Self Harming: ಉಡುಪಿಯಲ್ಲಿ ಅಣ್ಣ-ತಂಗಿ ನೇಣಿಗೆ ಬಲಿ, ಕಾರಣ ನಿಗೂಢ
Udupi News: ಮಲ್ಲೇಶ್ (23) ಮತ್ತು ಪವಿತ್ರಾ (17) ಮೃತರಾಗಿದ್ದು, ಪವಿತ್ರಾ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ. ಇವರಿಬ್ಬರೂ ಅಕ್ಕ- ತಂಗಿಯರ ಮಕ್ಕಳಾಗಿದ್ದು, ಸೋದರ ಸಂಬಂಧಿಗಳು. ಇಬ್ಬರೂ ರಾಯಚೂರು ಮೂಲದವರು ಎಂದು ತಿಳಿದುಬಂದಿದೆ.

-

ಉಡುಪಿ: ಅಣ್ಣ-ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಉಡುಪಿಯ (Udupi news) ಲೇಬರ್ ಕಾಲೋನಿಯ ಜೋಪಡಿಯಲ್ಲಿ ನಡೆದಿದೆ. ಮಲ್ಲೇಶ್ (23) ಮತ್ತು ಪವಿತ್ರಾ (17) ಮೃತರಾಗಿದ್ದು, ಪವಿತ್ರಾ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು ಅಕ್ಕ ಮತ್ತು ತಂಗಿಯರ ಮಕ್ಕಳಾಗಿರೋ ಇವರಿಬ್ಬರು ಯಾಕೆ ಇಂತಹ ನಿರ್ಧಾರ ತೆಗೆದುಕೊಂಡರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಬೇರೊಂದು ಮನೆಯಲ್ಲಿ ಕೆಲಸ ಮಾಡಿ, ಉಡುಪಿಯ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಪವಿತ್ರಾ ಪ್ರಥಮ ಪಿಯುಸಿ ಓದುತ್ತಿದ್ದರು. ಸಹೋದರ ಸಂಬಂಧಿ ಮಲ್ಲೇಶ ವಾರದ ಹಿಂದಷ್ಟೇ ಗಾರೆ ಕೆಲಸಕ್ಕೆ ಎಂದು ಉಡುಪಿಗೆ ಬಂದಿದ್ದ. ತನ್ನ ತಾಯಿ ಮತ್ತು ಪವಿತ್ರಾ ತಾಯಿ ಹನುಮವ್ವ ಅಕ್ಕ-ತಂಗಿಯಾಗಿರುವ ಕಾರಣ ಚಿಕ್ಕಮ್ಮನ ಮನೆಯಲ್ಲೇ ಉಳಿದುಕೊಂಡಿದ್ದ. ಹನುಮವ್ವ ರಾಯಚೂರಿಗೆ ಹೋಗಿದ್ದ ಸಂದರ್ಭ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆದಿದೆ.
ಇದನ್ನೂ ಓದಿ: Murder Case: ಸಂಶಯಕ್ಕೆ ಪತ್ನಿ ಬಲಿ, ಲೇಡಿ ಕಂಡಕ್ಟರ್‌ನ ಇರಿದು ಕೊಂದ ಕಾನ್‌ಸ್ಟೇಬಲ್
ಮೀನಿನ ಬಲೆಗೆ ಸಿಲುಕಿ ಮಾನಸಿಕ ಅಸ್ವಸ್ಥ ಸಾವು
ಕೊರಟಗೆರೆ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಮೀನಿನ ಬಲೆಗೆ ಸಿಲುಕಿ ಮೃತಪಟ್ಟಿರುವ ಘಟನೆ ಕೊರಟಗೆರೆ ತಾಲೂಕಿನ (Koratagere News) ಕಸಬಾ ಹೋಬಳಿಯ ದೇವರಹಳ್ಳಿ ಹೊಸಕೆರೆ ಬಳಿ ಜರುಗಿದೆ. ಹುಲಿಕುಂಟೆ ಗ್ರಾಮದ ರಾಮಣ್ಣ (62) ಎನ್ನುವ ವ್ಯಕ್ತಿಯೇ ಮೃತಪಟ್ಟ ದುರ್ದೈವಿ. ಮೀನು ಹಿಡಿಯಲು ಬಿಟ್ಟಿದ್ದ ಬಲೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತನು ಕೆಲವು ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ದೇವರಹಳ್ಳಿ ಕೆರೆಯ ಅಕ್ಕಪಕ್ಕದಲ್ಲಿ ರಾಮಣ್ಣ ಓಡಾಡುತ್ತಿದ್ದನ್ನು ಸ್ಥಳೀಯರು ಗಮನಿಸಿ ಹುಲಿಕುಂಟೆ ಗ್ರಾಮಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ. ಮೀನು ಹಿಡಿಯುವ ಬಲೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕೊರಟಗೆರೆ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಅಗ್ನಿಶಾಮಕ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹ ಹೊರತೆಗೆದಿದ್ದಾರೆ.