ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೆಹಲಿ ಸ್ಫೋಟದ ತನಿಖೆಯಲ್ಲಿ ಕಂಡು ಬಂದಿದ್ದು ಏನು? ಇಲ್ಲಿದೆ ಸಂಪೂರ್ಣ ಟೈಮ್‌ಲೈನ್‌

ನವೆಂಬರ್ 10 ದೇಶದ ಜನತೆ ಮರೆಯಲಾಗದ ದಿನ. ಯಾಕೆಂದರೆ ರಾಷ್ಟ್ರ ರಾಜ್ಯಧಾನಿಯ ಐತಿಹಾಸಿಕ ತಾಣವಾದ ಕೆಂಪು ಕೋಟೆಯ ಬಳಿ ಭಯಾನಕ ಕಾರು ಬಾಂಬ್ ಸ್ಪೋಟಗೊಂಡು 13 ಮಂದಿ ಸಾವನ್ನಪ್ಪಿದ್ದಾರೆ. ಇದರ ತನಿಖೆಯಲ್ಲಿ ಕಂಡು ಬಂದಿರುವ ಪ್ರಮುಖ ಅಂಶಗಳು ಏನು ಎಂಬುದರ ಕುರಿತು ಅಧಿಕಾರಿಯೊಬ್ಬರು ಹೇಳಿರುವ ಮಾಹಿತಿ ಇಲ್ಲಿದೆ.

ದೆಹಲಿ ಸ್ಪೋಟ (ಸಂಗ್ರಹ ಚಿತ್ರ)

ನವದೆಹಲಿ: ವೈಟ್ ಕಾಲರ್ ಭಯೋತ್ಪಾದನೆಯ (white collar terror module) ತನಿಖೆಯ ಜಾಡು ಹಿಡಿದ ತನಿಖಾಧಿಕಾರಿಗಳಿಗೆ ಸಿಕ್ಕಿರುವ ಹಲವು ಪ್ರಮುಖ ಮಾಹಿತಿಗಳಲ್ಲಿ ದೆಹಲಿಯ ಕಂಪು ಕೋಟೆಯ ಬಳಿ ನಡೆದ ಕಾರು ಬಾಂಬ್ ಸ್ಪೋಟದ (Delhi blast) ಸಂಚು ಕೂಡ ಒಂದು. ಈ ಘಟನೆ ನಡೆಯುವ ಮೊದಲು ಮತ್ತು ಅನಂತರ ಏನೆಲ್ಲ ಬೆಳವಣಿಗೆಗಳು ಆಗಿವೆ ಎಂಬುದರ ಕುರಿತು ಹಿರಿಯ ಅಧಿಕಾರಿಯೊಬ್ಬರು ವಿವರಿಸಿರುವ ಮಾಹಿತಿ ಇಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಫರಿದಾಬಾದ್‌ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ (Faridabad Al Falah University) ವೈದ್ಯನಾಗಿದ್ದ ಉಮರ್ ಮೊಹಮ್ಮದ್ ಸ್ಫೋಟಕಗಳನ್ನು ತುಂಬಿಕೊಂಡು ಫರಿದಾಬಾದ್‌ನಿಂದ ದೆಹಲಿಗೆ ಬಂದಿದ್ದ. ಇದಕ್ಕೂ ಮೊದಲು ಏನೆಲ್ಲಾ ನಡೆಯಿತು ಎಂಬುದರ ಕುರಿತು ಅವರು ಹೇಳಿರುವುದು ಹೀಗೆ.

ಇದನ್ನೂ ಓದಿ: Chikkanayakanahalli News: ತಹಸೀಲ್ದಾರ್ ಕಚೇರಿಗೆ ಕಳಂಕ ! ನೂರಾರು ನಕಲಿ ಸಾಗುವಳಿ ಚೀಟಿ ವಿತರಣೆ ಜನರಲ್ಲಿ ಆತಂಕ

ಅಕ್ಟೋಬರ್ 30

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಫರಿದಾಬಾದ್ ಪೊಲೀಸ್ ಅಪರಾಧ ವಿಭಾಗದ ತಂಡದೊಂದಿಗೆ ತೆರಳಿ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಮುಜಮ್ಮಿಲ್ ಅಹ್ಮದ್ ಗನೈ ನನ್ನು ಬಂಧಿಸುತ್ತಾರೆ. ಆತನನ್ನು ಜಮ್ಮು ಮತ್ತು ಕಾಶ್ಮೀರದ ಟ್ರಾನ್ಸಿಟ್ ರಿಮಾಂಡ್‌ಗೆ ಕರೆದುಕೊಂಡು ಹೋಗಲಾಗುತ್ತದೆ.

ನವೆಂಬರ್ 8

ವಿಚಾರಣೆ ವೇಳೆ ಮುಜಮ್ಮಿಲ್ ನೀಡಿದ ಮಾಹಿತಿ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತೆ ಹರಿಯಾಣಕ್ಕೆ ಬಂದು ಫರಿದಾಬಾದ್ ಪೊಲೀಸರ ಸಹಯೋಗದೊಂದಿಗೆ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿಅಸಾಲ್ಟ್ ರೈಫಲ್, ಪಿಸ್ತೂಲ್, ಅಸಾಲ್ಟ್-ರೈಫಲ್ ಮ್ಯಾಗಜೀನ್‌ಗಳು, 83 ಸುತ್ತುಗಳು, ಹೆಚ್ಚುವರಿ ಪಿಸ್ತೂಲ್ ಮ್ಯಾಗಜೀನ್‌ಗಳು ಮತ್ತು ಲೈವ್ ಕಾರ್ಟ್ರಿಡ್ಜ್‌ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುತ್ತಾರೆ. ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದರು.

