ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Self Harming: ಒಂದೇ ದಿನದಲ್ಲಿ ಇಬ್ಬರು ಪೊಲೀಸ್‌ ಪೇದೆಗಳ ಆತ್ಮಹತ್ಯೆ, ಠಾಣೆಯಲ್ಲೇ ನೇಣು ಹಾಕಿಕೊಂಡ ಕಾನ್‌ಸ್ಟೇಬಲ್

ರಾಜ್ಯದಲ್ಲಿ ಇಬ್ಬರು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮೊಹಮ್ಮದ್ ಝಕ್ರಿಯ ಎಂಬ ಸಂಚಾರಿ ಪೊಲೀಸ್‌ ಪೇದೆ (police constable) ಠಾಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮದ್ದೂರಿನಲ್ಲಿ (Madduru) ರಮೇಶ್‌ ಎಂಬವರು ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ತೆಗೆದುಕೊಂಡಿದ್ದಾರೆ.

ಒಂದೇ ದಿನದಲ್ಲಿ ಇಬ್ಬರು ಪೊಲೀಸ್‌ ಪೇದೆಗಳ ಆತ್ಮಹತ್ಯೆ

ಮೃತ ರಮೇಶ್‌, ಮೊಹಮ್ಮದ್ ಝಕ್ರಿಯ -

ಹರೀಶ್‌ ಕೇರ
ಹರೀಶ್‌ ಕೇರ Jan 8, 2026 11:50 AM

ಶಿವಮೊಗ್ಗ/ಮಂಡ್ಯ, ಜ.08 : ರಾಜ್ಯದಲ್ಲಿ ಒಂದೇ ದಿನದಲ್ಲಿ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ಗಳು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮೊಹಮ್ಮದ್ ಝಕ್ರಿಯ ಎಂಬ ಸಂಚಾರಿ ಪೊಲೀಸ್‌ ಪೇದೆ (police constable) ಠಾಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮದ್ದೂರಿನಲ್ಲಿ (Madduru) ರಮೇಶ್‌ ಎಂಬವರು ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ತೆಗೆದುಕೊಂಡಿದ್ದಾರೆ.

ಸಂಚಾರಿ ಠಾಣೆಯಲ್ಲಿ ಪೇದೆ ಆತ್ಮಹತ್ಯೆ

ಶಿವಮೊಗ್ಗದ ಸಂಚಾರಿ ಪೊಲೀಸ್‌ ಠಾಣೆಯಲ್ಲಿಯೇ ಮೊಹಮ್ಮದ್ ಝಕ್ರಿಯ ಎಂಬ ಪೊಲೀಸ್‌ ಕಾನ್‌ಸ್ಟೇಬಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ರಜೆಯಲ್ಲಿ ಇದ್ದರು. ಮೂರು ದಿನದ ಹಿಂದೆಯಷ್ಟೇ ಮೊಹಮ್ಮದ್ ಡ್ಯೂಟಿಗೆ ಹಾಜರಾಗಿದ್ದರು. ಬಸ್ ನಿಲ್ದಾಣದ ಬಳಿ ಡ್ಯೂಟಿ ಮುಗಿಸಿ ಬಂದು ಪೊಲೀಸ್ ಠಾಣೆಯ ಹಿಂಬದಿಯ ಸೆಲ್ ಇರುವ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ರಾಂತಿ ಗೃಹದಲ್ಲಿ ಆತ್ಮಹತ್ಯೆ

ಮದ್ದೂರು (Madduru) ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ರಮೇಶ್ (35) ಎಂಬವರು ನಗರದ ಪೊಲೀಸ್ ಠಾಣೆಯ ಹಿಂದೆ ಇರುವ ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ 10 ಘಂಟೆಗೆ ಪೊಲೀಸ್ ಪೇದೆಯೊಬ್ಬರು ವಿಶ್ರಾಂತಿ ಗೃಹಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಮೃತರ ಪತ್ನಿ ಪುಷ್ಪಲತಾ ಎಂಬವರು ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ರಮೇಶ್ ಅವರಿಗೆ ಪೇದೆಯಾದ ಮಹೇಶ್ ಎಂಬವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಹಾಗೂ ಎಷ್ಟೋ ಬಾರಿ ಗಲಾಟೆ ಕೂಡಾ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಮೃತ ಪೇದೆ ರಮೇಶ್ ಹಾಗೂ ದೂರು ದಾಖಲಾಗಿರುವ ಮಹೇಶ್ ಇಬ್ಬರೂ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಹಾಗೂ ಇಬ್ಬರೂ ಪೊಲೀಸ್ ಠಾಣೆಯ ಪೊಲೀಸ್ ವಸತಿಗೃಹದ ನಿವಾಸಿಗಳಾಗಿದ್ದರು ಎನ್ನಲಾಗಿದೆ.