ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫಾಲ್ಟಾದ ಟಿಎಂಸಿ ಅಭ್ಯರ್ಥಿಯಾಗಿದ್ದ ʼಪುಷ್ಪʼ ಜಹಾಂಗೀರ್ ಖಾನ್ ಬಂಧನ; ಕಾರಣವೇನು?

ಪಶ್ಚಿಮ ಬಂಗಾಳ ವಿಧಾನ ಸಭಾ ಮರು ಚುನಾವಣೆಯಲ್ಲಿ ಫಾಲ್ಟಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಜಹಾಂಗೀರ್ ಖಾನ್ ನನ್ನು ಇದೀಗ ಬಂಗಾಳ ವಿಶೇಷ ಕಾರ್ಯಪಡೆ ಬಂಧಿಸಿದೆ. ಈತ ತನ್ನನ್ನು ತಾನು ಫಾಲ್ಟಾದ ಪುಷ್ಪ ಎಂದೇ ಹೇಳುತ್ತಿದ್ದನು. ಈತನ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ.

ಸಂಗ್ರಹ ಚಿತ್ರ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (west bengal) ಅಧಿಕಾರ ಕಳೆದುಕೊಂಡ ಬಳಿಕ ತೃಣಮೂಲ ಕಾಂಗ್ರೆಸ್ ನ (Trinamool Congress) ಅತ್ಯಂತ ಬಲಶಾಲಿ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿರುವ ಫಾಲ್ಟಾದ 'ಪುಷ್ಪ' (Falta's Pushpa) ಜಹಾಂಗೀರ್ ಖಾನ್ (Jahangir Khan Arrest) ನನ್ನು ಬಂಧಿಸಲಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಫಾಲ್ಟಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದ ಜಹಾಂಗೀರ್ ಖಾನ್ ನನ್ನು ಪಶ್ಚಿಮ ಬಂಗಾಳದ ಭಾರತ- ನೇಪಾಳ ಗಡಿಯಲ್ಲಿ ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ (STF) ಬಂಧಿಸಿದೆ.

ವಿಧಾನ ಸಭಾ ಚುನಾವಣೆ ಫಲಿತಾಂಶ ಮೇ 4ರಂದು ಪ್ರಕಟವಾದ ಬಳಿಕ ಜಹಾಂಗೀರ್ ಖಾನ್ ವಿರುದ್ಧ ಐದು ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ನಡುವೆ ಜಾಮೀನಿಗಾಗಿ ಆತ ಅರ್ಜಿ ಸಲ್ಲಿಸಿದ್ದು, ಕಲ್ಕತ್ತಾ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇದೀಗ ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ ಆತನನ್ನು ಬಂಧಿಸಿದೆ.

ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳು; ಬಿ.ಎಸ್‌.ಯಡಿಯೂರಪ್ಪ ಸೇರಿ ಪ್ರಮುಖರಿಂದ ಶುಭ ಹಾರೈಕೆ

ತೆಲುಗು ಆಕ್ಷನ್ ಥ್ರಿಲ್ಲರ್ ಸಿನಿಮಾ 'ಪುಷ್ಪ' ಬಿಡುಗಡೆಯಾದ ಮೇಲೆ ತನ್ನನ್ನು ತಾನು ಪುಷ್ಪ ಎಂದೇ ಕರೆಸಿಕೊಳ್ಳುತ್ತಿದ್ದ ಆತನ ವಿರುದ್ಧ ಬೆದರಿಕೆ, ಚುನಾವಣಾ ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಮತಾ ಬ್ಯಾನರ್ಜಿಯವರ ಸೋದರಳಿಯ ಮತ್ತು ದಕ್ಷಿಣ 24 ಪರಗಣಗಳ ಡೈಮಂಡ್ ಹಾರ್ಬರ್‌ನ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ಸಹಾಯಕನಾಗಿರುವ ಜಹಾಂಗೀರ್ ಖಾನ್ ಗೆದ್ದರೆ ಇಲ್ಲಿ ಭಯೋತ್ಪಾದನೆಯ ಆಳ್ವಿಕೆ ಆರಂಭವಾಗುತ್ತದೆ ಎನ್ನುವ ಆತಂಕದಲ್ಲಿದ್ದರು ಫಾಲ್ಟಾ ಗ್ರಾಮಸ್ಥರು.

ಈ ಹಿನ್ನೆಲೆಯಲ್ಲಿ ಯುಪಿ ಕೇಡರ್‌ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರನ್ನು ಇಲ್ಲಿನ ಚುನಾವಣಾ ವಿಶೇಷ ವೀಕ್ಷಕರಾಗಿ ನಿಯೋಜಿಸಲಾಗಿತ್ತು. ಎನ್‌ಕೌಂಟರ್ ತಜ್ಞರಾಗಿದ್ದ ಅವರು ಸಿಂಘಮ್ ಎಂದೇ ಖ್ಯಾತಿ ಪಡೆದಿದ್ದಾರೆ. ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ಶರ್ಮಾ ಅವರು ಕ್ಷೇತ್ರಕ್ಕೆ ತೆರಳಿ ಮತದಾರರಿಗೆ ತೊಂದರೆ ಕೊಡುವವರಿಗೆ ಕಠಿಣ ಎಚ್ಚರಿಕೆಯನ್ನು ನೀಡಿದರು. ಆದರೆ ಮರುಚುನಾವಣೆಗೂ ಮೊದಲೇ ಖಾನ್ ಫಾಲ್ಟಾ ಸ್ಪರ್ಧೆಯಿಂದ ಹಿಂದೆ ಸರಿದನು.

ಭಾರಿ ಗಾಳಿ-ಮಳೆ ಅಬ್ಬರ: ದೆಹಲಿ ಏರ್‌ಪೋರ್ಟ್‌ನಲ್ಲಿ 3 ಏರ್ ಇಂಡಿಯಾ ವಿಮಾನಗಳಿಗೆ ಹಾನಿ

ಇದರಿಂದ ಇಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ ಅವರು ಭಾರಿ ಮತಗಳಿಂದ ಗೆಲುವು ದಾಖಲಿಸಿದರು. ಖಾನ್ ಚುನಾವಣಾ ಕಣದಿಂದ ಹಿಂದೆ ಸರಿಯಲು ಬಿಜೆಪಿಯೇ ಕಾರಣ ಎಂಬುದಾಗಿ ತೃಣಮೂಲ ಕಾಂಗ್ರೆಸ್ ದೂರಿದೆ.

ವಿದ್ಯಾ ಇರ್ವತ್ತೂರು

View all posts by this author