ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್‌ನಲ್ಲಿ ಹಿಡನ್ ಕ್ಯಾಮರಾ ಇಟ್ಟಿದ್ದ ಕಾಮುಕ ಅರೆಸ್ಟ್

ತನ್ನ ಮಹಿಳಾ ಬಾಡಿಗೆದಾರರ ಮನೆಯ ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮರಾಗಳನ್ನು ಅಳವಡಿಸಿದ್ದ ಆರೋಪದ ಮೇಲೆ ವ್ಯಕ್ತಿ ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದ ಹೈದರಾಬಾದ್‌ನ ವೆಂಗಲ್‌ರಾವ್ ನಗರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಂಧಿತ ಮನೆ ಮಾಲೀಕನನ್ನು ಅಶೋಕ್ ಯಾದವ್ ಎಂದು ಗುರುತಿಸಲಾಗಿದೆ.

ಹಿಡನ್ ಕ್ಯಾಮರಾ ಇಟ್ಟಿದ್ದ ಮನೆ ಮಾಲೀಕನ ಬಂಧನ

ಆರೋಪಿ -

Profile Sushmitha Jain Oct 17, 2025 11:47 PM

ಹೈದರಾಬಾದ್‌: ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್ ಮತ್ತು ಬೆಡ್‍ರೂಮ್‍ನ ಬಲ್ಬ್‌ಗಳಲ್ಲಿ ಹಿಡನ್ ಕ್ಯಾಮರಾ (Spy Camera) ಇಟ್ಟಿದ್ದ ಆರೋಪಿಯನ್ನು ಇಲ್ಲಿನ ಮಧುರಾನಗರ ಪೊಲೀಸರು (Hyderabad Police) ಬಂಧಿಸಿದ್ದಾರೆ. ತೆಲಂಗಾಣದ ಹೈದರಾಬಾದ್‌ನ ವೆಂಗಲ್‌ರಾವ್ ನಗರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಂಧಿತ ಅಶೋಕ್ ಯಾದವ್ ಮನೆ ಮಾಲೀಕನಾಗಿದ್ದು, ಕಟ್ಟಡದ ಇನ್ನೊಂದು ಮಹಡಿಯಲ್ಲಿ ವಾಸವಾಗಿದ್ದ, ವಿವಾಹಿತ ಮಹಿಳೆ ಮನೆಯಲ್ಲಿ ಬಾಡಿಗೆಗೆ ಇದ್ದರು. ಮಹಿಳೆ ಇತ್ತೀಚೆಗೆ ಶೌಚ ಗೃಹದ ಬಲ್ಬ್ ಹಾಳಾಗಿದ್ದು, ಅದನ್ನು ಸರಿ ಮಾಡಿಸಿಕೊಡುವಂತೆ ಮನೆ ಮಾಲೀಕರ ಬಳಿ ಕೇಳಿಕೊಂಡಿದ್ದರು.

ಈ ಹಿನ್ನಲೆ ರಿಪೇರಿ ಕೆಲಸಕ್ಕೆ ಎಲೆಕ್ಟ್ರಿಷಿಯನ್ ಕಳುಹಿಸಿದ ಯಾದವ್, ಆತನ ಮುಖಾಂತರ ಮಹಿಳೆ ವಾಸವಿದ್ದ ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟಿದ್ದ ಎಂದು ತಿಳಿದು ಬಂದಿದೆ. ವಾಶ್ ರೂಮ್ ಅಲ್ಲಿ ಅಳವಡಿಸಿದ್ದ ಬಲ್ಬ್ ಪಾಯಿಂಟ್ ಅಲ್ಲಿ ಸ್ಕ್ರೂ ಸಡಿಲಗೊಂಡಿದ್ದು ಇದನ್ನು ಸರಿ ಮಾಡುವಂತೆ ಮಹಿಳೆ ತನ್ನ ಪತಿಯ ಬಳಿ ತಿಳಿಸಿದ್ದಾರೆ.

ರಿಪೇರಿ ಮಾಡಲು ಬಂದ ಮಹಿಳೆಯ ಗಂಡನಿಗೆ ಆಘಾತವಾಗಿದ್ದು, ಬಲ್ಬ್‌ಗಲಲ್ಲಿ ಹಿಡಿನ್ ಕ್ಯಾಮರಾ ಇಟ್ಟಿರುವುದು ಬಯಾಲಾಗಿದೆ. ತಕ್ಷಣವೇ ದಂಪತಿ ಈ ಬಗ್ಗೆ ಮನೆ ಮಾಲೀಕ ಯಾದವ್ ಅನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಯಾದವ್ ಬೇಜವಾಬ್ದಾರಿಯ ಉತ್ತರ ಕೊಟ್ಟಿದ್ದು, ಈ ಬಗ್ಗೆ ಎಲ್ಲಿಯು ಮಾತನಾಡದಂತೆ ಎಚ್ಚರಿಕೆ ನೀಡಿದ್ದಾನೆ.

ಈ ಸುದ್ದಿಯನ್ನು ಓದಿ: Viral News: ಪರೀಕ್ಷೆ ನಿಲ್ಲಿಸಲು 'ಪ್ರಾಂಶುಪಾಲರು ಸತ್ತಿದ್ದಾರೆ' ಎಂಬ ನೊಟೀಸ್ ನೀಡಿದ ವಿದ್ಯಾರ್ಥಿಗಳು; ಮುಂದೇನಾಯ್ತು ಗೊತ್ತೆ?

ಯಾದವ್‌ನ ಬೆದರಿಕೆಗೆ ಅಂಜದ ದಂಪತಿಗಳು ತಕ್ಷಣವೇ ಅಲ್ಲಿನ ಮಧುರಾನಗರ ಠಾಣೆಗೆ ಹೋಗಿ ದೂರು ನೀಡಿದ್ದು, ಪೊಲೀಸರು ಮನೆ ಮಾಲೀಕ ಅಶೋಕ್ ಯಾದವ್ ಮತ್ತು ಎಲೆಕ್ಟ್ರಿಷಿಯನ್ ಚಿಂಟು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಯಾದವ್ ಅವರನ್ನು ಬಂಧಿಸಿದ್ದು, ಪರಾರಿಯಾಗಿರುವ ಎಲೆಕ್ಟ್ರಿಷಿಯನ್‌ಗಾಗಿ ಹುಡುಕಾಟ ನಡೆಯುತ್ತಿದೆ.

ಇನ್ನು ಇಷ್ಟು ದಿನ ಹೋಟೆಲ್ ರೂಮ್ಗಳಲ್ಲಿ ಹಿಡನ್ ಕ್ಯಾಮರಾ ಹಿಟ್ಟಿರುತ್ತಾರೆ ಎಂಬ ಭಯ ಕಾಡುತ್ತಿತ್ತು. ಆದರೆ ಈಗ ಮತ್ತೊಂದು ಭಯ ಶುರುವಾಗಿದೆ.