Rama Mandir: ಅಯೋಧ್ಯೆ ರಾಮ ಮಂದಿರಕ್ಕೆ ಬೆದರಿಕೆ; ಕಿಡಿಗೇಡಿಗಳಿಂದ ಇ-ಮೇಲ್ ರವಾನೆ
Rama Mandir: ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ಗೆ ರಾಮ ಮಂದಿರದ ಭದ್ರತೆಗೆ ಬೆದರಿಕೆ ಹಾಕುವ ಅನುಮಾನಾಸ್ಪದ ಇಮೇಲ್ ಬಂದ ನಂತರ ಉತ್ತರ ಪ್ರದೇಶದ ಅಯೋಧ್ಯೆಯ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇನ್ನು ಯಾವ ರೀತಿಯ ಬೆದರಿಕೆ ಬಂದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.


ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ(Rama Mandir) ಬೆದರಿಕೆ ಸಂದೇಶ ಬಂದಿದೆ. ಕಿಡಿಗೇಡಿಗಳು ಇ-ಮೇಲ್ ಮೂಲಕ ಸಂದೇಶ ರವಾನಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ಭಾನುವಾರ ತಡರಾತ್ರಿ ಈ ಬೆದರಿಕೆ ಸಂದೇಶ ಬಂದಿದೆ ಎನ್ನಲಾಗಿದೆ. ಪೊಲೀಸರು ಇಮೇಲ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೂ ತಮಿಳುನಾಡು ಮೂಲದ ಕಿಡಿಗೇಡಿಯೊಬ್ಬ ಈ ಇ-ಮೇಲ್ ಕಳಿಹಿಸಿದ್ದಾನೆ ಎನ್ನಲಾಇದೆ. ಇಂಗ್ಲಿಷ್‌ನಲ್ಲಿ ಬರೆದಿರುವ ಈ ಸಂದೇಶವನ್ನು ಕಿಡಿಗೇಡಿಗಳು ಕಳುಹಿಸಿದ್ದಾರೆ ಎಂದಿದ್ದಾರೆ. ಮತ್ತೊಂದೆಡೆ ರಾಮ ಮಂದಿರ ಟ್ರಸ್ಟ್ ಅಥವಾ ಭದ್ರತಾ ಸಂಸ್ಥೆಗಳು ಇಲ್ಲಿಯವರೆಗೆ ಇಮೇಲ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ಗೆ ರಾಮ ಮಂದಿರದ ಭದ್ರತೆಗೆ ಬೆದರಿಕೆ ಹಾಕುವ ಅನುಮಾನಾಸ್ಪದ ಇಮೇಲ್ ಬಂದ ನಂತರ ಉತ್ತರ ಪ್ರದೇಶದ ಅಯೋಧ್ಯೆಯ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇನ್ನು ಯಾವ ರೀತಿಯ ಬೆದರಿಕೆ ಬಂದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ರಾಮ ಮಂದಿರವು 135.5 ಮಿಲಿಯನ್ ದೇಶೀಯ ಪ್ರವಾಸಿಗರನ್ನು ಆಕರ್ಷಿಸಿತು, 2024 ರಲ್ಲಿ ಉತ್ತರ ಪ್ರದೇಶದ ಅತಿ ಹೆಚ್ಚು ಭೇಟಿ ನೀಡುವ ಸ್ಥಳವಾದ ತಾಜ್ ಮಹಲ್ ಅನ್ನು ಹಿಂದಿಕ್ಕಿತು. ಇದೇ ಹಿನ್ನೆಲೆಯಲ್ಲಿ, ಪೊಲೀಸರು ನಗರದಾದ್ಯಂತ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Ayodhya Ram Mandir: ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿಗೆ ಸಂಚು; 19 ವರ್ಷದ ಶಂಕಿತ ಭಯೋತ್ಪಾದಕನ ಬಂಧನ
ಮೊದಲ ಬೆದರಿಕೆ ಅಲ್ಲ
ರಾಮ ಮಂದಿರಕ್ಕೆ ಬೆದರಿಕೆ ಕರೆ ಬಂದಿರುವುದು ಇದೇ ಮೊದಲಲ್ಲ. ನವೆಂಬರ್ 2024 ರಲ್ಲಿ, ನಿಷೇಧಿತ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ವಿಡಿಯೊ ಸಂದೇಶ ರಿಲೀಸ್ ಮಾಡಿದ್ದ. ನವೆಂಬರ್ 16-17ರಂದು ರಾಮ ಮಂದಿರದಲ್ಲಿ ರಕ್ತಪಾತದ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿತು.