ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ; ಇಬ್ಬರು ಮಕ್ಕಳು ಸಾವು

ಶಂಕಿತ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟಂತೆ ಮಣಿಪುರದ ಬಿಷ್ಣುಪುರದಲ್ಲಿ ನಡೆದಿದೆ. ಮೊಯಿರಾಂಗ್ ಟ್ರೋಂಗ್ಲಾಬಿಯಲ್ಲಿರುವ ನಿವಾಸದ ಮೇಲೆ ಶಂಕಿತ ಉಗ್ರರು ಮಂಗಳವಾರ ಬೆಳಗಿನ ಜಾವಾ ಬಾಂಬ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮಕ್ಕಳಿಬ್ಬರ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ಮಣಿಪುರ: ಬಾಂಬ್ ದಾಳಿಯಿಂದ (Bomb attack) ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಮಣಿಪುರದ (Manipur) ಬಿಷ್ಣುಪುರದಲ್ಲಿ (Bishnupur) ನಡೆದಿದೆ. ಮೊಯಿರಾಂಗ್ ಟ್ರೋಂಗ್ಲಾಬಿಯಲ್ಲಿ ಮನೆ ಮೇಲೆ ಶಂಕಿತ ಉಗ್ರರು ಮಂಗಳವಾರ ಬೆಳಗ್ಗೆ ಬಾಂಬ್ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಕ್ಕಳಿಬ್ಬರ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. 2024ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆದ ಬಳಿಕ ಇದು ಇಲ್ಲಿ ನಡೆದ ಅತ್ಯಂತ ಭಯಾನಕ ದಾಳಿಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ

ಮಣಿಪುರದ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿಯಲ್ಲಿರುವ ನಿವಾಸದ ಮೇಲೆ ಮಂಗಳವಾರ ಬೆಳಗ್ಗೆ ಸುಮಾರು 1 ಗಂಟೆ ವೇಳೆಯಲ್ಲಿ ಶಂಕಿತ ಉಗ್ರರು ಹಾರಿಸಿದ ಬಾಂಬ್ ದಾಳಿ ನಡೆಸಿದರು. ಮನೆಯೊಳಗಿನ ಮಲಗುವ ಕೋಣೆಯಲ್ಲಿ ತಾಯಿ, ಮಕ್ಕಳಿಬ್ಬರು ಮಲಗಿದ್ದು, ಐದು ವರ್ಷದ ಬಾಲಕ ಮತ್ತು ಆರು ತಿಂಗಳ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದೆಹಲಿ ವಿಧಾನಸಭೆಗೆ ನುಗ್ಗಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದ ಕುಟುಂಬ!

ಚುರಾಚಂದ್‌ಪುರದ ಬೆಟ್ಟದ ಸಮೀಪವಿರುವ ಮೊಯಿರಾಂಗ್ ಟ್ರೋಂಗ್ಲಾಬಿ ತಗ್ಗು ಪ್ರದೇಶವಾಗಿದೆ. 2023 ಮತ್ತು 2024ರಲ್ಲಿ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ತೀವ್ರವಾಗಿದ್ದಾಗ ಈ ಪ್ರದೇಶದ ಜನರು ನಿರಂತರ ಗುಂಡಿನ ದಾಳಿ ಮತ್ತು ಉಗ್ರಗಾಮಿ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದರು.

ಉಗ್ರರ ದಾಳಿಯನ್ನು ಸ್ಥಳೀಯ ಬಿಜೆಪಿ ಶಾಸಕ ತ್ ಶಾಂತಿ ಸಿಂಗ್ ಅವರು ಖಂಡಿಸಿದ್ದು, ಟ್ರೋಂಗ್ಲಾಬಿ ಅವಾಂಗ್ ಲೈಕೈನಲ್ಲಿ ನಡೆದಿರುವುದು ಕ್ರೂರ ದಾಳಿಯಾಗಿದೆ. ಇದನ್ನು ಕುಕಿ ಮಾದಕ ದ್ರವ್ಯ ವ್ಯಸನಿ ಭಯೋತ್ಪಾದಕರು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ರೆಡಿಮೇಡ್‌ ದೋಸೆ ಹಿಟ್ಟು ತಿಂದು ಇಬ್ಬರು ಮಕ್ಕಳು ಸಾವು; ಪೋಷಕರ ಸ್ಥಿತಿ ಚಿಂತಾಜನಕ!

ಮೃತರ ಕುಟುಂಬಕ್ಕೆ ತಮ್ಮ ಸಂತಾಪ ಸೂಚಿಸಿದ ಅವರು, ಇದು ಭಯೋತ್ಪಾದನೆಯ ಕೃತ್ಯಕ್ಕಿಂತ ಕಡಿಮೆಯಲ್ಲ. ಇಂತಹ ಅಮಾನವೀಯ ಕೃತ್ಯಗಳಿಗೆ ನಮ್ಮ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ ಮತ್ತು ಸಾಧ್ಯವಾದಷ್ಟು ಕಠಿಣ ಪದಗಳಲ್ಲಿ ಖಂಡಿಸಬೇಕು ಎಂದು ತಿಳಿಸಿದರು.

ಕ್ರೂರ ರೀತಿಯಲ್ಲಿ ಪ್ರಾಣ ಕಳೆದುಕೊಂಡ, ಅಮಾಯಕ ಜೀವಗಳಿಗೆ ನಾನು ನನ್ನ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ. ಇದು ಊಹಿಸಲಾಗದ ದುಃಖದ ಸಮಯ. ಮೃತರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳನ್ನು ಸೂಚಿಸುವುದಾಗಿ ಅವರು ತಿಳಿಸಿದರು.

ಉತ್ತರಪ್ರದೇಶದಲ್ಲಿ ಶಂಕಿತ ಭಯೋತ್ಪಾದಕನ ಬಂಧನ

ದೆಹಲಿ ಪೊಲೀಸರ ವಿಶೇಷ ಘಟಕವುಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದೊಂದಿಗೆ ಸೇರಿ ಉತ್ತರ ಪ್ರದೇಶದ ಖುಷಿನಗರದಲ್ಲಿ ಶಂಕಿತ ಐಸಿಸ್ ಭಯೋತ್ಪಾದಕ ರಿಜ್ವಾನ್ ಅಹ್ಮದ್‌ ಎಂಬಾತನನ್ನು ಬಂಧಿಸಿದೆ. ಐಸಿಸ್‌ನೊಂದಿಗೆ 2015ರಿಂದ ರಿಜ್ವಾನ್ ಅಹ್ಮದ್ ಸಂಪರ್ಕ ಹೊಂದಿದ್ದು, ಆತ ಭಾರತದೊಳಗಿನ ನೇಮಕಾತಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಆತ ಅನೇಕರ ಬ್ರೈನ್ ವಾಶ್ ಮಾಡಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದ್ದನು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ರಿಜ್ವಾನ್ ಬಂಧನದ ವೇಳೆ ಆತನ ಬಳಿ ಇದ್ದ ಬಾಂಬ್ ತಯಾರಿಸುವ ವಸ್ತುಗಳು, ಅಪರಾಧ ದಾಖಲೆಗಳು ಮತ್ತು ಜಿಹಾದಿ ಸಾಹಿತ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಭಯೋತ್ಪಾದನೆ ಚಟುವಟಿಕೆ ಸಂಬಂಧಿಸಿ ಬಂಧಿಸಲಾಗಿತ್ತು. 2015ರಲ್ಲಿ ಬಂಧನಕ್ಕೆ ಒಳಗಾಗಿದ್ದ ಆತನನ್ನು ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿತ್ತು. ರಿಜ್ವಾನ್ ಅಹ್ಮದ್ ಬಂಧನದಿಂದ ದೇಶದಲ್ಲಿ ಸ್ಲೀಪರ್ ಸೆಲ್‌ಗಳು, ಹಳೆಯ ಭಯೋತ್ಪಾದಕ ಜಾಲಗಳ ಸಕ್ರಿಯಗೊಂಡಿರುವ ಸಾಧ್ಯತೆ ಬಗ್ಗೆ ಭದ್ರತಾ ಸಂಸ್ಥೆಗಳಲ್ಲಿ ಕಳವಳ ವ್ಯಕ್ತಪಡಿಸಿವೆ.

ರಿಜ್ವಾನ್ ಅಹ್ಮದ್ ಉಗ್ರರ ನೇಮಕ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ಆತ ವಿದೇಶಿ ಉಗ್ರರೊಂದಿಗೆ ನೇರ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಐಸಿಸ್ ನಲ್ಲಿ ಆತನ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author