ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕ ಮೆದುಳಿನ ರಕ್ತಸ್ರಾವದಿಂದ ಸಾವು; ಅತಿಯಾದ ಒತ್ತಡವೇ ಕಾರಣ ಎಂದು ಕುಟುಂಬಸ್ಥರ ಆರೋಪ

Teacher dies of brain haemorrhage: ಚುನಾವಣಾ ಕರ್ತವ್ಯದಲ್ಲಿದ್ದ ನಿಯೋಜಿತ ಶಿಕ್ಷಕ ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಾವಿಗೆ ಅತಿಯಾದ ಒತ್ತಡವೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. 58 ವರ್ಷದ ಜೀವಶಾಸ್ತ್ರ ಶಿಕ್ಷಕ ನೆಹರೂ ನಗರದ ತಮ್ಮ ನಿವಾಸದಲ್ಲಿ ಶನಿವಾರ ನಿಧನರಾದರು.

ಮೆದುಳಿನ ರಕ್ತಸ್ರಾವದಿಂದ ಶಿಕ್ಷಕ ಸಾವು

ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕ ಮೆದುಳಿನ ರಕ್ತಸ್ರಾವದಿಂದ ಸಾವು (ಸಂಗ್ರಹ ಚಿತ್ರ) -

Priyanka P
Priyanka P Dec 7, 2025 2:19 PM

ಲಖನೌ: ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕರೊಬ್ಬರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯಕ್ಕಾಗಿ ಬೂತ್ ಮಟ್ಟದ ಅಧಿಕಾರಿ (BLO) ಆಗಿ ನಿಯೋಜಿಸಲ್ಪಟ್ಟ 58 ವರ್ಷದ ಜೀವಶಾಸ್ತ್ರ ಶಿಕ್ಷಕ (biology teacher) ನೆಹರೂ ನಗರದ ತಮ್ಮ ನಿವಾಸದಲ್ಲಿ ಶನಿವಾರ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ವಿಜ್ಞಾನ ಮತ್ತು ವಾಣಿಜ್ಯ ಅಂತರ ಕಾಲೇಜಿನ ಶಿಕ್ಷಕರಾಗಿದ್ದ ಲಾಲ್ ಮೋಹನ್ ಸಿಂಗ್ ಅವರು ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಬೇಕಾಗಿರುದ್ದರಿಂದ ಭಾರಿ ಒತ್ತಡದಲ್ಲಿದ್ದರು ಎಂದು ಕಾಲೇಜಿನ ಪ್ರಾಂಶುಪಾಲ ಸತೀಶ್ ಚಂದ್ ಅಗರ್ವಾಲ್ ತಿಳಿಸಿದರು.

ಓಡಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಸರಪಳಿಯಲ್ಲಿ ಕಟ್ಟಿ ಹಾಕಿದ ಹಾಸ್ಟೆಲ್ ಸಿಬ್ಬಂದಿ, ತನಿಖೆಗೆ ಆದೇಶ

ಯಾವುದೇ ಬೆಲೆ ತೆತ್ತಾದರೂ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಆಡಳಿತವು ಎಚ್ಚರಿಸಿತ್ತು. ಹೀಗಾಗಿ ಅವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದರು. ಸಿಂಗ್ ಅವರಿಗೆ ಸಾಹಿಬಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಕರ್ತವ್ಯವನ್ನು ವಹಿಸಲಾಗಿತ್ತು.

ಶುಕ್ರವಾರ ರಾತ್ರಿ ಲಾಲ್ ಮೋಹನ್ ಸಿಂಗ್ ಮೆದುಳಿನ ರಕ್ತಸ್ರಾವದಿಂದ ನಿಧನರಾದರು ಎಂದು ಮೋದಿನಗರದ ಎಸ್‌ಡಿಎಂ ನನಗೆ ತಿಳಿಸಿತು. ಘಟನೆಯ ನಂತರ ಎಸ್‌ಡಿಎಂ ಆಡಳಿತಾತ್ಮಕ ಅಂಶಗಳನ್ನು ಪರಿಶೀಲಿಸುತ್ತಿದೆ ಎಂದು ಮೋದಿನಗರದ ಸಹಾಯಕ ಪೊಲೀಸ್ ಆಯುಕ್ತ ಅಮಿತ್ ಸಕ್ಸೇನಾ ಹೇಳಿದ್ದಾರೆ. ನವೆಂಬರ್ ಆರಂಭದಿಂದ ರಾಜ್ಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ.

ಮತದಾರರ ಪಟ್ಟಿಗಳನ್ನು ನವೀಕರಿಸಲು ಕೈಗೊಂಡ ಚುನಾವಣಾ ಪ್ರಕ್ರಿಯೆಯಲ್ಲಿ ಅತಿಯಾದ ಕೆಲಸ, ಒತ್ತಡ ಮತ್ತು ಕಿರುಕುಳದ ಆರೋಪಗಳ ನಡುವೆ, ಉತ್ತರ ಪ್ರದೇಶವು ಎಸ್‍ಐಆರ್ ನಲ್ಲಿ ಭಾಗಿಯಾಗಿರುವ BLO ಗಳು ಮತ್ತು ಇತರ ಅಧಿಕಾರಿಗಳ ಆತ್ಮಹತ್ಯೆಗಳು ಮತ್ತು ಸಾವಿನ ಹಲವಾರು ಪ್ರಕರಣಗಳಿಗೆ ಸಾಕ್ಷಿಯಾಗಿದೆ.

ತಾಯಿ-ಮಗಳ ಕೊಲೆ ಆರೋಪಿ ಅರೆಸ್ಟ್

ಉತ್ತರ ಪ್ರದೇಶದ ಗೋರಖ್‌ಪುರದ ಘೋಷಿಪೂರ್ವ ಪ್ರದೇಶದಲ್ಲಿ ತಾಯಿ ಮತ್ತು ಮಗಳ ಸಂಚಲನ ಮೂಡಿಸಿದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಘಟನೆ ನಡೆದ ಹನ್ನೊಂದು ದಿನಗಳ ನಂತರ, ಗೋರಖ್‌ಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಸಂತ್ರಸ್ತರ ಕುಟುಂಬಕ್ಕೆ ಪರಿಚಿತನಾಗಿದ್ದ. ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಆರೋಪಿಯನ್ನು ರಿತೇಶ್ ಎಂದು ಗುರುತಿಸಲಾಗಿದೆ.

ಆರೋಪಿಯು 55 ವರ್ಷದ ವಿಮಲಾ ಅವರನ್ನು ಆಂಟಿ ಎಂದು ಕರೆಯುತ್ತಿದ್ದ. ಅವನು ಕುಟುಂಬದ ಆಪ್ತ ಸದಸ್ಯನಂತೆ ಅವರ ಮನೆಗೆ ಭೇಟಿ ನೀಡುತ್ತಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಭಿನವ್ ತ್ಯಾಗಿ ಹೇಳಿದ್ದಾರೆ. ಈ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದಾನೆ. ನವೆಂಬರ್ 24 ರಂದು ವಿಮಲಾ ಮತ್ತು ಅವರ ತಾಯಿ ಶಾಂತಿ ದೇವಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದನು.

ಇಬ್ಬರು ಮಹಿಳೆಯರಿಗೆ ಕುಡಿಯಲು ಮದ್ಯ ನೀಡಿದ್ದಾನೆ. ನಂತರ ಅವನು ಅವರ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿ, ತಕ್ಷಣವೇ ಅವರನ್ನು ಹತ್ಯೆ ಮಾಡಿದ್ದಾನೆ. ಬಳಿಕ ಸುಮಾರು ರೂ. 4.5 ಲಕ್ಷ ನಗದು ಮತ್ತು ಚಿನ್ನದ ಬಳೆಯೊಂದಿಗೆ ಮನೆಯಿಂದ ಪರಾರಿಯಾಗಿದ್ದನು.