ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Assault: ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕನ ಮೇಲೆ ಲೈಂಗಿಕ ಕುರುಳದ ಆರೋಪ; ದೂರು ದಾಖಲು

Physical Abuse: ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಹೆಚ್ಚು ಮಾರ್ಕ್ಸ್‌ ನೀಡುತ್ತೇನೆ ಎಂಬ ಆಮಿಷವೊಡ್ಡಿದ್ದ. ಆಕೆ ಒಪ್ಪದಿದ್ದಾಗ ಫೋನ್‌ ಮಾಡಿ, ಕೆಟ್ಟದಾಗಿ ಬೈದಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

ಇಂಜಿನಿಯರಿಂಗ್  ಕಾಲೇಜಿನ ಉಪನ್ಯಾಸಕನ ಮೇಲೆ ಲೈಂಗಿಕ ಕುರುಳದ ಆರೋಪ

ಸಾಂಧರ್ಬಿಕ ಚಿತ್ರ -

Vishakha Bhat
Vishakha Bhat Nov 16, 2025 8:52 AM

ಮೈಸೂರಿನ ಪ್ರತಿಷ್ಠಿತ ಇಂಜಿನಿಯರಿಂಗ್​​ ಕಾಲೇಜಿನ ಉಪನ್ಯಾಸಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೆಚ್ಚು ಅಂಕಗಳನ್ನು ನೀಡುವ ಆಮಿಷವೊಡ್ಡಿ ಒಳ್ಳೇ ಕೆಲಸ ಕೊಡಿಸುತ್ತೇನೆ. ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಎಂದು ಕಿರುಕುಳ ನೀಡಿರೋದಾಗಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನ್ಯಾಸಕ ಭರತ್ ಭಾರ್ಗವ ವಿರುದ್ಧ FIR ದಾಖಲಾಗಿದೆ. ಭರತ್‌ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಮಹಿಳಾ ಉಪನ್ಯಾಸಕರ ಬಳಿ ದೂರಿದ್ದಳು.

ಈ ವಿಚಾರಕ್ಕೆ ವಿದ್ಯಾರ್ಥಿನಿಕೆ ಕರೆ ಮಾಡಿದ್ದ ಉಪನ್ಯಾಸಕ ಭರತ್ ಭಾರ್ಗವ, ತಾನು ಹೇಳಿದಂತೆ ಕೇಳದಿದ್ದರೆ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ತನ್ನ ಖಾಸಗಿ ಅಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾಳೆ. ಸದ್ಯ ಆಕೆಯ ದೂರಿನ ಅನ್ವಯ ಉಪನ್ಯಾಸಕನ ವಿರುದ್ಧ BNS ಸೆಕ್ಷನ್ 126(2), 75(2), 351(2) ಅಡಿಯಲ್ಲಿ, ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: ರಾಜ್ಯವೇ ತಲೆ ತಗ್ಗಿಸುವ ಘಟನೆ; ಅಪ್ರಾಪ್ತೆ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 21 ವರ್ಷದ ಯುವಕ

ಕಾಲೇಜಿನಲ್ಲೇ ಅತ್ಯಾಚಾರ

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಎಂಜಿನಿಯರ್‌ ಕಾಲೇಜೊಂದರಲ್ಲಿ ಓದುತ್ತಿದ್ದ ಸೀನಿಯರ್‌ ವಿದ್ಯಾರ್ಥಿನಿ ಮೇಲೆ ಅದೇ ಕಾಲೇಜಿನ ಜೂನಿಯರ್‌ ವಿದ್ಯಾರ್ಥಿ ಅತ್ಯಾಚಾರ ಎಸಗಿದ್ದು, ಹನುಮಂತ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಲೇಜಿನ ಶೌಚಾಲಯಕ್ಕೆ ಬಲವಂತಾಗಿ ಎಳೆದೊಯ್ದು ಅತ್ಯಾಚಾರ ಎಸಗಿದ್ದ ಜೀವನ್ ಗೌಡನನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಕ್ಟೋಬರ್ 10 ರಂದು ಘಟನೆ ನಡೆದಿದ್ದು, ಏಳನೇ ಸೆಮಿಸ್ಟರ್ ವಿದ್ಯಾರ್ಥಿನಿ ಐದು ದಿನಗಳ ನಂತರ, ಅಂದರೆ ಅಕ್ಟೋಬರ್ 15 ರಂದು ದೂರು ನೀಡಿದ್ದಳು.

ಸಂತ್ರಸ್ತೆ ಮತ್ತು ಆರೋಪಿ ಜೀವನ್ ಗೌಡ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಪರಸ್ಪರ ಪರಿಚಿತರು ಹೌದು. ಆದರೆ, ಜೀವನ್ ಗೌಡ ಕೆಲವು ವಿಷಯಗಳಲ್ಲಿ ಬ್ಯಾಕ್‌ಲಾಗ್ ಇದ್ದುದರಿಂದ ಅವನ ಓದು ಒಂದು ವರ್ಷ ತಡವಾಗಿತ್ತು. ಅಕ್ಟೋಬರ್‌ 10ರಂದು ಬೆಳಿಗ್ಗೆ 8.55ಕ್ಕೆ ತರಗತಿಗೆ ತರಗತಿಗೆ ಸಂತ್ರಸ್ತೆ ಹಾಜರಾಗಿದ್ದರು. ಇದೇ ವೇಳೆ ಜೀವನ್ ಗೌಡ ಊಟದ ಸಮಯದಲ್ಲಿ ಸಂತ್ರಸ್ತೆಗೆ ಹಲವು ಬಾರಿ ಕರೆ ಮಾಡಿ, ಆರ್ಕಿಟೆಕ್ಚರ್ ಬ್ಲಾಕ್ ಬಳಿ, ಏಳನೇ ಮಹಡಿಯಲ್ಲಿ ಭೇಟಿಯಾಗಲು ಹೇಳಿದ್ದಾನೆ. ಅಲ್ಲಿ ಸಂತ್ರಸ್ತೆಗೆ ಆರೋಪಿ ಮುತ್ತು ನೀಡಲು ಯತ್ನಿಸಿದ್ದಾನೆ. ಅದರಿಂದ ತಪ್ಪಿಸಿಕೊಳ್ಳಲು ಆಕೆ ಲಿಫ್ಟ್ ಬಳಸಿ ಹೋಗಲು ಪ್ರಯತ್ನಿಸಿದಾಗ, ಜೀವನ್ ಗೌಡ ಆಕೆಯನ್ನು ಹಿಂಬಾಲಿಸಿ ಆರನೇ ಮಹಡಿಯಲ್ಲಿದ್ದ ಪುರುಷರ ಶೌಚಾಲಯಕ್ಕೆ ಬಲವಂತವಾಗಿ ಎಳೆದೊಯ್ದು, ಚಿಲಕ ಹಾಕಿ ಅತ್ಯಾಚಾರ ಮಾಡಿದ್ದಾನೆ ಎಂದು ಆಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.