ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಮಗಳನ್ನು ಪ್ರೀತಿಸಿದ್ದಕ್ಕೆ ಕ್ರಿಕೆಟ್‌ ಬ್ಯಾಟ್‌ನಲ್ಲಿ ಹೊಡೆದು ಯವಕನನ್ನು ಕೊಂದ ಪೋಷಕರು!

ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಪ್ರೇಮಿಗಳಿಬ್ಬರ ನಡುವಿನ ಪ್ರೀತಿ ಹುಡುಗನ ಸಾವಿಗೆ ಕಾರಣವಾಗಿದೆ. ಹುಡುಗ ಮತ್ತು ಹುಡುಗಿ ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಅರಿತ ಹುಡುಗಿಯ ಪೋಷಕರು ಮದುವೆಯ ಕುರಿತು ಮಾತನಾಡಲು ಮನೆಗೆ ಕರೆದು ಹುಡುಗನಿಗೆ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿರುವುದಾಗಿ ವರದಿಯಾಗಿದೆ.

ಮಗಳನ್ನು ಪ್ರೀತಿಸಿದ್ದಕ್ಕೆ  ಯುವಕನ ಕೊಲೆ ಮಾಡಿದ ಷೋಷಕರು!

ಕೊಲೆಯಾದ ಯುವಕ -

Vishakha Bhat
Vishakha Bhat Dec 11, 2025 3:32 PM

ಅಮರಾವತಿ: ತೆಲಂಗಾಣದ (Telangana) ಸಂಗರೆಡ್ಡಿ ಜಿಲ್ಲೆಯ ಪ್ರೇಮಿಗಳಿಬ್ಬರ ನಡುವಿನ ಪ್ರೀತಿ ಹುಡುಗನ ಸಾವಿಗೆ (Murder Case) ಕಾರಣವಾಗಿದೆ. ಹುಡುಗ ಮತ್ತು ಹುಡುಗಿ ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಅರಿತ ಹುಡುಗಿಯ ಪೋಷಕರು ಮದುವೆಯ ಕುರಿತು ಮಾತನಾಡಲು ಮನೆಗೆ ಕರೆದು ಹುಡುಗನಿಗೆ ಬ್ಯಾಟ್‌ನಿಂದ ಹೊಡೆದು ಕೊಂದಿರುವುದಾಗಿ ವರದಿಯಾಗಿದೆ. ಇವರಿಬ್ಬರ ನಡುವಿನ ಪ್ರೀತಿಗೆ ಹುಡುಗಿಯರ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಹಿಂದೆ ಈತನಿಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಇದರ ಹೊರತಾಗಿಯೂ, ಈ ಇಬ್ಬರು ಪ್ರೀತಿಸುತ್ತಿದ್ದರು. ಈ ಹಿನ್ನೆಲೆ ಕೊಲೆಗೈದಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಮೃತ ಹುಡಗನನ್ನು ದ್ವಿತೀಯ ವರ್ಷದ ಬಿ ಟೆಕ್‌ ಇಂಜಿನಿಯರಿಂಗ್‌ ವಿದ್ಯಾರ್ಥಿ ಜ್ಯೋತಿ ಶ್ರವಣ್‌ ಸಾಯಿ ಎಂದು ಗುರಿತಸಲಾಗಿದೆ.

ಶ್ರವಣ್‌ ಕುತುಬುಲ್ಲಾಪುರದ ಬಾಡಿಗೆ ರೂಮ್‌ವೊಂದರಲ್ಲಿ ವಾಸವಾಗಿದ್. ಇನ್ನು ಈ ಬಗ್ಗೆ ಅಮೀನ್‌ಪುರದ ಸರ್ಕಲ್‌ ಇನ್ಸ್ಪೆಕ್ಟರ್‌ ನರೇಶ್‌ ಮಾಹಿತಿ ಹಂಚಿಕೊಂಡಿದ್ದು, "ಶ್ರವಣ್‌ ಬೀರಮ್‌ಗುಡದ ಇಸುಕಬಾವಿ ನಿವಾಸಿಯಾಗಿದ್ದು, 19 ವರ್ಷದ ಶ್ರೀಜಾ ಜೊತೆ ಸಂಬಂಧ ಹೊಂದಿದ್ದ. ಈ ವಿಷಯ ಹುಡುಗಿಯ ಕುಟುಂಬದ ಗಮನಕ್ಕೆ ಬಂದಿದ್ದು, ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಘಟನೆ ನಡೆದ ದಿನ ಶ್ರೀಜಾಳ ಪೋಷಕರು ಈ ಇಬ್ಬರ ನಡುವಿನ ಮದುವೆ ಮಾತುಕತೆಗೆಂದು ಶ್ರವಣ್‌ನನ್ನು ಮನೆಗೆ ಕರೆಸಿಕೊಂಡಿದ್ದರು. ಆತ ಮನೆಗೆ ಬರುತ್ತಿದ್ದಂತೆ ಶ್ರೀಜಾಳ ತಾಯಿ ಸೇರಿದಂತೆ ಆತನ ಮೇಲೆ ಕ್ರಿಕೆಟ್‌ ಬ್ಯಾಟ್‌ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆತನ ತಲೆಗೆ ಬಲವಾಗಿ ಏಟು ಬಿದ್ದಿದ್ದು, ಕಾಲು ಮತ್ತು ಪಕ್ಕೆಲುಬುಗಳು ಮುರಿದಿವೆ" ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತ ಗಣೇಶ್‌ ಗೌಡ ಕೊಲೆ ಕೇಸ್‌: ಬಜರಂಗ ದಳ ಕಾರ್ಯಕರ್ತ ಮಿಥುನ್‌ ಬಂಧನ

ಬಳಿಕ ಆತನನ್ನು ಕುಕತ್ಪಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಇನ್ನು ಘಟನೆಯ ಬಗ್ಗೆ ಅಮೀನ್‌ಪುರದಲ್ಲಿ ಪೋಲಿಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಬ್ಯಾಟ್‌ ವಶಪಡಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೋಲಿಸರು ಈ ಘಟನೆಯ ಮುಖ್ಯ ಉದ್ದೇಶ ಮತ್ತು ಈ ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆಸಿದ್ದಾರೆ.