ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UP Murder Case: ಸೋದರಳಿಯನ ಜೊತೆ ಲವ್ವಿ-ಡವ್ವಿ! ಗಂಡನನ್ನು ಕತ್ತರಿಸಿ ಸೂಟ್‌ಕೇಸ್‌ ತುಂಬಿದ ಪಾತಕಿ

UP Murder Case: ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಪತಿಯನ್ನು ತನ್ನ ಪ್ರಿಯತಮನೊಂದಿಗೆ ಸೇರಿ ಕೊಲೆ ಮಾಡಿ, ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿ ಪತ್ನಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನೌಷಾದ್ ಎಂದು ಗುರುತಿಸಿದ್ದು, ಪತ್ನಿ ರಜಿಯಾ ಸುಲ್ತಾನಾ ನಡುವೆ ಆಗಾಗ ಜಗಳ ನಡೆಯುತಿತ್ತು. ತಮ್ಮ ಸಂಬಂಧಕ್ಕೆ ಗಂಡನೇ ಅಡ್ಡಗಾಲಾಗಿ ಪರಿಣಮಿಸಿದ್ದಾನೆ ಎಂದು ಸಿಟ್ಟಿಗೆದ್ದ ರಜಿಯಾ, ತನ್ನ ಪ್ರಿಯತಮನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ.

ಗಂಡನನ್ನು ಕತ್ತರಿಸಿ ಸೂಟ್‌ಕೇಸ್‌ ತುಂಬಿದ ಹಂತಕಿ!

Profile Sushmitha Jain Apr 22, 2025 1:08 PM

ದೇವರಿಯಾ: ಉತ್ತರ ಪ್ರದೇಶ(UP Murder Case) ದ ದೇವರಿಯಾ(Deoria)ದಲ್ಲಿ ಕೃಷಿ ಭೂಮಿಯೊಂದರಲ್ಲಿ ಸೂಟ್‌ಕೇಸ್‌ನಲ್ಲಿ ಶವವೊಂದು ಪತ್ತೆ(Body In Suitcase)ಯಾಗಿದ್ದು, ತನಿಖೆಯಿಂದ ಒಂದು ಶಾಕಿಂಗ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಓರ್ವ ಮಹಿಳೆ ತನ್ನ ಸೋದರಳಿಯನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ದೇವರಿಯಾದ ಪಕರಿ ಛಪ್ಪರ್ ಪಟ್‌ಖೌಲಿ ಗ್ರಾಮದ ಕೃಷಿ ಭೂಮಿಯಲ್ಲಿ ಅನುಮಾನಸ್ಪಾದ ಟ್ರಾಲಿ ಸೂಟ್‌ಕೇಸ್‌ವೊಂದು ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು, ಸಂಶಯಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸೂಟ್‌ಕೇಸ್ ತೆರೆದಾಗ, ಶವವೊಂದು ಕಂಡುಬಂದಿದೆ. ಕೂಡಲೇ ಫೊರೆನ್ಸಿಕ್ ತಂಡ ಮತ್ತು ಶ್ವಾನ ದಳಕ್ಕೆ ಕರೆ ನೀಡಿದ ಪೊಲೀಸರು, ಶವದ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಸೂಟ್‌ಕೇಸ್‌ನಲ್ಲಿ ದೊರೆತ ವಿಳಾಸ ಚೀಟಿಯೊಂದು ಪೊಲೀಸರಿಗೆ ಸುಳಿವು ನೀಡಿದ್ದು, ಅದನ್ನು ಆಧರಿಸಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದರು. ಕೊಲೆಯಾದ ವ್ಯಕ್ತಿಯನ್ನು ನೌಷಾದ್ (30) ಎಂದು ಪತ್ತೆ ಹಚ್ಚಿದ ಪೊಲೀಸರು ನೌಷಾದ್‌ನ ಪತ್ನಿ ರಜಿಯಾ ಸುಲ್ತಾನಾ (30) ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆಕೆಯೇ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ನೌಷಾದ್ ನ ಸೋದರಳಿಯನ ಜೊತೆ ರೋಮನ್ (27) ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು, ಇದಕ್ಕೆ ತನ್ನ ಪತಿ ಅಡ್ಡಿಯಾಗಿದ್ದರಿಂದ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಇನ್ನು ನೌಷಾದ್ ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವಾರವಷ್ಟೇ ಊರಿಗೆ ಮರಳಿದ್ದ ಎಂದು ಪೊಲೀರು ತಿಳಿಸಿದ್ದಾರೆ.

