ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇವಾಲಯದ ಬೀಗ ಮುರಿದು 12 ಲಕ್ಷ ಮೌಲ್ಯದ ಬೆಳ್ಳಿ, ಚಿನ್ನಾಭರಣ ಕಳ್ಳತನ

ದೇವಾಲಯಗಳ ಬೀಗ ಮುರಿದು ದೇವರ ವಿಗ್ರಹದ ಮೇಲಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ ಬೆಳ್ಳಿ ಮತ್ತು ಸುಮಾರು 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ಹಾಸನದಅರಸೀಕೆರೆಯ ಚಿಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಂಗ್ರಹ ಚಿತ್ರ

ಹಾಸನ: ದೇವಾಲಯಗಳ ಬೀಗ ಮುರಿದು ದೇವರ ವಿಗ್ರಹದ ಮೇಲಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ ಬೆಳ್ಳಿ ಮತ್ತು ಸುಮಾರು 2.25 ಲಕ್ಷ ರೂ. (Haasan News) ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ಹಾಸನದಅರಸೀಕೆರೆಯ ಚಿಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶ್ರೀ ಶಂಕರೇಶ್ವರಸ್ವಾಮಿ ದೇವಸ್ಥಾನ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ಆ.31 ರ ರಾತ್ರಿ 11:50 ರವರೆಗೆ ದೇವರ ಪೂಜೆ ಸಲ್ಲಿಸಿ ದೇವಾಲಯದ ಬಾಗಿಲಿಗೆ ಬೀಗ ಹಾಕಿಕೊಂಡು ತೆರಳಲಾಗಿತ್ತು. ಮರುದಿನ ಬೆಳಿಗ್ಗೆ ಕಳ್ಳತನ ನಡೆದಿದೆ ಎಂದು ತಿಳಿದು ಬಂದಿದೆ.

ಬೆಳ್ಳಿಯ 40 ಚತ್ರಿಗಳು, 1 ಬೆಳ್ಳಿಯ ಹಣೆ ಪಟ್ಟಿ, 3 ಬೆಳ್ಳಿಯ ನಾಗಾಭರಣ, 3 ಬೆಳ್ಳಿಯ ಲಿಂಗದ ಕಾಯಿ, 2 ಬೆಳ್ಳಿಯ ನರಿಗೆ, 2 ಬೆಳ್ಳಿಯ ಗಿಳಿ, 2 ಬೆಳ್ಳಿಯ ನಿಂಬೆಹಣ್ಣು, 2 ಬೆಳ್ಳಿಯ ಕೋಡಣಸು, 1 ಬೆಳ್ಳಿಯ ಮುಖವಾಡ ಸೇರಿ ಸುಮಾರು 12,00,000 ರೂ ಬೆಲೆ ಬಾಳುವ ಒಟ್ಟು 12 ಕೆಜಿ ಬೆಳ್ಳಿ ಹಾಗೂ ಪಾರ್ವತಿ ಮೇಲಿದ್ದ 1 ಚಿನ್ನದ ಮಾಂಗಲ್ಯ. 2 ಕಾಸು ಹಾಗೂ 10 ಗ್ರಾಂ ಚಿನ್ನದ ಗುಂಡು ಸೇರಿ ಅಂದಾಜು 2,00,000 ರೂ.‌ ಮೌಲ್ಯದ ಒಟ್ಟು 35 ಗ್ರಾಂ ಚಿನ್ನದ ಆಭರಣ ಮತ್ತು ಹುಂಡಿಯನ್ನು ಕಳ್ಳತನ ಮಾಡಲಾಗಿದೆ.

ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಶ್ರೀಚೌಡಮ್ಮ ದೇವಸ್ಥಾನದಲ್ಲಿ ಸಹ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಚೌಡೇಶ್ವರಿದೇವರ ಮೂರ್ತಿಗೆ ಭಕ್ತಾಧಿಗಳು ಕೊಟ್ಟಿದ್ದ 1 ಚಿನ್ನದ ಮಾಂಗಲ್ಯ ಸರ, 2 ಚಿನ್ನದ ಕಾಸು, 2 ಚಿನ್ನದ ಗುಂಡುಗಳು ಸೇರಿ ಅಂದಾಜು 25000 ಮೌಲ್ಯದ 5 ಗ್ರಾಂ ಚಿನ್ನಾಭರಣ ಹಾಗೂ ದೇವಾಲಯದಲ್ಲಿದ್ದ ಹುಂಡಿಯನ್ನು ಕಳ್ಳತನ ಮಾಡಲಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗ್ಗಿನ ಜಾವ ನಿದ್ದೆಯಲ್ಲಿದ್ದ ಸಿಬ್ಬಂದಿಗಳ ಮೊಬೈಲ್ ಕಳ್ಳತನ: ರೆಡ್‌ಹ್ಯಾಂಡಾಗಿ ಹಿಡಿದು ಖದೀಮನನ್ನು ಕುರ್ಚಿಗೆ ಕಟ್ಟಿ ಹಾಕಿದ ಸೆಕ್ಯುರಿಟಿ ಗಾರ್ಡ್!

ಪ್ರತ್ಯೇಕ ಘಟನೆಯಲ್ಲಿ, ತಿಂಡಿ ಖರೀದಿಸುವ ವಿಚಾರದಲ್ಲಿ ಹಣ ಪಾವತಿ ಕುರಿತು ನಡೆದ ಜಗಳದ ಬಳಿಕ ಇಬ್ಬರು ಅಪ್ರಾಪ್ತ ಬಾಲಕರ ಮೇಲೆ ಅಂಗಡಿಯಲ್ಲಿದ್ದ ಪೈಪ್‌ನಿಂದ ಹಲ್ಲೆ ನಡೆಸಿದ ಆರೋಪದಡಿ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಮಲಘಾಣ ಗ್ರಾಮದಲ್ಲಿ ಆಗಸ್ಟ್‌ 28ರಂದು ಈ ಘಟನೆ ನಡೆದಿದೆ. ಬಂಧಿತ ಅಂಗಡಿ ಮಾಲೀಕನನ್ನು ಅಶೋಕ್‌ ಮನೋಹರ್‌ ಪತ್ತಾರ್‌ ಎಂದು ಗುರುತಿಸಲಾಗಿದೆ.

Vishakha Bhat Heggar

View all posts by this author