ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಳಗ್ಗಿನ ಜಾವ ನಿದ್ದೆಯಲ್ಲಿದ್ದ ಸಿಬ್ಬಂದಿಗಳ ಮೊಬೈಲ್ ಕಳ್ಳತನ: ರೆಡ್‌ಹ್ಯಾಂಡಾಗಿ ಹಿಡಿದು ಖದೀಮನನ್ನು ಕುರ್ಚಿಗೆ ಕಟ್ಟಿ ಹಾಕಿದ ಸೆಕ್ಯುರಿಟಿ ಗಾರ್ಡ್!

Viral Video: ಮುಂಬೈನ ಮೆರೈನ್ ಡ್ರೈವ್‌ನಲ್ಲಿ ಖದೀಮನೊಬ್ಬ ಸೆಕ್ಯುರಿಟಿ ಗಾರ್ಡ್‌ಗಳ ಮೊಬೈಲ್ ಫೋನ್ ಗಳನ್ನೆ ಗುರಿಯಾಗಿಸಿಕೊಂಡು ಕಳ್ಳತನ ಮಾಡಲು ಮುಂದಾಗಿದ್ದಾನೆ. ಎಚ್ಚೆತ್ತ ಸಿಬ್ಬಂದಿ ಯೊಬ್ವರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಈ ರೋಚಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಮೊಬೈಲ್ ಕಳವು ಮಾಡುತ್ತಿದ್ದ ಖದೀಮನನ್ನು ರೆಡ್‌ ಹ್ಯಾಂಡಾಗಿ ಹಿಡಿದ ಸಿಬ್ಬಂದಿ

ಇಂಟರ್ ನೆಟ್ ಚಿತ್ರ -

Profile
Pushpa Kumari Aug 6, 2026 11:00 AM

ಮುಂಬೈ,ಆ. 5: ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲೇ ಕಳ್ಳತನ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇಂದು ದುಬಾರಿ ವಸ್ತುಗಳನ್ನು ಕೊಂಡೊಯ್ಯುವ ಮುನ್ನ ಜನರು ಜಾಗರೂಕರಾಗಿರ ಬೇಕಾಗುತ್ತದೆ. ಇದೀಗ ಮುಂಬೈನ ಮೆರೈನ್ ಡ್ರೈವ್‌ನಲ್ಲಿ ಖದೀಮನೊಬ್ಬ ಸೆಕ್ಯುರಿಟಿ ಗಾರ್ಡ್‌ಗಳ ಮೊಬೈಲ್ ಫೋನ್‌ಗಳನ್ನೆ ಗುರಿಯಾಗಿಸಿಕೊಂಡು ಕಳ್ಳತನ ಮಾಡಲು ಮುಂದಾಗಿದ್ದಾನೆ. ಎಚ್ಚೆತ್ತ ಸಿಬ್ಬಂದಿಯೊಬ್ವರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಈ ರೋಚಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.

ಮಂಗಳವಾರ ಬೆಳಗಿನ ಜಾವ ಮುಂಬೈನ ಮೆರೈನ್ ಡ್ರೈವ್‌ನಲ್ಲಿ ಈ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ವಸತಿ ಕಟ್ಟಡಗಳಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗಳಿಂದ ಮೊಬೈಲ್ ಫೋನ್ ಕದಿಯಲು ಕಳ್ಳನೊಬ್ಬ ಹೊಂಚುಹಾಕುತ್ತಿದ್ದ. ಆದರೆ ಸ್ಥಳೀಯ ಸಿಬ್ಬಂದಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಅಲ್ಲಿದ್ದ ಕುರ್ಚಿಗೆ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಡಿಯೋ ನೋಡಿ:

ಸಿಸಿಟಿವಿ ದೃಶ್ಯಾವಳಿಯಲ್ಲಿನ ಪ್ರಕಾರ, ಈ ಘಟನೆ ಬೆಳಗಿನ ಜಾವ 2:38 ರ ಸುಮಾರಿಗೆ ನಡೆದಿದೆ. ಆರೋಪಿಯು ಮೆರೈನ್ ಡ್ರೈವ್ ಪ್ರದೇಶದ ವಿವಿಧ ವಸತಿ ಕಟ್ಟಡಗಳಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗಳ ನಾಲ್ಕರಿಂದ ಐದು ಮೊಬೈಲ್ ಫೋನ್‌ ಗಳನ್ನು ಕದ್ದಿದ್ದ. ಮತ್ತೊಂದು ಕಟ್ಟಡದಲ್ಲಿ ಕದಿಯಲು ಹೋಗುತ್ತಿದ್ದಾಗ ಸಿಬ್ಬಂದಿಯೊಬ್ಬರು ಗಮನಿಸಿದ್ದಾರೆ. ತಕ್ಷಣ ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ.

Viral Video: ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಸಿಬ್ಬಂದಿಯೂ ಅವನು ತಪ್ಪಿಸಿಕೊಳ್ಳದಂತೆ ಗಟ್ಟಿಯಾದ ಹಗ್ಗವನ್ನು ಬಳಸಿ ಕುರ್ಚಿಗೆ ಕಟ್ಟಿ ಪೊಲೀಸರಿಗೆ ಮಾಹಿತಿ ನೀಡಿದರು. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು ಸುಮಾರು 20 ನಿಮಿಷಗಳ ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು ಆರೋಪಿಯನ್ನು ಕುರ್ಚಿಗೆ ಬಿಗಿಯಾಗಿ ಕಟ್ಟಿರುವುದನ್ನು ವಿಡಿಯೊ ತೋರಿಸುತ್ತದೆ..ಪೊಲೀಸರು ಆತನನ್ನು ಬಂಧಿಸಿದ್ದು ಮೊಬೈಲ್ ಕಳ್ಳತನ ಮಾಡಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ವಿಡಿಯೊ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಸಿಬ್ಬಂದಿಯ ಧೈರ್ಯ ಹಾಗೂ ಸಮಯ ಪ್ರಜ್ಞೆಗೆ ಮೆಚ್ಚುಗೆ ನೀಡಿದ್ದಾರೆ. ಬಳಕೆದಾರರೊಬ್ಬರು ಇಂತಹ ಖದೀಮರಿಗೆ ಇದೇ ರೀತಿಯ ಶಿಕ್ಷೆ ವಿಧಿಸಬೇಕೆಂದು ಬರೆದಿದ್ದಾರೆ.