ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Murder Case: ಇಬ್ಬರು ಗಂಡಂದಿರನ್ನು ಬಿಟ್ಟು ಮೂರನೆಯ ಪ್ರಿಯಕರನಿಂದ ಹತ್ಯೆಯಾದ ಮಹಿಳೆ

ತಂದೆ-ತಾಯಿಗೆ ಒಬ್ಬಳೇ ಹೆಣ್ಣು ಮಗಳಾದ ತೇಜಸ್ವಿನಿ 20ನೇ ವಯಸ್ಸಿನಲ್ಲೇ ಓಡಿ ಹೋಗಿ ಲವ್ ಮ್ಯಾರೇಜ್ ಆಗಿದ್ದಳು. ಒಂದು ಮಗು ಆದ ಬಳಿಕ ಕುಟುಂಬ ಕಲಹ ಉಂಟಾಗಿ ಆತನನ್ನು ದೂರ ಮಾಡಿ ಮತ್ತೊಬ್ಬನ ಜೊತೆ ಓಡಿ ಹೋಗಿ ಮದ್ವೆಯಾಗಿದ್ದಳು. ಆತನಿಂದಲೂ ಒಂದು ಮಗುವಾದ ಬಳಿಕ ಆತನಿಂದಲೂ ದೂರವಾಗಿ ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಳು. ಇದೇ ಸಂದರ್ಭದಲ್ಲಿ ಸಂದೀಪ್ ಎನ್ನುವ ಯುವಕನೊಂದಿಗೆ ಲಿವಿಂಗ್ ರಿಲೇಶನ್ ಶಿಪ್​​ನಲ್ಲಿದ್ದಳು.

ಇಬ್ಬರು ಗಂಡಂದಿರನ್ನು ಬಿಟ್ಟು ಪ್ರಿಯಕರನಿಂದ ಹತ್ಯೆಯಾದ ಮಹಿಳೆ

ಕೊಲೆಯಾದ ತೇಜಸ್ವಿನಿ -

ಹರೀಶ್‌ ಕೇರ
ಹರೀಶ್‌ ಕೇರ Mar 3, 2026 7:46 AM

ಚಿಕ್ಕಬಳ್ಳಾಪುರ, ಮಾರ್ಚ್ 03: ನಗರದ ಶಾಂತಿನಗರ ಬಡಾವಣೆ ನಿವಾಸಿಯೊಬ್ಬಳು ತನ್ನ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ. ಈಕೆಗೆ ಈ ಹಿಂದೆ ಎರಡು ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದಾರೆ. 30 ವರ್ಷ ವಯಸ್ಸಿನ ಈಕೆಯನ್ನು ತೇಜಸ್ವಿನಿ ಎಂದು ಗುರುತಿಸಲಾಗಿದೆ. ಗಂಡನನ್ನು ತೊರೆದು ಬಂದ ಪ್ರೇಯಸಿಗೆ ಪ್ರಿಯಕರ ಚಾಕುವಿನಿಂದ ಇರಿದಿದ್ದು, ಮಕ್ಕಳು ಅನಾಥರಾಗಿದ್ದಾರೆ.

ತಂದೆ-ತಾಯಿಗೆ ಒಬ್ಬಳೇ ಹೆಣ್ಣು ಮಗಳಾದ ತೇಜಸ್ವಿನಿ 20ನೇ ವಯಸ್ಸಿನಲ್ಲೇ ಓಡಿ ಹೋಗಿ ಲವ್ ಮ್ಯಾರೇಜ್ ಆಗಿದ್ದಳು. ಒಂದು ಮಗು ಆದ ಬಳಿಕ ಕುಟುಂಬ ಕಲಹ ಉಂಟಾಗಿ ಆತನನ್ನು ದೂರ ಮಾಡಿ ಮತ್ತೊಬ್ಬನ ಜೊತೆ ಓಡಿ ಹೋಗಿ ಮದ್ವೆಯಾಗಿದ್ದಳು. ಆತನಿಂದಲೂ ಒಂದು ಮಗುವಾದ ಬಳಿಕ ಆತನಿಂದಲೂ ದೂರವಾಗಿ ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಳು. ಇದೇ ಸಂದರ್ಭದಲ್ಲಿ ಸಂದೀಪ್ ಎನ್ನುವ ಯುವಕನೊಂದಿಗೆ ಲಿವಿಂಗ್ ರಿಲೇಶನ್ ಶಿಪ್​​ನಲ್ಲಿದ್ದಳು. ಇದಾಗಿ ಸ್ವಲ್ಪ ದಿನದಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ.