ನೌಷಾದ್‌ನನ್ನು ಚೂಪಾದ ಆಯುಧದಿಂದ ಕೊಲೆಗೈದಿದ್ದಾಗಿ, ತಾನು, ರೋಮನ್ ಮತ್ತು ಅವನ ಸ್ನೇಹಿತ ಹಿಮಾಂಶು ಕೊಲೆಯಲ್ಲಿ ಭಾಗಿಯಾಗಿದ್ದಾಗಿ ಆಕೆ ತಿಳಿಸಿದ್ದಾಳೆ. ರೋಮನ್ ಮತ್ತು ಹಿಮಾಂಶು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ, ತಮ್ಮ ಮನೆಯಿಂದ ಸುಮಾರು 60 ಕಿಮೀ ದೂರದ ಭೂಮಿಯಲ್ಲಿ ಎಸೆದಿದ್ದಾರೆ. ಪೊಲೀಸರು ಕೊಲೆಯ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ. ರೋಮನ್ ಮತ್ತು ಹಿಮಾಂಶು ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ನೌಷಾದ್‌ನ ಸಹೋದರಿ ನಿಶಾ, ಕುಟುಂಬವು ಆರ್ಥಿಕವಾಗಿ ಕಷ್ಟದಲ್ಲಿದ್ದಾಗ, ನೌಷಾದ್ ವರ್ಷಗಟ್ಟಲೆ ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡಿ ಕುಟುಂಬದ ಆದಾಯವನ್ನು ಹೆಚ್ಚಿಸಿದ್ದ ಎಂದು ತಿಳಿಸಿದ್ದಾರೆ. ಆತ ತನ್ನ ವೃದ್ಧ ತಂದೆ, ಪತ್ನಿ ರಜಿಯಾ ಮತ್ತು ಮಗಳಿಗಾಗಿ ಮನೆಯನ್ನೂ ಕಟ್ಟಿದ್ದ. ಒಂದು ವಾರದ ಹಿಂದೆ ಎರಡು ಸೂಟ್‌ಕೇಸ್‌ಗಳೊಂದಿಗೆ ಮರಳಿದ್ದ ಆತ, ಒಂದು ಸೂಟ್‌ಕೇಸ್ ತನ್ನ ಶವವನ್ನು ಎಸೆಯಲು ಬಳಸಲ್ಪಡುತ್ತದೆ ಎಂದು ತಿಳಿದಿರಲಿಲ್ಲ.

ಈ ಸುದ್ದಿಯನ್ನು ಓದಿ: Crime News: ಗುರುಗ್ರಾಮ ಮೇದಾಂತ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಮಹಿಳೆ ಮೇಲೆ ಡಿಜಿಟಲ್‌ ರೇಪ್‌; ಹಾಗೆಂದರೇನು? ಇಲ್ಲಿದೆ ವಿವರ

ದೇವರಿಯಾ ಪೊಲೀಸ್ ಮುಖ್ಯಸ್ಥ ವಿಕ್ರಾಂತ್ ವೀರ್, ನೌಷಾದ್‌ನ ಅತ್ತಿಗೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. "ನಾವು ಆತನ ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ, ಆಕೆ ಕೊಲೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಳು. ಆಕೆಯ ಪತಿಯ ಸೋದರಳಿಯ ರೋಮನ್ ಮತ್ತು ಆತನ ಸ್ನೇಹಿತ ಹಿಮಾಂಶು ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಕೊಲೆಯು ಶನಿವಾರ ರಾತ್ರಿ ನಡೆದಿದೆ. ರೋಮನ್ ಮತ್ತು ಹಿಮಾಂಶು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರು ಆ ರಾತ್ರಿ ಒಂದು ಎಸ್‌ಯುವಿ ತಂದು, ಕೊಲೆಯ ನಂತರ ಶವವನ್ನು ಎಸೆದಿದ್ದಾರೆ" ಎಂದು ಅವರು ಹೇಳಿದ್ದಾರೆ.

"ನಾವು ಮುಖ್ಯ ಆರೋಪಿ ರಜಿಯಾ ಸುಲ್ತಾನಾಳನ್ನು ಬಂಧಿಸಿದ್ದೇವೆ. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ," ಎಂದು ಅಧಿಕಾರಿ ತಿಳಿಸಿದ್ದಾರೆ. ನೌಷಾದ್‌ಗೆ ತನ್ನ ಸೋದರಳಿಯ ರೋಮನ್ ಇಷ್ಟವಿರಲಿಲ್ಲ, ಈ ವಿಷಯದಲ್ಲಿ ದಂಪತಿಗಳ ನಡುವೆ ಘರ್ಷಣೆಯಿತ್ತು ಎಂದು ಅವರು ಸೇರಿಸಿದ್ದಾರೆ. ಶವದ ಗುರುತನ್ನು ಹೇಗೆ ಪತ್ತೆಹಚ್ಚಿದ್ದೀರಿ ಎಂದು ಕೇಳಿದಾಗ, "ಮೃತನು ಆ ಟ್ರಾಲಿಯನ್ನು ಬಳಸಿದ್ದರಿಂದ, ಅದರ ಮೇಲೆ ಆತನ ವಿಳಾಸವಿತ್ತು. ಆ ಮೂಲಕ ಆತನ ಗುರುತನ್ನು ದೃಢಪಡಿಸಿದೆವು. ನಾವು ಆತನ ಮನೆಗೆ ತಲುಪಿ, ಮುಖ್ಯ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಒಪ್ಪಿಕೊಂಡಳು" ಎಂದು ಅಧಿಕಾರಿ ವಿವರಿಸಿದ್ದಾರೆ