ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಯೋಧ್ಯೆ ರಾಮ ಮಂದಿರದ ಮೇಲೆ ದೃಷ್ಟಿ ನೆಟ್ಟ ಭಯೋತ್ಪಾದಕರು?: ಹಫೀಜ್ ಸಯೀದ್ ಅಳಿಯ ಸೇರಿದಂತೆ 23 ಮಂದಿಯ ಗುರುತು ಪತ್ತೆ

ಅಯೋಧ್ಯೆ ರಾಮ ಮಂದಿರದ ಮೇಲೆ ಭಯೋತ್ಪಾದಕರು ಕಣ್ಣಿಟ್ಟಿದ್ದಾರೆ. ಇದರಲ್ಲಿ ಭಯೋತ್ಪಾದಕ ಹಫೀಜ್ ಸಯೀದ್ ಅಳಿಯ ಕೂಡ ಸೇರಿದ್ದಾನೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಈ ಕುರಿತು ಶನಿವಾರ ಮಾಹಿತಿ ನೀಡಿರುವ ಗೃಹ ಸಚಿವಾಲಯ ಗುಪ್ತಚರ ಇಲಾಖೆ ಗುರುತಿಸಿರುವ ಭಯೋತ್ಪಾದಕರು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದಾರೆ ಏನು ಹೇಳಿದೆ.

ಸಂಗ್ರಹ ಚಿತ್ರ

ನವದೆಹೆಲಿ: ಅಯೋಧ್ಯೆ ರಾಮ ಮಂದಿರದ (ayodhye ram mandir) ಮೇಲೆ ಭಯೋತ್ಪಾದಕ ಹಫೀಜ್ ಸಯೀದ್ (Hafiz Saeed) ಅಳಿಯ ಸೇರಿದಂತೆ ಹಲವು ಮಂದಿ ನಿಗಾ ಇರಿಸಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ಕೇಂದ್ರ ಗೃಹ ಸಚಿವಾಲಯ (home ministry) ತಿಳಿಸಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (POJK)ದಲ್ಲಿ ನೆಲೆಸಿರುವ 23 ಭಯೋತ್ಪಾದಕರು ಇದರಲ್ಲಿ ಸೇರಿದ್ದಾರೆ. ಇವರನ್ನು ಭಯೋತ್ಪಾದನಾ ವಿರೋಧಿ ಕಾನೂನಿನ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ (UAPA) ಭಯೋತ್ಪಾದಕರು ಎಂದು ಗುರುತಿಸಲಾಗಿದೆ ಎಂದು ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯ ಪಟ್ಟಿ ಮಾಡಿರುವ ರಾಮ ಮಂದಿರದ ಮೇಲೆ ನಿಗಾ ಇರಿಸಿದ್ದ 23 ಭಯೋತ್ಪಾದಕರು ಭಾರತವನ್ನು ಗುರಿಯಾಗಿಸಿಕೊಂಡು ಒಳನುಸುಳುವಿಕೆ, ನೇಮಕಾತಿ, ಹಣಕಾಸು ಮತ್ತು ದಾಳಿಗಳಿಗೆ ಸಂಚು ರೂಪಿಸುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಜೊತೆ ನಂಟು ಹೊಂದಿದ್ದಾರೆ. ಇವರಲ್ಲಿ ಆರು ಮಂದಿ ಭಾರತೀಯ ಪ್ರಜೆಗಳಾಗಿದ್ದು, ಕೆಲವರು ಪಾಕಿಸ್ತಾನ ಅಥವಾ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದೆ.

ಆತ್ಮಹತ್ಯಾ ಬಾಂಬ್ ದಾಳಿ: 30 ಪಾಕಿಸ್ತಾನಿ ಅರೆಸೈನಿಕ ಸಿಬ್ಬಂದಿಯ ಹತ್ಯೆ ಎಂದ BLA

ಲಷ್ಕರ್-ಎ-ತೈಬಾದ ಸಂಸ್ಥಾಪಕ ಹಫೀಜ್ ಮುಹಮ್ಮದ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ನ ಸಹಚರರು, ದಾಳಿಯ ಮಾರ್ಗದರ್ಶಕರು, ದಾಳಿಗಾಗಿ ಭಯೋತ್ಪಾದಕರ ನೇಮಕಾತಿದಾರರು ಮತ್ತು ಹಣಕಾಸು ಸಂಯೋಜಕರು ಇದರಲ್ಲಿ ಸೇರಿದ್ದು, ಇವರು ರಾಮ ಮಂದಿರದ ಮೇಲೆ ದಾಳಿ ಮಾಡುವ ಗುರಿಯನ್ನು ಹೊಂದಿದ್ದರು.