ನವೆಂಬರ್ 9

ಧೌಜ್‌ನ ಕಟ್ಟಡವೊಂದರಲ್ಲಿ ಫರಿದಾಬಾದ್ ಪೊಲೀಸರು 12 ಸೂಟ್‌ಕೇಸ್‌ಗಳಲ್ಲಿ 358 ಕೆಜಿ ಬಳಸಲು ಸಿದ್ಧವಾದ ಸ್ಫೋಟಕಗಳನ್ನು ವಶ ಪಡಿಸಿಕೊಂಡ ಪೊಲೀಸರು ಇದರೊಂದಿಗೆ ಸ್ಪೋಟಕ್ಕೆ ಬೇಕಾಗಿರುವ ಇತರ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲ ವಸ್ತುಗಳನ್ನು ಸಂಗ್ರಹಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ನವೆಂಬರ್ 10

ಹರಿಯಾಣದ ಫತೇಪುರ್ ಟಾಗಾದಲ್ಲಿ ಇಮಾಮ್ ಇಶ್ತಿಯಾಕ್ ಎಂಬಾತನ ಮನೆಯಿಂದ ಪೊಲೀಸರು 2,553 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಇದೇ ದಿನ ಸಂಜೆ 6.52ರ ಸುಮಾರಿಗೆ ದೆಹಲಿಯ ಚಾಂದನಿ ಚೌಕ್‌ನಲ್ಲಿರುವ ಕೆಂಪು ಕೋಟೆಯ ಬಳಿ ಕಾರು ಸ್ಫೋಟ ಸಂಭವಿಸಿತು. ಪ್ರಕರಣಕ್ಕೆ ಸಂಬಂಧಿಸಿ ಕಾರಿನಲ್ಲಿದ್ದ ಉಮರ್ ಮೊಹಮ್ಮದ್ ನನ್ನು ಪೊಲೀಸರು ಹತ್ತಿರದ ಸಿಸಿಟಿವಿಯಲ್ಲಿ ಗುರುತಿಸಿದ್ದಾರೆ.

ನವೆಂಬರ್ 12

ಫರಿದಾಬಾದ್‌ನ ಖಂಡವಾಲಿ ಗ್ರಾಮದಿಂದ ಸ್ಫೋಟಕಗಳನ್ನು ಹೊತ್ತುಕೊಂಡು ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಬರಬಹುದು ಎನ್ನುವ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ಏನೂ ಸಿಗಲಿಲ್ಲ.

ನವೆಂಬರ್ 13

ಪೊಲೀಸರು ಫೋರ್ಡ್ ಇಕೋಸ್ಪಾಟ್ ಅನ್ನು ವಶಪಡಿಸಿಕೊಂಡಿದ್ದು, ಕೆಂಪುಕೋಟೆ ಬಾಂಬ್ ದಾಳಿ ನಡೆಸಿದ ಉಮರ್ ಮೊಹಮ್ಮದ್ ಜೊತೆ ಸಂಪರ್ಕದಲ್ಲಿದ್ದ ಧೌಜ್ ನಿವಾಸಿ ವಾಸಿಬ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಾಸಿಬ್ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ.

ಭಯೋತ್ಪಾದಕ ಆರೋಪಿ ವೈದ್ಯೆ ಶಾಹೀನ್ ಶಾಹಿದ್ ಗೆ ಸೇರಿದ ಬೆಳ್ಳಿ ಬಣ್ಣದ ಬ್ರೆಝಾ ಎಸ್‌ಯುವಿ ಕ್ಯಾಂಪಸ್‌ನಲ್ಲಿ ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಇದನ್ನೂ ಓದಿ: Viral Video: ಸೊಸೆಯ ಹೆರಿಗೆ ಸಂದರ್ಭ ಅಮಾನವೀಯವಾಗಿ ವರ್ತಿಸಿದ ಅತ್ತೆ; ವಿಡಿಯೊ ವೈರಲ್

ನವೆಂಬರ್ 14

ಉಮರ್ ಮೊಹಮ್ಮದ್ ಜೊತೆ ಸಂಪರ್ಕದಲ್ಲಿದ್ದ ಮತ್ತೊಬ್ಬ ಭಯೋತ್ಪಾದಕ ಆರೋಪಿ ಮುಸ್ತಾಕಿಲ್‌ನನ್ನು ರಾಜಸ್ಥಾನದ ಮೇವಾತ್‌ನ ಸನ್ಹೇರಾ ಗ್ರಾಮದಲ್ಲಿ ಬಂಧಿಸಲಾಗಿದೆ. ಚೀನಾದಲ್ಲಿ ಎಂಬಿಬಿಎಸ್ ಮಾಡಿದ ಈತ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author