ಭಯೋತ್ಪಾದಕ ಬೆದರಿಕೆ; ಭಾರತೀಯ ಮೂಲದ ವಿದ್ಯಾರ್ಥಿ ಬಂಧನ
ಭಯೋತ್ಪಾದಕ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಡಲ್ಲಾಸ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿ ಮನೋಜ್ ಸಾಯಿ ಲೆಲ್ಲಾ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆತ ತನ್ನ ಮನೆಗೆ ಬೆಂಕಿ ಹಚ್ಚಿ, ಕುಟುಂಬಕ್ಕೆ ಭಯೋತ್ಪಾದಕ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
(ಸಂಗ್ರಹ ಚಿತ್ರ) -
ಹೂಸ್ಟನ್: ಕುಟುಂಬ ಸದಸ್ಯರಿಗೆ ಭಯೋತ್ಪಾದ ಬೆದರಿಕೆ (terror threat) ಒಡ್ಡಿದ ಆರೋಪದಲ್ಲಿ ಡಲ್ಲಾಸ್‌ನ (dallas) ಟೆಕ್ಸಾಸ್ ವಿಶ್ವವಿದ್ಯಾಲಯದ (University of Texas ) ಹಿರಿಯ ವಿದ್ಯಾರ್ಥಿ ಭಾರತೀಯ ಮೂಲದ ಮನೋಜ್ ಸಾಯಿ ಲೆಲ್ಲಾ ಎಂಬವರನ್ನು ಬಂಧಿಸಲಾಗಿದೆ. ಆತ ತನ್ನ ಮನೆಗೆ ಬೆಂಕಿ ಹಚ್ಚಿ, ಕುಟುಂಬಕ್ಕೆ ಭಯೋತ್ಪಾದಕ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಮನೋಜ್ ಲೆಲ್ಲಾ ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆ (mental health) ಇರುವುದಾಗಿ ಆತನ ಕುಟುಂಬ ಸದಸ್ಯರು ದೂರಿದ ಬಳಿಕ ಆತ ತನ್ನ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದಾನೆ. ಆತನನ್ನು ನಿಯಂತ್ರಿಸಲು ಫ್ರಿಸ್ಕೊ ಪೊಲೀಸರಿಗೆ (Frisco police) ದೂರು ನೀಡಿದರು. ಅನಂತರ ಆತನನ್ನು ಬಂಧಿಸಲಾಯಿತು.
ಅಧಿಕೃತ ದಾಖಲೆಗಳ ಪ್ರಕಾರ 22 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿ ಮನೋಜ್ ಸಾಯಿ ಲೆಲ್ಲಾ ಅವರು ಬೆಂಕಿ ಹಚ್ಚಿ ಮತ್ತು ಕುಟುಂಬ ಸದಸ್ಯರಿಗೆ ಭಯೋತ್ಪಾದಕ ಬೆದರಿಕೆ ಒಡ್ಡಿದ್ದರಿಂದ ಆತನನ್ನು ಸೋಮವಾರ ಫ್ರಿಸ್ಕೊ ಪೊಲೀಸರು ಬಂಧಿಸಿದ್ದಾರೆ.
Harassment: ಬೆಂಗಳೂರಿನ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವತಿಗೆ ಪುಂಡರಿಂದ ಕಿರುಕುಳ
ಆತ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಕುಟುಂಬ ಸದಸ್ಯರು ದೂರು ನೀಡಿದ ಬಳಿಕ ಆತ ಬೆದರಿಕೆ ಹಾಕಿದ್ದಾನೆ. ಇದಕ್ಕೂ ಮೊದಲು ಆತ ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೋಜ್ ಸಾಯಿ ಲೆಲ್ಲಾ ವಿರುದ್ಧ ಮನೆ ಅಥವಾ ಧಾರ್ಮಿಕ ಸ್ಥಳಕ್ಕೆ ಹಾನಿ ಮಾಡುವ ಉದ್ದೇಶದಿಂದ ಬೆಂಕಿ ಹಚ್ಚಿದ ಪ್ರಕರಣ ದಾಖಲಾಗಿದೆ.
ಹೆಂಡತಿ ಕೊಲೆಗೆ ಗಂಡನಿಂದಲೇ ಸುಪಾರಿ
ಹೆಂಡತಿ ತನಗೆ ಮರ್ಯಾದೆ ಕೊಡುವುದಿಲ್ಲವೆಂಬ ಕಾರಣಕ್ಕೆ ಆಕೆಯನ್ನು ಕೊಲ್ಲಲು ಗಂಡನೇ ಸುಪಾರಿ ಕೊಟ್ಟ ಘಟನೆ ಮೈಸೂರಿನ ಬಿಎಂಶ್ರೀ ನಗರದಲ್ಲಿ ಇತ್ತೀಚೆಗೆ ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಆಕೆಯ ಗಂಡ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.
ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಮಹೇಶ್ ಎಂಬಾತ ತನ್ನ ಪತ್ನಿ ನಾಗರತ್ನ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ. ಗಂಡನ ದುಡಿದು ತಂದ ಹಣವನ್ನು ಬಡ್ಡಿಗೆ ಕೊಡುತ್ತಿದ್ದ ಆಕೆ ಮಹೇಶ್ಗೆ ಹಣ ನೀಡುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಮಹೇಶ್ ಆಕೆ ತನಗೆ ಮರ್ಯಾದೆ ಕೊಡುತ್ತಿಲ್ಲ ಎಂದು ಭಾವಿಸಿ ಕೊಲೆಗೆ ಸಂಚು ರೂಪಿಸಿದ್ದ.
ಮೆಟ್ರೋದಲ್ಲಿ ಯುವತಿ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ 45 ವರ್ಷದ ಅಂಕಲ್
ವಿರಾಜಪೇಟೆ ಮೂಲದ ಭಾಸ್ಕರ್ ಮತ್ತು ಅಭಿಷೇಕ್ ಎಂಬವರು ನಾಗರತ್ನ ಒಬ್ಬರೇ ಇರುವ ಸಮಯ ನೋಡಿಕೊಂಡು ಮನೆಗೆ ಬಂದಿದ್ದು, ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದರು. ಬಳಿಕ ಗ್ಯಾಸ್ ಸಿಲಿಂಡರ್‌ಗಳನ್ನು ಸೋರಿಕೆ ಮಾಡಿ ಬೆಂಕಿ ಹಚ್ಚಿ ಅಗ್ನಿ ಅವಘಡ ಎಂದು ಬಿಂಬಿಸಲು ಯತ್ನಿಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ನಾಗರತ್ನ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಹೇಶ್, ಭಾಸ್ಕರ್, ಅಭಿಷೇಕ್ ಅವರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.