ಇಬ್ಬರನ್ನು ಮದುವೆಯಾಗಿದ್ದ ತೇಜಸ್ವಿನಿ

ತೇಜಸ್ವಿನಿಗೆ 20 ವರ್ಷ ತುಂಬುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸೀಕಲ್ ಗ್ರಾಮದ ಶ್ರೀನಿವಾಸ್ ಎನ್ನುವಾತನನ್ನು ಪ್ರೀತಿಸಿ, ಮನೆಯಲ್ಲಿ ಹೇಳದೇ ಕೇಳದೇ ಆತನ ಹಿಂದೆ ಹೋಗಿ ಆತನನ್ನೇ ಮದುವೆ ಮಾಡಿಕೊಂಡಿದ್ದಳು. ಇಬ್ಬರಿಗೆ ಯುವರಾಜ್ ಎನ್ನುವ ಮಗ ಹುಟ್ಟಿದ್ದ. ಆದರೆ ಕುಟುಂಬ ಕಲಹ ಹಿನ್ನಲೆಯಲ್ಲಿ ಗಂಡ ಶ್ರೀನಿವಾಸನನ್ನು ತೊರೆದು ತವರುಮನೆಯಲ್ಲಿ ನೆಲೆಸಿದ್ದಳು. ತೇಜಸ್ವಿನಿ 8 ವರ್ಷಗಳ ಹಿಂದೆ ಗಂಡ ಶ್ರೀನಿವಾಸನನ್ನು ತೊರೆದು ತವರು ಮನೆಯಲ್ಲಿದ್ದಾಗ 5 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲ್ಲೂಕಿನ ದಂಡಿಗಾನಹಳ್ಳಿ ಗ್ರಾಮದ ಚಂದ್ರಶೇಖರ್‌ ಎಂಬವರನ್ನು ಪ್ರೀತಿಸಿ, ಆತನ ಹಿಂದೆ ಹೋಗಿದ್ದಳು. ನಂತರ ಆತನನ್ನೇ ಮದುವೆ ಮಾಡಿಕೊಂಡು, ಇಬ್ಬರಿಗೂ ಜನಿಸಿದ 3 ವರ್ಷದ ಹೆಣ್ಣು ಮಗಳಿದ್ದಾಳೆ.

ನಂತರ ಚಂದ್ರಶೇಖರ್ ಜೊತೆಗೂ ಸಂಸಾರ ಸಾಕಾದ ಕಾರಣ ಆತನನ್ನು ತೊರೆದು, ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದಳು. ನಗರದ ಹೋಟೆಲ್‍ಗಳಲ್ಲಿ ಪಾತ್ರೆ ತೊಳೆದುಕೊಂಡು ಅಲ್ಲಿ-ಇಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕಿಕೊಂಡಿದ್ದಳು. ಹೀಗೆ ಮದುವೆಯೊಂದರ ರಿಷೆಪ್ಷನಿಸ್ಟ್ ಕೆಲಸಕ್ಕೆ ಹೋಗಿದ್ದಾಗ ಸಂದೀಪ್ ಎನ್ನುವ ಯುವಕ ಪರಿಚಯವಾಗಿದ್ದು, ಪರಿಚಯ ಸಂಬಂಧಕ್ಕೆ ತಿರುಗಿತ್ತು. ಸಂದೀಪ್‌ನೊಂದಿಗೆ 3ನೇ ಮದುವೆಗೆ ಸನ್ನದ್ದಳಾಗಿದ್ದಳು. ಸಂದೀಪ್‌ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತಮ್ಮನಹಳ್ಳಿ ಗ್ರಾಮದವನು.

ಫೆಬ್ರವರಿ 25 ರಂದು ಬೆಳಿಗ್ಗೆ 4 ಗಂಟೆ ಸಮಯದಲ್ಲಿ ಮಂಚದ ಮೇಲಿದ್ದ ಜೋಡಿ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಸಂದೀಪ್ ತೇಜಸ್ವಿನಿಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿ ಸಂದೀಪ್ ತಾನೇ ಆಕೆಯನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ನಿದ್ದೆಗಣ್ಣಲ್ಲಿ ಮಂಚದ ಮೇಲಿಂದ ಕೆಳಗೆ ಬಿದ್ದಾಗ ಏನೋ ಚುಚ್ಚಿಕೊಂಡಿದೆ ಎಂದು ವೈದ್ಯರಿಗೆ ಹೇಳಿ, ಏನೂ ಗೊತ್ತಿಲ್ಲದಂತೆ ಡ್ರಾಮಾ ಮಾಡಿದ್ದ.

ಹಣ, ಎಣ್ಣೆಗಾಗಿ ಪೀಡಿಸುತ್ತಿದ್ದಳು

ಅನುಮಾನಗೊಂಡು ಮನೆಯಲ್ಲಿದ್ದ ತೇಜಸ್ವಿನಿ ಮಗನನ್ನು ವಿಚಾರಿಸಿದಾಗ ಸತ್ಯ ಬಯಲಾಗಿತ್ತು. ತಾಯಿ ಹಾಗೂ ಸಂದೀಪ್ ರಾತ್ರಿ ಜಗಳ ಮಾಡಿಕೊಂಡಿದ್ದರು. ಸಂದೀಪ್‍ನೇ ತಾಯಿಯ ಹೊಟ್ಟೆಗೆ ಚಾಕು ಚುಚ್ಚಿದ್ದಾನೆಂದು ತನ್ನ ಸಂಬಂಧಿಕರಿಗೆ ತಿಳಿಸಿದ್ದ. ಮೃತಳ ಅಣ್ಣ ಗಿರೀಶ್ ಚಿಕ್ಕಬಳ್ಳಾಪುರ ನಗರಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಸಂದೀಪ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪ್ರಿಯತಮೆ ತೇಜಸ್ವಿನಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಹಾಗೂ ಹಣ, ಎಣ್ಣೆಗಾಗಿ ಪೀಡಿಸುತ್ತಿದ್ದಳು. ಇದರಿಂದ ಹತಾಶನಾಗಿ ಚಾಕುವಿನಿಂದ ಚುಚ್ಚಿದ್ದಾಗಿ ಒಪ್ಪಿಕೊಂಡಿದ್ದಾನೆ.