ಭಯೋತ್ಪಾದಕ ಗುಂಪಿನಲ್ಲಿ ಗುರುತಿಸಲ್ಪಟ್ಟಿರುವ ಪಾಕಿಸ್ತಾನಿ ಜೆಇಎಂ ಕಾರ್ಯಕರ್ತ ಮೊಹಮ್ಮದ್ ಮುಸಾದಿಕ್ ಅಯೋಧ್ಯೆಯ ರಾಮ ಜನ್ಮಭೂಮಿ ಸಂಕೀರ್ಣ, ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿ ಮತ್ತು ಪಾಣಿಪತ್‌ನ ಐಒಸಿಎಲ್ ಸಂಸ್ಕರಣಾಗಾರದ ಮೇಲೆ ವಿಚಕ್ಷಣ ನಡೆಸಿದ್ದ. ಆತ ಲಸಿಯಾಕೋಟ್ ವಲಯದ ಲಾಂಚಿಂಗ್ ಕಮಾಂಡರ್ ಆಗಿದ್ದಾನೆ. ಸುರಂಗಗಳ ಮೂಲಕ ಭಾರತದೊಳಗೆ ಬಂದು ಹೋಗುತ್ತಿದ್ದು, ಡ್ರೋನ್‌ಗಳನ್ನು ಬಳಸಿ ತಮ್ಮ ಸಹಚರರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಕೆ ಮಾಡುತ್ತಿರುತ್ತಾನೆ.

ಅಯೋಧ್ಯೆ ರಾಮ ಮಂದಿರದ ದೇಣಿಗೆಯಿಂದ ಪ್ರತಿ ನಿತ್ಯ 6- 8 ಲಕ್ಷ ರೂ. ಕಳವು

ಸಂಘಟನೆಯ ಪ್ರಮುಖ ಸಂಯೋಜಕನಾಗಿರುವ ಮುಫ್ತಿ ಮಸೂದ್ ಇಲ್ಯಾಸ್, ಅಬು ಮೊಹಮ್ಮದ್ ಹೆಸರಿಂದ ಗುರುತಿಸಲ್ಪಟ್ಟಿರುವ ಪಾಕಿಸ್ತಾನಿ ಪ್ರಜೆ, ಮಸೂದ್ ಅಜರ್‌ನ ಆಪ್ತ ಸಹಚರ ಮಸೂದ್ ಇಲ್ಯಾಸ್ ಕಾಶ್ಮೀರಿ ಸಂಘಟನೆಗಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ, ಭಯೋತ್ಪಾದನೆಗೆ ಹಣವನ್ನು ಸಂಗ್ರಹಿಸುತ್ತಿದ್ದ ಎಂದು ಗೃಹ ಸಚಿವಾಲಯ ತಿಳಿಸಿದೆ. ಈತ ಜಮ್ಮುವಿನ ಸುಂಜ್ವಾನ್‌ನಲ್ಲಿರುವ ಪಿಡಿಪಿ ಕಚೇರಿ ಬಳಿಯ ಪೊಲೀಸ್ ಚೆಕ್‌ಪಾಯಿಂಟ್‌ನ ಮೇಲೆ 2022ರಲ್ಲಿ ದಾಳಿಯನ್ನು ನಡೆಸಲು ಸಂಚು ರೂಪಿಸಿದ್ದ ಎನ್ನುವ ಆರೋಪ ಕೂಡ ಇದೆ.

ಅಬು ಸಾದ್ ಅಥವಾ ಸಾದ್ ಜಿಮಿಕಿ ಎಂದು ಗುರುತಿಸಲ್ಪಟ್ಟಿರುವ ಮುಫ್ತಿ ಮೊಹಮ್ಮದ್ ಅಸ್ಗರ್ ಖಾನ್ ಜೆಇಎಂನ ಅಮೀರ್ ಮತ್ತು ಪಿಒಜೆಕೆಯಲ್ಲಿ ಅದರ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿದ್ದಾನೆ. ಈತ ನಗ್ರೋಟಾದಲ್ಲಿ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಈತ ಮುಜಫರಾಬಾದ್‌ನಲ್ಲಿ ಜಿಹಾದಿ ಮತ್ತು ಮಿಲಿಟರಿ ಸೂಚನೆಗಳನ್ನು ನೀಡುವ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾನೆ.

ಜೆಇಎಂ ಮತ್ತು ಹರ್ಕತ್-ಉಲ್-ಮುಜಾಹಿದ್ದೀನ್‌ನೊಂದಿಗೆ ಸಂಬಂಧ ಹೊಂದಿರುವ ಹಫೀಜ್ ಅಬ್ದುಲ್ ಶಕೂರ್ ಅಲಿಯಾಸ್ ಖಾರಿ ಜರಾರ್ ನಗ್ರೋಟಾ ಸೇನಾ ಶಿಬಿರದ ದಾಳಿ, ಸಾಂಬಾ-ಕಥುವಾ ವಲಯದ ಮೂಲಕ ಮೂವರು ಪಾಕಿಸ್ತಾನಿ ಭಯೋತ್ಪಾದಕರ ಒಳನುಸುಳುವಿಕೆಗೆ ಅನುಕೂಲ ಮಾಡಿಕೊಟ್ಟ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ.

ಜೆಇಎಂ ಕಾರ್ಯಕರ್ತನಾಗಿರುವ ಶಹನವಾಜ್ ಮತ್ತು ಅಲ್-ಹಿಜಾಮಾ ಎಂದು ಕರೆಯಲ್ಪಡುವ ಅಬ್ದುಲ್ಲಾ ಜಿಹಾದಿ ಕುಪ್ವಾರಾ ಮತ್ತು ಬಾರಾಮುಲ್ಲಾದಲ್ಲಿ ಭಯೋತ್ಪಾದಕ ಶಿಬಿರಗಳನ್ನು ಪ್ರಾರಂಭಿಸಿದವರಲ್ಲಿ ಒಬ್ಬನಾಗಿದ್ದಾನೆ. ಇನ್ನು ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿರುವ ಫಿರ್ದೌಸ್ ಅಹ್ಮದ್ ಭಟ್ ಕೂಡ ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದಾನೆ.

ಭಾರತದ ವಿರುದ್ಧ ಹಲವು ರೀತಿಯ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಜೆಇಎಂ ಜೊತೆ ನಂಟು ಹೊಂದಿರುವ ಗುಲಾಮ್ ಫರೀದ್ ಅಲಿಯಾಸ್ ಗುಲ್ಶನ್ ಕುಮಾರ್, ಎಲ್‌ಇಟಿ ಜೊತೆ ಸಂಪರ್ಕ ಹೊಂದಿರುವ ಭಾರತೀಯ ಪ್ರಜೆ ಹರೂನ್ ರಶೀದ್ ಗನೈ, ಭಾರತೀಯ ಪ್ರಜೆ ಬಿಲಾಲ್ ಅಹ್ಮದ್ ಮಿರ್ ಮುಜಫರಾಬಾದ್, ಪಿಒಜೆಕೆಯಲ್ಲಿ ನೆಲೆಸಿರುವ ಪ್ರಜೆ ಅಬಿದ್ ಖಯೂಮ್ ಲೋನ್, ಭಾರತೀಯ ನಜೀರ್ ಅಹ್ಮದ್ ಗುಜ್ಜರ್ ದೋಡಾ, ಎಲ್‌ಇಟಿ ಸಂಘಟನೆಯ ಹಿರಿಯ ನಾಯಕ ಅಬ್ದುಲ್ ರೌಫ್ , ಜೆಇಎಂ ಕಾರ್ಯಕರ್ತ ಅಶ್ಫಾಕ್ ಅಹ್ಮದ್ ಕೂಡ ಸೇರಿದ್ದಾರೆ.

ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವ ಭಯೋತ್ಪಾದಕರಲ್ಲಿ ಒಬ್ಬರಾದ ಎಲ್‌ಇಟಿ ಮತ್ತು ಜಮಾತ್-ಉದ್-ದವಾ ಜೊತೆ ಸಂಬಂಧ ಹೊಂದಿರುವ ಹಫೀಜ್ ಖಾಲಿದ್ ವಲೀದ್ ಭಯೋತ್ಪಾದಕ ಹಫೀಜ್ ಮೊಹಮ್ಮದ್ ಸಯೀದ್ ನ ಅಳಿಯ ಎಂದು ಗುರುತಿಸಲಾಗಿದೆ. ಹಫೀಜ್ ಮೊಹಮ್ಮದ್ ಸಯೀದ್ 2016 ರ ಪ್ಯಾಂಪೋರ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದು, 2012 ರಲ್ಲಿ ಅಮೆರಿಕ ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಗುರುತಿಸಿದೆ.

ಮೌಲಾನಾ ಮಸೂದ್ ಅಜರ್ ಮತ್ತು ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ನ ನಿಕಟವರ್ತಿ ಮೌಲಾನಾ ಇಮ್ದಾದ್ ಉಲ್ಲಾ ಮಕ್ಕಿ, ಎಲ್‌ಇಟಿ ಮತ್ತು ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್‌ನೊಂದಿಗೆ ಸಂಬಂಧ ಹೊಂದಿರುವ ಮೌಲಾನಾ ಸೈಫುಲ್ಲಾ ಖಾಲಿದ್, ಇಸ್ಲಾಮಾಬಾದ್‌ನಲ್ಲಿ ನೆಲೆಸಿರುವ ಎಲ್‌ಇಟಿ ಕಾರ್ಯಾಚರಣೆಯ ಕಮಾಂಡರ್ ಮೊಹಮ್ಮದ್ ಯಾಕೂಬ್, ಎಲ್‌ಇಟಿ ಮತ್ತು ಜಮಾತ್-ಉದ್-ದವಾ ಜೊತೆ ಸಂಬಂಧ ಹೊಂದಿರುವ ಮೌಲಾನಾ ಯೂಸುಫ್ ತೈಬಿ, ಭಾರತೀಯ ಪ್ರಜೆ ಓವೈಸ್ ಫರೂಜ್, ಪಾಕಿಸ್ತಾನ ಮರ್ಕಜಿ ಮುಸ್ಲಿಂ ಲೀಗ್ ಮತ್ತು ಜಮಾತ್-ಉದ್-ದವಾ ಜೊತೆ ಸಂಬಂಧ ಹೊಂದಿರುವ ಖಾರಿ ಯಾಕೂಬ್ ಶೇಖ್ ಕೂಡ ಇದರಲ್ಲಿ ಸೇರಿದ್ದಾರೆ. ಇವರು ಲಷ್ಕರ್ ಮತ್ತು ಜೆಯುಡಿಗೆ ಹಣವನ್ನು ಸಂಗ್ರಹಿಸಿದ್ದಾರೆ, ನೇಮಕಾತಿಗಳನ್ನು ನಡೆಸಿದ್ದಾರೆ, ಶಸ್ತ್ರಾಸ್ತ್ರ ಪೂರೈಕೆ ಮಾಡಿರುವ ಆರೋಪವನ್ನು ಹೊಂದಿದ್ದಾರೆ.

Puneeth Kerehalli: ಮುಸ್ಲಿಂ ಧರ್ಮಗುರುಗಳಿಗೆ ಅವಮಾನ ಆರೋಪ; ಹಾಸನದಲ್ಲಿ ಪುನೀತ್ ಕೆರೆಹಳ್ಳಿ ಬಂಧನ

ಹಫೀಜ್ ಸಯೀದ್ ನ ಸಹಚರ ರಾಣಾ ಇಫ್ತಿಕರ್ ಸಂಘಟನೆಯ ಕೈದಿಗಳ ಕಲ್ಯಾಣ ವಿಭಾಗದ ಮುಖ್ಯಸ್ಥ ನಾಗಿದ್ದು,1993 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧಿಸಲಾಗಿತ್ತು., ಖಾರಿ ವಾಸಿಮ್ ಎಂದೂ ಕರೆಯಲ್ಪಡುವ ವಾಸಿಮ್ ನೂರ್ ಜಾಟ್, ಮೂಲತಃ ಭಾರತೀಯನಾಗಿರುವ ಮೊಹಮ್ಮದ್ ಶಾಹಿದ್ ಫೈಸಲ್ ನನ್ನು ಕೂಡ ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಿರುವುದಾಗಿ ಗೃಹ ಸಚಿವಾಲಯ ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author