Bagepally Crime: ಅನ್ನಕ್ಕೆ ವಿಷವಿಕ್ಕಿದ ಒಂದು ಅಡಿ ಜಾಗದ ದ್ವೇಷ : 8 ಜನರ ಸ್ಥಿತಿ ಚಿಂತಾಜನಕ, ಸ್ಥಳಕ್ಕೆ ಎಸ್ಪಿ ಭೇಟಿ
ಮನೆಯಲ್ಲಿಯೇ ತಯಾರು ಮಾಡಿದ್ದ ಅನ್ನ-ಸಾಂಬಾರಿನ ಊಟವನ್ನು ಬೆಳಿಗ್ಗೆ ೧೦ ಗಂಟೆಗೆ ಮನೆಯವರೆಲ್ಲಾ ಕೂಲಿಯವರ ಜೊತೆಯಲ್ಲಿಯೇ ಕೂತು ಹೊಲದ ಹತ್ತಿರ ಮಾಡಿದ್ದಾರೆ. ನಂತರ ಕೃಷಿ ಕೆಲಸದಿಂದ ಮನೆಗೆ ವಾಪಸ್ಸಾಗಿರುವ ೮ ಜನರು ಮದ್ಯಾಹ್ನ ೩ ಗಂಟೆಗೆ ಮನೆಯ ಲ್ಲಿಯೇ ಊಟ ಮಾಡಿದ್ದಾರೆ. ಸುಮಾರು ಒಂದು ಗಂಟೆ ನಂತರ ಒಬ್ಬೊಬ್ಬರಾಗಿಯೇ ತೀವ್ರವಾಗಿ ಅಸ್ವಸ್ಥಗೊಂಡು ಕಿರುಚಾಡಿದ್ದು ಗ್ರಾಮಸ್ಥರು ಮತ್ತು ಸಂಬAಧಿಕರು ಅವರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ
-
ಬಾಗೇಪಲ್ಲಿ: ಒಂದು ಅಡಿ ಜಾಗದ ಕ್ಷುಲ್ಲಕ ಕಾರಣಕ್ಕಾಗಿ ಉಂಟಾಗಿದ್ದ ಹಳೇ ದ್ವೇಷವು ಆಹಾರಕ್ಕೆ ವಿಷ ಬೆರೆಸಿ ಇಡೀ ಕುಟುಂಬವನ್ನು ಸಾಮೂಹಿಕವಾಗಿ ಕೊಲೆ ಮಾಡುವಂತೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಈ ಅಮಾನುಷವಾದ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮ ದಲ್ಲಿ ನಡೆದಿದ್ದು ಈ ಘಟನೆಯಿಂದಾಗಿ ೮ ಜನರು ಅಸ್ವಸ್ಥಗೊಂಡಿದ್ದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಯಾಗಿದೆ.
ಈ ಘಟನೆಯಲ್ಲಿ ಅಸ್ವಸ್ಥಗೊಂಡವರನ್ನು ಬಾಗೇಪಲ್ಲಿ ತಾಲೂಕು ಪರಗೋಡು ಪಂಚಾ ಯಿತಿ ವ್ಯಾಪ್ತಿಯ ದೇವಿರೆಡ್ಡಿಪಲ್ಲಿ ಗ್ರಾಮದ ಮದ್ದರೆಡ್ಡಿ, ಭಾಗ್ಯಮ್ಮ, ಮಂಜುನಾಥ. ಈಶ್ವರಮ್ಮ, ಸುಬ್ರಮಣಿ, ಮಣಿ, ಭಾನು ಎಂದು ಗುರುತಿಸಲಾಗಿದ್ದು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಇವರಲ್ಲಿ ಮಂಜುನಾಥ, ಮುದ್ದರೆಡ್ಡಿ ಮತ್ತು ಸುಬ್ರಹ್ಮಣಿ ಎಂದು ತಿಳಿದು ಬಂದಿದ್ದು ಸುಬ್ರಮಣಿ ಎಂಬುವವರ ಪರಿಸ್ಥಿತಿ ಚಿಂತಾಜನಕ ಸ್ಥಿತಿ ತಲುಪಿದ್ದು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: Bagepally News: ಸಾಯಿ ಲೀಲಾ ಎಜುಕೇಷನ್ ಫೌಂಡೇಷನ್ ಎನ್.ಜಿ.ಓ ಸಂಸ್ಥೆ ವತಿಯಿಂದ ಲೇಖನ ಸಾಮಗ್ರಿ ವಿತರಣೆ
