ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮ್ಯಾಟ್ರಿಮೋನಿಯಲ್ಲಿ ವಧು ಹುಡುಕುವವರೇ ಎಚ್ಚರ; ಬರೋಬ್ಬರಿ 21 ಲಕ್ಷ ಕಳೆದುಕೊಂಡ ಬೆಂಗಳೂರಿನ ಯುವಕ!

Matrimony Fraud: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳು ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದ್ದಾಳೆ. ಇದರಿಂದ ಬೆಂಗಳೂರಿನ ಯುವಕ 21.22 ಲಕ್ಷ ರೂಪಾಯಿ ನೀಡಿ ವಂಚನೆಗೊಳಗಾಗಿದ್ದಾನೆ.

ಮ್ಯಾಟ್ರಿಮೋನಿ ವಂಚನೆ; ಬೆಂಗಳೂರಿನ ಯುವಕನಿಗೆ 21 ಲಕ್ಷ ವಂಚಿಸಿದ ಯುವತಿ!

ಸಾಂದರ್ಭಿಕ ಚಿತ್ರ -

Prabhakara R
Prabhakara R Feb 23, 2026 7:43 PM

ಬೆಂಗಳೂರು: ಮದುವೆಯಾಗಲು ಮ್ಯಾಟ್ರಿಮೋನಿಗಳಲ್ಲಿ ವಧು ಹುಡುಕುತ್ತಿರುವ ಯುವಕರು ಸಾಕಷ್ಟು ಎಚ್ಚರ ವಹಿಸಬೇಕಾಗಿದೆ. ಯಾಕೆಂದರೆ, ಮ್ಯಾಟ್ರಿಮೋನಿಯೊಂದರಲ್ಲಿ ಪರಿಚಯವಾದ ಯುವತಿಯೊಬ್ಬಳು, ಯುವಕನಿಗೆ ಬರೋಬ್ಬರಿ 21.22 ಲಕ್ಷ ರೂ. ವಂಚಿಸಿರುವ (Matrimony Fraud) ಘಟನೆ ನಗರದಲ್ಲಿ ನಡೆದಿದೆ. ಟಿ.ದಾಸರಹಳ್ಳಿಯ ಯುವಕ ರಾಕೇಶ್‌ ಎಂಬಾತನಿಂದ ಯುವತಿಯು ಲಕ್ಷ ಲಕ್ಷ ಹಣ ಪಡೆದು ಈಗ ನಾಪತ್ತೆಯಾಗಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿದ್ದ ಯುವತಿ, ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿಸಿ ಯುವಕನಿಗೆ ಮೋಸ ಮಾಡಿದ್ದಾಳೆ.

ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ರಾಕೇಶ್‌ಗೆ ಪರಿಚಯವಾಗಿದ್ದ ಶಿರೀಷಾ ಎಂಬ ಯುವತಿ ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದ್ದಾಳೆ. ಯುವತಿಯ ಮಾತು ನಂಬಿದ್ದ ಯುವಕ, ಆಕೆ ನೀಡಿದ ವೆಬ್ ಸೈಟ್ ಹಾಗೂ ಬ್ಯಾಂಕ್ ಖಾತೆಗಳಿಗೆ ಹಣ ಹೂಡಿಕೆ ಮಾಡಿದ್ದಾನೆ. ಆರಂಭದಲ್ಲಿ ಲಾಭ ಬರುತ್ತಿರುವಂತೆ ತೋರಿಸಿದೆ. ಆದರೆ, ಹಣ ಡ್ರಾ ಮಾಡಲು ಕಮಿಷನ್ ಪಾವತಿ ಮಾಡಬೇಕು ಎಂದು ಯುವತಿ ಹೇಳಿದ್ದಾಳೆ. ಹೀಗೆ ಬರೋಬ್ಬರಿ 21.22 ಲಕ್ಷ ರೂಪಾಯಿ ಹಣ ಹಾಕಿಸಿಕೊಂಡಿದ್ದಾಳೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ 590 ಕೋಟಿ ರೂ. ವಂಚನೆ; ಹೂಡಿಕೆದಾರರಿಗೆ ಸಾವಿರಾರು ಕೋಟಿ ನಷ್ಟ

