ಶಿವಮೊಗ್ಗ: ಸಾಕು ನಾಯಿಯೊಂದಿಗೆ (pet dog) ಜಗಳವಾಡಿತು ಎಂದು ಬೀದಿ ನಾಯಿಯನ್ನು (stray dog attack) ವ್ಯಕ್ತಿಯೊಬ್ಬ ಕೊಂದು ಹಾಕಿದ ಘಟನೆ ಶಿವಮೊಗ್ಗದಲ್ಲಿ (shivamogga crime) ನಡೆದಿದೆ. ಆರೋಪಿ ಸಾಗರ ತಾಲೂಕಿನ ನಾಡವಳ್ಳಿ ಗ್ರಾಮದ ನಿವಾಸಿ ಲಿಂಗಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ (Animals Act, Bharatiya Nyaya Sanhita and Arms Act) ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ತಾನು ನಾಯಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಶಿವಮೊಗ್ಗ ಪೊಲೀಸರು ತಿಳಿಸಿದ್ದಾರೆ.
ನೆರೆಹೊರೆಯವರಾದ ಬೋರಪ್ಪ ಎಂಬವರು ಶುಕ್ರವಾರ ಬೆಳಗ್ಗೆ 11.15 ರ ಸುಮಾರಿಗೆ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದಾಗ ಅವರ ಹಿಂದೆ ಬಂದ ಬೀದಿನಾಯಿಯು ಲಿಂಗಮೂರ್ತಿ ಅವರ ಮನೆ ಬಳಿ ಅವರ ಸಾಕುನಾಯಿಯೊಂದಿಗೆ ಜಗಳವಾಡಿದೆ. ಇದರಿಂದ ಸಿಟ್ಟಾದ ಲಿಂಗಮೂರ್ತಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ಅದನ್ನು ಕೊಂದು ಬಿಟ್ಟಿದ್ದಾರೆ. ಬೀದಿನಾಯಿ ಹಿಂಬದಿ ಕಾಲಿನ ಬಳಿ ಗುಂಡು ತಗಲಿ ಅದು ಸ್ಥಳದಲ್ಲೇ ಸಾವನ್ನಪ್ಪಿದೆ ಎನ್ನಲಾಗಿದೆ.
ಉದ್ದೇಶ ಪೂರ್ವಕವಾಗಿ ಬೀದಿ ನಾಯಿಯನ್ನು ಹತ್ಯೆ ಮಾಡಲಾಗಿಲ್ಲ. ತನ್ನ ಸಾಕು ನಾಯಿಯೊಂದಿಗೆ ಬೀದಿ ನಾಯಿ ಜಗಳವಾಡಿದ್ದರಿಂದ ಸಾಕು ನಾಯಿಗೆ ತೊಂದರೆಯಾಗದಿರಲಿ ಎಂದು ಬೀದಿ ನಾಯಿಯನ್ನು ಬೆದರಿಸಲು ಲಿಂಗಮೂರ್ತಿ ಗುಂಡು ಹಾರಿಸಿದ್ದರು ಎಂದು ದೂರಿನಲ್ಲಿ ಬೋರಪ್ಪ ಅವರು ತಿಳಿಸಿದ್ದಾರೆ.
ಲಿಂಗಮೂರ್ತಿ ನಾಯಿ ಮೇಲೆ ದಾಳಿಗೆ ಬಳಸಿರುವ ಬಂದೂಕನ್ನು ಬಳಸಲು ಅವರ ಬಳಿ ಪರವಾನಗಿ ಇಲ್ಲ ಎಂದು ಆನಂದಪುರ ಠಾಣೆ ಸಬ್ ಇನ್ಸ್‌ಪೆಕ್ಟರ್ ಪ್ರವೀಣ್ ತಿಳಿಸಿದ್ದಾರೆ.
ಸೈಬರ್ ವಂಚನೆ ಪ್ರಕರಣಗಳಲ್ಲಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆ ಬಳಕೆ: ಪೊಲೀಸ್ ನೋಟಿಸ್‌ಗೆ ಹೆದರಿ ಆತ್ಮಹತ್ಯೆ
ಈ ಕುರಿತು ಆನಂದಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸ್ ಸಿಬ್ಬಂದಿ ನಿರಂಜನ್ ಸ್ಥಳಕ್ಕೆ ಧಾವಿಸಿ ಆರೋಪಿ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಿದರು. ಆರೋಪಿ ಲಿಂಗಮೂರ್ತಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.