ಗುರುವಾರ ಮನೆಯಲ್ಲಿಯೇ ತಯಾರು ಮಾಡಿದ್ದ ಅನ್ನ-ಸಾಂಬಾರಿನ ಊಟವನ್ನು ಬೆಳಿಗ್ಗೆ ೧೦ ಗಂಟೆಗೆ ಮನೆಯವರೆಲ್ಲಾ ಕೂಲಿಯವರ ಜೊತೆಯಲ್ಲಿಯೇ ಕೂತು ಹೊಲದ ಹತ್ತಿರ ಮಾಡಿದ್ದಾರೆ. ನಂತರ ಕೃಷಿ ಕೆಲಸದಿಂದ ಮನೆಗೆ ವಾಪಸ್ಸಾಗಿರುವ ೮ ಜನರು ಮದ್ಯಾಹ್ನ ೩ ಗಂಟೆಗೆ ಮನೆಯಲ್ಲಿಯೇ ಊಟ ಮಾಡಿದ್ದಾರೆ. ಸುಮಾರು ಒಂದು ಗಂಟೆ ನಂತರ ಒಬ್ಬೊಬ್ಬರಾಗಿಯೇ ತೀವ್ರವಾಗಿ ಅಸ್ವಸ್ಥಗೊಂಡು ಕಿರುಚಾಡಿದ್ದು ಗ್ರಾಮಸ್ಥರು ಮತ್ತು ಸಂಬAಧಿಕರು ಅವರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪ್ರಥಮ ತುರ್ತು ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು ೩ ಜನರಿಗೆ ತುರ್ತು ವೆಂಟಿಲೇಟರ್ ಅಗತ್ಯವಾದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಮೂವರ ಪರಿಸ್ಥಿತಿ ಇನ್ನೂ ವಿಷಯಮವಾಗಿಯೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಫುಡ್ ಪಾಯಿಸನ್ ಎಂಬು ಎಲ್ಲರೂ ಭಾವಿಸಿದ್ದರಾದರೂ ಈ ಘಟನೆಯಲ್ಲಿ ಅಸ್ವಸ್ಥಗೊಂಡು ಚೇತರಿಕೆಯಾಗಿದ್ದ ಭಾನು ಯುವತಿ ಮದ್ಯಾಹ್ನ ಸುಮಾರು ೧ ಗಂಟೆ ಸಮಯದಲ್ಲಿ ದೇವರೆಡ್ಡಿಪಲ್ಲಿ ಗ್ರಾಮದ ಪರಿಚಿತ ವ್ಯಕ್ತ ಚೌಡರೆಡ್ಡಿ ಎಂಬಾತ ನೀರು ಕುಡಿಯುವ ನೆಪದಲ್ಲಿ ಅಡುಗೆ ಮನೆ ಪ್ರವೇಶ ಮಾಡಿದ್ದ ಎಂಬ ಮಾಹಿತಿ ಇಡೀ ಘಟನೆಯ ಚಿತ್ರಣವನ್ನೇ ಬದಲಾಯಿಸಿದ್ದು ನಂತರ ಹೊರಗೆ ಬಂದ ಸತ್ಯ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಆಹಾರಕ್ಕೆ ವಿಷ ಪ್ರಾಶನ ಮಾಡಿ ಒಂದೇ ಕುಟುಂಬದ ಎಲ್ಲರನ್ನೂ ಸಾಮೂಹಿಕವಾಗಿ ಕೊಲ್ಲುವ ಪಿತೂರಿ ಬೆಳಕಿಗೆ ಬಂದಿದೆ. ಪರಿಚಿತ ವ್ಯಕ್ತಿ ಇಂತಹ ಅಮಾನುಷ ಕೃತ್ಯಕ್ಕೆ ಮುಂದಾಗುತ್ತಾನೆAದು ಯಾರೂ ಊಹಿಸಿರಲಿಲ್ಲ.
