ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UP Murder: ಪ್ರಿಯಕರನ ಜೊತೆಗೂಡಿ ಪತಿಯ ಬರ್ಬರ ಹತ್ಯೆ- ಹೊಟ್ಟೆ ಸೀಳಿ, ದೇಹವನ್ನು ಆ್ಯಸಿಡ್‌ ಹಾಕಿ ಸುಟ್ಟ ದುರುಳರು

ಇತ್ತೀಚೆಗೆ ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ್ದ ವೇಳೆ ತನ್ನ ಪತಿಯನ್ನು ಪತ್ನಿ ಕೊಲೆ ಮಾಡಿ ಸಿಕ್ಕಿ ಬಿದ್ದ ಪ್ರಕರಣದ ರೀತಿಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ಅಲಿಗಢದಲ್ಲಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ. ಗುರುತನ್ನು ಮರೆಮಾಚಲು ಆರೋಪಿಗಳು ದೇಹದ ಮೇಲೆ ಆ್ಯಸಿಡ್ ಸುರಿದು ಸುಟ್ಟಿದ್ದಾರೆ.

ಗಂಡನನ್ನು ಕೊಂದು ದೇಹವನ್ನು ಆ್ಯಸಿಡ್‌ ಹಾಕಿ ಸುಟ್ಟ ಪಾತಕಿ

Profile Sushmitha Jain Aug 5, 2025 12:55 PM

ಅಲಿಗಢ: ಉತ್ತರ ಪ್ರದೇಶದ (Uttar Pradesh) ಅಲಿಗಢ (Aligarh) ಜಿಲ್ಲೆಯ ಛರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಕೊಲೆ (Murder Case) ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುಸುಫ್ ಎಂಬ ವ್ಯಕ್ತಿಯನ್ನು ಅವನ ಪತ್ನಿ ತಬಸ್ಸುಮ್ ಮತ್ತು ಆಕೆಯ ಪ್ರಿಯಕರ ಡ್ಯಾನಿಶ್ ಕ್ರೂರವಾಗಿ ಕೊಂದಿದ್ದಾರೆ. ಕೊಲೆಯ ನಂತರ, ಗುರುತನ್ನು ಮರೆಮಾಚಲು ಆರೋಪಿಗಳು ದೇಹದ ಮೇಲೆ ಆ್ಯಸಿಡ್ (Acid Case) ಸುರಿದು ಸುಟ್ಟಿದ್ದಾರೆ.

ಯುಸುಫ್ ನಾಪತ್ತೆ

ಯುಸುಫ್‌ನ ತಂದೆ ಭೂರೆ ಖಾನ್ ಪ್ರಕಾರ, ಯುಸುಫ್ ಜುಲೈ 29 ರಂದು ಎಂದಿನಂತೆ ಮಾರುಕಟ್ಟೆಯಲ್ಲಿ ಲೋಡರ್ ಆಗಿ ಕೆಲಸಕ್ಕೆ ತೆರಳಿದ್ದರು. ಆದರೆ, ಆ ಸಂಜೆ ಅವರು ಮನೆಗೆ ಮರಳಲಿಲ್ಲ. ಕುಟುಂಬವು ದಿನಗಟ್ಟಲೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಅಂತಿಮವಾಗಿ, ಛರ್ರಾ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಲಾಯಿತು.

ಕಾಸ್‌ಗಂಜ್‌ನಲ್ಲಿ ಶವ ಪತ್ತೆ

ಕೆಲವು ದಿನಗಳ ನಂತರ, ಕಾಸ್‌ಗಂಜ್ ಜಿಲ್ಲೆಯ ಧೋಲ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಇಟ್ಟಿಗೆ ಒಲೆಗಳ ಬಳಿ ಆಸಿಡ್‌ನಿಂದ ಕೊಳೆತು ಸ್ಥಿತಿಯಲ್ಲಿದ್ದ ಶವವೊಂದು ಪತ್ತೆಯಾಯಿತು. ಶವವು ಕೀಟಗಳಿಂದ ಕೂಡಿತ್ತು, ಗುರುತಿಸುವುದು ಕಷ್ಟವಾಗಿತ್ತು. ತನಿಖೆಯ ನಂತರ ಶವವು ಯುಸುಫ್‌ನದ್ದೇ ಎಂದು ಪೊಲೀಸರು ಪತ್ತೆ ಮಾಡಿದ್ದರು.

ಈ ಸುದ್ದಿಯನ್ನು ಓದಿ: Crime News: ಡ್ಯಾಮ್‌ನಲ್ಲಿ ವ್ಯಕ್ತಿಯ ಶವ ಪತ್ತೆ... ಖಾಸಗಿ ಅಂಗ ಕಟ್‌- ವಾಮಾಚಾರಕ್ಕೆ ಪ್ರತೀಕಾರ?

ಘಟನೆ ನಡೆದಿದ್ದು ಹೇಗೆ..?

ಪೊಲೀಸ್ ತನಿಖೆಯಿಂದ ತಬಸ್ಸುಮ್ ತನ್ನ ಪ್ರಿಯಕರ ಡ್ಯಾನಿಶ್ ಜೊತೆಗೂಡಿ ಕೊಲೆಯ ಯೋಜನೆ ರೂಪಿಸಿದ್ದಳು ಎಂಬುದು ಬಯಲಾಯಿತು. ಕೊಲೆಯ ದಿನ, ಯುಸುಫ್‌ನ ಕೈಕಾಲುಗಳನ್ನು ಕಟ್ಟಿ, ಹೊಟ್ಟೆಯನ್ನು ಸೀಳಿ ಕೊಲೆ ಮಾಡಲಾಗಿದೆ. ನಂತರ, ದೇಹವನ್ನು ಎಳೆದೊಯ್ದು ಆಸಿಡ್ ಸುರಿದು ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಲಾಗಿದೆ. ಪೊಲೀಸರು ತಬಸ್ಸುಮ್‌ನನ್ನು ಬಂಧಿಸಿ ಆಕೆಯನ್ನು ಜೈಲಿಗೆ ಕಳುಹಿಸಿದ್ದಾರೆ. ಆದರೆ, ಡ್ಯಾನಿಶ್ ಮತ್ತು ಆತನ ಕುಟುಂಬ ಸದಸ್ಯರು ತಲೆಮರೆಸಿಕೊಂಡಿದ್ದಾರೆ.

ಈ ಕೊಲೆ ಕ್ರೂರ ಮತ್ತು ಆಘಾತಕಾರಿಯಾಗಿದೆ. ಪತ್ನಿ ಮತ್ತು ಆಕೆಯ ಪ್ರಿಯಕರನು ಯುಸುಫ್‌ನನ್ನು ಕೊಂದು, ಅಪರಾಧವನ್ನು ಮರೆಮಾಚಲು ದೇಹವನ್ನು ಸುಟ್ಟಿದ್ದಾರೆ. ತಬಸ್ಸುಮ್‌ನನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಶೀಘ್ರದಲ್ಲೇ ಹಿಡಿಯಲಾಗುವುದು ಎಂದು ಡಿಎಸ್‌ಪಿ ಧನಂಜಯ್ ಸಿಂಗ್ ತಿಳಿಸಿದ್ದಾರೆ.