ಪದ್ದತಿಯಲ್ಲಿ ಶುದ್ದೀಕರಿಸಿದ ‘ದತ್ತೂರ ಗಿಡ’ದಬೇರು ಮತ್ತು ಬೀಜಗಳಲ್ಲಿ ಇರುವ ಸಂಬಂಧಿ ರಾಸಾಯನಿಕಗಳು ನೋವು ತಣಿಸುವ, ಉಸಿರಾಟವನ್ನು ಸುಧಾರಿಸುವ, ಮನಸ್ಸನ್ನು  ಶಾಂತಗೊಳಿಸುವ, ಕುಶಲ ನಿದ್ದೆ ಒದಗಿಸುವಂತಹ ಕಾರ್ಯ ಗಳನ್ನು ಮಾಡುತ್ತವೆ ಎಂದು ಹೇಳಲಾಗುತ್ತದೆಯಾದರೂ ದತ್ತೂರವು ಅತ್ಯಂತ ವಿಷಕಾರಿ ಸಸ್ಯ ಸರಿಯಾದ ಪರಿಸರ, ಸರಿಯಾದ ಪ್ರಮಾಣ ಮತ್ತು ವೈದ್ಯಕೀಯ ನಡೆಸುವವರ ಮಾರ್ಗದರ್ಶನ ಇಲ್ಲದೆ ಬಳಸುವದು ಅಪಾಯಕಾರಿ ಹಾಗು ಪ್ರಾಣಾಪಾಯಕ್ಕೂ ಕಾರಣ ವಾಗುತ್ತದೆ.

ದತ್ತೂರದ ಬೀಜಗಳು ಮತ್ತು ಬೇರುಗಳು ಅಧಿಕ ಪ್ರಮಾಣದಲ್ಲಿ ತೆಗೆದುಕೊಂಡರೆ ಅತ್ಯಂತ ಅಪಾಯಕಾರಿ ಹಾಗು ವಿಷಕಾರಿಯೂ ಹೌದು. ಇದರಲ್ಲಿರುವ ವಿಷಕಾರಿ ಗುಣಗಳು ಹಲ್ಲು, ಪೋಷಣೀಯ ಸಮಸ್ಯೆ, ಗಂಭೀರ ಮನೋಸಾಮರ್ಥ್ಯ ವೈಫಲ್ಯ, ಗೋಳು ಮುಂತಾದ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. ಪ್ರಾಣಾಪಾಯಕ್ಕೂ ಕಾರಣವಾಗುತ್ತದೆ. ವೈದ್ಯ ಕೀಯ ಮಾರ್ಗದರ್ಶನದಲ್ಲಿ ಮಾತ್ರ ಬಳಸುವುದು ಅತ್ಯಗತ್ಯ ಎಂದು ಹೇಳಲಾಗುತ್ತದೆ.

ಐಸಿಯು ನಲ್ಲಿ ಮೂವರ ಚೇತರಿಕೆ:
ಅಮಾನುಷ ಘಟನೆಯಲ್ಲಿ ತೀವ್ರ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ವೆಂಟಿಲೇಟರ್‌ನಲ್ಲಿ ಪ್ರಾಣಾಪಾಯ ಸ್ಥಿತಿಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಮುದ್ದರೆಡ್ಡಿ, ಮಂಜುನಾಥರೆಡ್ಡಿ ಮತ್ತು ಸುಬ್ಬಿರೆಡ್ಡಿ ಎಂಬುವವರು ಆರೋಗ್ಯದಲ್ಲಿ ಚೇತರಿಕೆ ಕಂಡುಬAದಿದ್ದು ಅವರಿಗೆ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಸಂಪೂರ್ಣ ಗುಣಮುಖರಾಗುವ ಆಶಾಭಾವನೆಯನ್ನು ಎಂದು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಉಳಿದಂತೆ ೪ ಜನರು ಸಂಪೂರ್ಣ ಚೇತರಿಸಿಕೊಂಡಿದ್ದು ಅವರನ್ನು ಸಾಮಾನ್ಯ ವಾರ್ಡಿಗೆ ಸ್ಥಳಾಂತರಿಸಲಾಗಿದೆ.

ಪೊಲೀಸರ ಸರ್ಪಗಾವಲು ತೆರವು:

ಆಹಾರಕ್ಕೆ ವಿಷ ಬೆರೆಸಿ ಸಾಮೂಹಿಕ ಕೊಲೆ ಮಾಡುವ ಪ್ರಯತ್ನ ನಡೆಸಿದ್ದ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಯೋಜನೆ ಮಾಡಲಾಗಿದ್ದ ಪೊಲೀಸರನ್ನು ತೆರವು ಮಾಡಲಾಗಿದೆ. ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಮೀಸಲು ಪಡೆಯೊಂದಿಗೆ ಹೆಚ್ಚಿನ ಪೊಲೀಸರನ್ನು ಗ್ರಾಮದಲ್ಲಿ ನಿಯೋಜನೆ ಮಾಡಲಾಗಿತ್ತು. ಗ್ರಾಮದಲ್ಲಿ ಸಹಜಸ್ಥಿತಿ ಇರುವುದರಿಂದ ಪೊಲೀಸರನ್ನು ಅಲ್ಲಿಂದ ತೆರವುಗೊಳಿಸಲಾಗಿದೆ.