ಯುವತಿಯ ಮಾಹಿತಿಯ ಬೆನ್ನು ಹತ್ತಿದ ಪೊಲೀಸರು ಸಾಮೂಹಿಕ ಕೊಲೆಗೆ ಯತ್ನಿಸಿದ್ದ ಚೌಡರೆಡ್ಡಿ ಮತ್ತು ಆತನಿಗೆ ಮಾರ್ಗದರ್ಶನ ನೀಡಿದ್ದೇ ಅಲ್ಲದೆ ಘಟನೆಯ ಸಂಪೂರ್ಣ ಸೂತ್ರದಾರ ಎನ್ನಲಾಗುತ್ತಿರುವ ಅದೇ ಗ್ರಾಮದ ಪಾಪಿರೆಡ್ಡಿ ಎಂಬ ಇಬ್ಬರೂ ಆರೋಪಿ ಗಳನ್ನು ವಶಕ್ಕೆ ಪಡೆದುಕೊಂಡು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಳೇ ದ್ವೇಷ ಕೊಲೆ ಯತ್ನಕ್ಕೆ ಕಾರಣ?
ಘಟನೆಯಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಮುದ್ದ ರೆಡ್ಡಿ ಮತ್ತು ಅವರ ಪಕ್ಕದ ಮನೆಯ ಪಾಪಿರೆಡ್ಡಿ ಎಂಬುವವರ ನಡುವೆ ಕೆಲವು ತಿಂಗಳ ಹಿಂದೆ ಹೊಡೆದಾಟವಾಗಿದ್ದು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆ ಪಕ್ಕದ ಒಂದು ಅಡಿ ಜಾಗ ಬಿಡುವ ವಿಚಾರದಲ್ಲಿ ಮನಸ್ಥಾಪ ವಾಗಿತ್ತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಎನ್ನಲಾಗುತ್ತಿರುವ ಆರೋಪಿ ಪಾಪಿರೆಡ್ಡಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಇಡೀ ಕುಟುಂಬದವರನ್ನು ಸಾಮೂಹಿಕವಾಗಿ ಕೊಲೆ ಮಾಡಲು ಪ್ರಯತ್ನಿಸಿ ದ್ದರಾ? ಎಂಬ ಅನುಮಾನ ಪೊಲೀಸರಲ್ಲಿಯೂ ವ್ಯಕ್ತವಾಗಿದೆ. ಈ ದಿಸೆಯಲ್ಲಿ ತನಿಖೆ ತೀವ್ರಗೊಂಡಿದೆ ಎಂದು ತಿಳಿದು ಬಂದಿದೆ.
ದೇವರೆಡ್ಡಿಪಲ್ಲಿ ಗ್ರಾಮದ ಒಂದೇ ಕುಟುಂಬದ ಎಲ್ಲರನ್ನೂ ಸಾಮೂಹಿಕವಾಗಿ ಮುಗಿಸಲು ಆಹಾರದಲ್ಲಿ ವಿಷ ಬೆರೆಸಿ ಕೊಲೆಗೆ ಪ್ರಯತ್ನಿಸಿದ ಮಾಹಿತಿ ತಿಳಿಯುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಕುಶಲ್ ಚೌಕ್ಸಿ, ಎಎಸ್ಪಿ ಜಗನ್ನಾಥರೈ, ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಅಲರ್ಟ ಆಗಿದ್ದಾರೆ.
ಇದರ ಬೆನ್ನಲ್ಲೇ ಪೊಲೀಸರು ಸಾಮೂಹಿಕ ಕೊಲೆಗೆ ಆಹಾರದಲ್ಲಿ ವಿಷ ಬೆರೆಸಿದ ಆರೋಪಿ ಗಳಾದ ಚೌಡರೆಡ್ಡಿ ವiತ್ತು ಘಟನೆಯ ಪ್ರಮುಖ ಸೂತ್ರದಾರ ಪಾಪಿರೆಡ್ಡಿ ಎಂಬುವವರನ್ನು ಅರೆಸ್ಟ್ ಮಾಡಿದು. ದೇವರೆಡ್ಡಿಪಲ್ಲಿ ಗ್ರಾಮಕ್ಕೆ ಎಸ್ಪಿ ಕುಶಲ್ ಚೌಕ್ಸಿ, ಎಎಸ್ಪಿ ಜಗನ್ನಾಥ ರೈ, ಡಿವೈಎಸ್ಪಿ ಶಿವಕುಮಾರ್ ಬೇಟಿ ನೀಡಿ ಸ್ಥಳ ಪರಿಶೀಲನೆಯನ್ನು ನಡೆಸಿದರಲ್ಲದೆ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.