ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಾನ್ಪುರ ಲಂಬೋರ್ಘಿನಿ ಅಪಘಾತ; ಕೊನೆಗೂ ಉದ್ಯಮಿ ಪುತ್ರನನ್ನು ಬಂಧಿಸಿದ ಪೊಲೀಸರು

ಕಾನ್ಪುರ ಲಂಬೋರ್ಘಿನಿ ಅಪಘಾತ ಪ್ರಕರಣದ ಪ್ರಮುಖ ಆರೋಪಿಯಾದ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದ್ದು, ನಿಯಮಿತ ವೈದ್ಯಕೀಯ ತಪಾಸಣೆಯ ನಂತರ ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕಾನ್ಪುರ ಪೊಲೀಸ್ ಮುಖ್ಯಸ್ಥ ರಘುಬೀರ್ ಲಾಲ್ ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಕಾನ್ಪುರ ಲಂಬೋರ್ಘಿನಿ ಅಪಘಾತ ಪ್ರಕರಣದ ಪ್ರಮುಖ ಆರೋಪಿಯಾದ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ (Tobacco Tycoon's Son Arrested) ಮಿಶ್ರಾ ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದ್ದು, ನಿಯಮಿತ ವೈದ್ಯಕೀಯ ತಪಾಸಣೆಯ ನಂತರ ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕಾನ್ಪುರ ಪೊಲೀಸ್ ಮುಖ್ಯಸ್ಥ ರಘುಬೀರ್ ಲಾಲ್ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಕಾನ್ಪುರದ ವಿಐಪಿ ರಸ್ತೆಯಲ್ಲಿ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಇಟಾಲಿಯನ್ ಐಷಾರಾಮಿ ಸ್ಪೋರ್ಟ್ಸ್ ಕಾರ್ 'ಲ್ಯಾಂಬೋರ್ಗಿನಿ ರೆವ್ಯುಯೆಲ್ಟೋ', ನಿಯಂತ್ರಣ ತಪ್ಪಿ ಪಾದಚಾರಿಗಳು ಹಾಗೂ ಇತರ ವಾಹನಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.

ಶಿವಂ ಮಿಶ್ರಾ, ಉತ್ತರ ಪ್ರದೇಶದ ಪ್ರಖ್ಯಾತ ತಂಬಾಕು ಉದ್ಯಮಿ ಮತ್ತು 'ಡಿಎಸ್ ಗ್ರೂಪ್' ಮಾಲೀಕ ಕೆ.ಕೆ. ಮಿಶ್ರಾ ಅವರ ಪುತ್ರ. ಅಪಘಾತಕ್ಕೀಡಾದ ಕಾರು ಲ್ಯಾಂಬೋರ್ಗಿನಿ ರೆವ್ಯುಯೆಲ್ಟೋ. ಇದು ಇಟಾಲಿಯನ್ ಮೂಲದ ಹೈಬ್ರಿಡ್ ಸ್ಪೋರ್ಟ್ಸ್ ಕಾರಾಗಿದ್ದು, ಭಾರತದಲ್ಲಿ ಆನ್-ರೋಡ್ ಬೆಲೆ ಸುಮಾರು 10 ಕೋಟಿ ರೂಪಾಯಿಯಿಂದ 11 ಕೋಟಿ ರೂಪಾಯಿವರೆಗಿದೆ. ಭಾನುವಾರ ಮಧ್ಯಾಹ್ನ ಕಾನ್ಪುರದ ವಿಐಪಿ ರಸ್ತೆಯಲ್ಲಿ ಶಿವಂ ಮಿಶ್ರಾ ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ.

ಏನಿದು ಘಟನೆ?

ಶಿವಂ ಇದ್ದ ಕಾರು ವೇಗವಾಗಿ ಬಂದ ಕಾರು ಮೊದಲು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ನಂತರ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್‌ ಬೈಕ್‌ಗೆ ಗುದ್ದಿದೆ. ಮೋಟಾರ್ ಸೈಕಲ್ ಕಾರಿನ ಮುಂಭಾಗದ ಕೆಳಗೆ ಸಿಲುಕಿಕೊಂಡು ಸ್ವಲ್ಪ ದೂರ ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತು. ಅಪಘಾತದಲ್ಲಿ ಗಾಯಗೊಂಡವರಲ್ಲಿ ಒಬ್ಬನನ್ನು ತೌಫಿಕ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಇತರರಿಗೆ ಮೂಳೆ ಮುರಿತ ಉಂಟಾಗಿವೆ.

ಅಪಘಾತವೆಸಗಿದ್ದ ತಂಬಾಕು ಉದ್ಯಮಿಯ ಪುತ್ರನ ವಿಡಿಯೊ ವೈರಲ್!

ಆದರೆ ಬುಧವಾರ ಕಾನ್ಪುರ ನ್ಯಾಯಾಲಯಕ್ಕೆ ಒಬ್ಬ ವ್ಯಕ್ತಿ ಹಾಜರಾಗಿ, ಶಿವಂ ಮಿಶ್ರಾ ಅಲ್ಲ, ತಾನೇ ಕಾರು ಚಲಾಯಿಸುತ್ತಿದ್ದೆ ಎಂದು ಹೇಳಿಕೊಂಡಿದ್ದನು. ಆ ವ್ಯಕ್ತಿಯನ್ನು ಮೋಹನ್‌ ಮಿಶ್ರಾ ಎಂದು ಗುರುತಿಸಿಕೊಂಡಿದ್ದು, ಅಪಘಾತಕ್ಕೂ ಕೆಲವೇ ಕ್ಷಣಗಳ ಮೊದಲು ಶಿವಂ ಮಿಶ್ರಾ ಅವರಿಗೆ ಹಠಾತ್ ಸೆಳೆತ ಉಂಟಾದ ನಂತರ ವಾಹನದ ನಿಯಂತ್ರಣ ಕಳೆದುಕೊಂಡರು ಎಂದು ಮೋಹನ್ ಹೇಳಿದ್ದರು.

Vishakha Bhat Heggar

View all posts by this author