ನಂತರ ಹಣ ವಿತ್‌ ಡ್ರಾ ಮಾಡಲು ಯುವಕನಿಗೆ ಸಾಧ್ಯವಾಗಿಲ್ಲ. ಹೂಡಿಕೆ ಮಾಡಿದ ಹಣದಲ್ಲಿ ಲಾಭ ಬರುವುದೂ ನಿಂತಿದೆ. ಹೀಗಾಗಿ ಯುವಕನಿಗೆ ಆತಂಕ ಶುರುವಾಗಿದೆ. ಅಲ್ಲದೇ ಹೂಡಿಕೆ ಹಣದ ಬಗ್ಗೆಯೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಇತ್ತ ಮದುವೆಯಾಗುವುದಾಗಿ ಹೇಳಿದ್ದ ಯುವತಿಯೂ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ತನಗೆ ವಂಚನೆಯಾಗಿರುವುದು ಅರಿವಾಗಿದೆ. ಹೀಗಾಗಿ ಯುವಕ ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾನೆ.

ಬೆಂಗಳೂರಿನಲ್ಲಿ ಎಟಿಎಂ ದರೋಡೆಗೆ ಯತ್ನ, ನೇಪಾಳಿ ಪ್ರಜೆ ಸೆರೆ

ಬೆಂಗಳೂರು: ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ಹಾಗೂ ಇತರರಿಂದ ನಡೆದಿದ್ದ ಎಟಿಎಂ ರಾಬರಿ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಲ್ಲಿ ಮತ್ತೊಂದು ಬ್ಯಾಂಕ್‌ ಎಟಿಎಂ ದರೋಡೆಗೆ ಯತ್ನ ನಡೆದಿದೆ. ದರೋಡೆಗೆ ಯತ್ನ ನಡೆಸಿದ್ದ ನೇಪಾಳ ಮೂಲದ ರಾಜೇಂದ್ರ ಸಿಂಗ್ (23) ಎಂಬುವವನ ಬಂಧನವಾಗಿದೆ.

ಫೆ.10 ರಂದು ಇಂದಿರಾನಗರದ (Indiranagar) ಡಬಲ್ ರೋಡ್ ಬಳಿ ಇರುವ ಬ್ಯಾಂಕ್ ಆಫ್ ಬರೋಡಾದ ATM ನಲ್ಲಿ ಮಧ್ಯರಾತ್ರಿ ಎಟಿಎಂ ಶಟ್ಟರ್ ಬಂದ್ ಮಾಡಿ ದರೋಡೆಗೆ ಯತ್ನ ನಡೆಸಿದ್ದ. ಕಟ್ಟಿಂಗ್ ಮಷಿನ್ ಬಳಸಿ ದರೋಡೆಗೆ ಯತ್ನ ನಡೆಸಿದ್ದ. ATM ಒಳಗಿದ್ದ ಸಿಸಿಟಿವಿಯನ್ನ ಬಟ್ಟೆ ಮತ್ತು ಟೇಪ್‌ ಕವರ್ ಬಳಸಿ ಮುಚ್ಚಿದ್ದ.

ಮೆಕ್ಸಿಕೋದ ಮೋಸ್ಟ್ ವಾಂಟೆಡ್ ಡ್ರಗ್ ಲಾರ್ಡ್ ಎಲ್ ಮೆಂಚೊ ಹತ್ಯೆ; ದೇಶದಲ್ಲಿ ಭುಗಿಲೆದ್ದ ಹಿಂಸಾಚಾರ

ಆರೋಪಿಯ ಬಂಧನದ ಬಳಿಕ ನಾಗಾರ್ಜುನ ಹೋಟೆಲ್ ಕಿಚನ್‌ನಲ್ಲಿ ಕೆಲಸ ಮಾಡುತಿದ್ದುದಾಗಿ ಹೇಳಿದ್ದಾನೆ. ಎಟಿಎಂ ಒಡೆಯಲು ಸಾಧ್ಯವಾಗದೇ ಯಾವುದೇ ಹಣ ಸಿಗದೇ ಪಾಪಸ್ ಆಗಿದ್ದ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳನನ್ನ ಸೆರೆಹಿಡಿದ ಇಂದಿರಾನಗರ ಪೊಲೀಸರು ಜೈಲಿಗಟ್ಟಿದ್ದಾರೆ.