ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wall Collapse: ಸಿಮೆಂಟ್ ಮಿಕ್ಸರ್ ಲಾರಿಯಿಂದಾಗಿ ಗೋಡೆ ಕುಸಿತ; ಮನೆಯಲ್ಲಿ ಆಟವಾಡುತ್ತಿದ್ದ 1 ವರ್ಷದ ಮಗು ಸಾವು

ಸಿಮೆಂಟ್ ಮಿಕ್ಸರ್​ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿಯಾಗಿರುವ ಘಟನೆ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ. ನವಂಬರ್ 7 ರಂದು ಸಂಜೆ 3:11 ಸುಮಾರಿಗೆ ಈ ಘಟನೆ ನಡೆದಿದ್ದು, ಸಿಮೆಂಟ್ ಮಿಕ್ಸರ್​ ಲಾರಿ 1 ವರ್ಷ 8 ತಿಂಗಳ ಮುದ್ದಾದ ಮಗು ಪ್ರಣವ್​ನ ಬಲಿ ಪಡೆದಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಸಿಮೆಂಟ್ ಮಿಕ್ಸರ್​ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ (Wall Collapse) ಬಲಿಯಾಗಿರುವ ಘಟನೆ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ. ನವಂಬರ್ 7 ರಂದು ಸಂಜೆ 3:11 ಸುಮಾರಿಗೆ ಈ ಘಟನೆ ನಡೆದಿದ್ದು, ಸಿಮೆಂಟ್ ಮಿಕ್ಸರ್​ ಲಾರಿ 1 ವರ್ಷ 8 ತಿಂಗಳ ಮುದ್ದಾದ ಮಗು ಪ್ರಣವ್​ನ ಬಲಿ ಪಡೆದಿದೆ. ಹೊಸ ಮನೆಯೊಂದರ ಮೋಲ್ಡಿಂಗ್ ಕೆಲಸ ಮುಗಿಸಿ ಬರ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿ, ಪ್ರಣವ್​ ಮನೆಯ ರಸ್ತೆಯಲ್ಲೇ ಹಾದು ಹೋಗ್ತಿತ್ತು. ಈ ವೇಳೆ (Wall Collapse) ಲಾರಿಯು ಮೇಲಿದ್ದ ವಿದ್ಯುತ್ ತಂತಿಗೆ ತಾಗಿದೆ. ಇದನ್ನ ಅರಿಯದ ಚಾಲಕ ತಂತಿಯನ್ನು ಎಳೆದುಕೊಂಡೆ ಹೋಗಿದ್ದಾನೆ.

ವೈರಿಂಗ್ ಕಂಬ ಕಿತ್ತು ಬಂದು ಮನೆಯ ಗೋಡೆ ಮೇಲೆ ಕುಸಿದಿದೆ. ಈ ವೇಳೆ ಮನೆ ಕಾಂಪೌಂಡ್​ನಲ್ಲಿ ಆಟ ಆಡ್ತಿದ್ದ ಏನೂ ಅರಿಯದ ಮಗು ಮೇಲೆ ಮನೆ ಗೋಡೆ ಅವಶೇಷ‌ ಬಿದ್ದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪ್ರಣವ್​ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹೋಗಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದ್ರೆ ಈ ಘಟನೆ ಬಳಿಕ ಕಾಂಕ್ರೀಟ್ ಮಿಕ್ಸರ್ ಚಾಲಕ ಪರಾರಿಯಾಗಿದ್ದಾನೆ.

ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಮಗು ಪ್ರಣವ್ ಸಾವನ್ನಪ್ಪಿದ ಬಾಲಕ. ಮಗನನ್ನು ಕಳೆದುಕೊಂಡ ಪೋಷಕರು ಗೋಳಿಡುತ್ತಿದ್ದಾರೆ. ಸದ್ಯ ಬೌರಿಂಗ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹವನ್ನ ಶಿಫ್ಟ್ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: Uttara Kannada News: ಕಟ್ಟಡ ಕಾಮಗಾರಿ ವೇಳೆ ಲಿಫ್ಟ್‌ ಕುಸಿದು ಇಬ್ಬರು ಕಾರ್ಮಿಕರ ಸಾವು

ಪ್ರತ್ಯೇಕ ಘಟನೆಯಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಯುವತಿ ಸಾವನ್ನಪ್ಪಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ. ಗಂಗಾವತಿ ತಾಲೂಕು ಬಸಾಪಟ್ಟಣ ಗ್ರಾಮದ ಪ್ರೇಮಾ (18) ಮೃತ ಯುವತಿ. ಯುವತಿ ಸೇರಿದಂತೆ ಆಟೋದಲ್ಲಿ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದರು. ಯುವತಿ ಬಸಾಪಟ್ಟಣದಿಂದ ಗಂಗಾವತಿಗೆ ತೆರಳುತ್ತಿದ್ದಳು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಸ್ಥಳಕ್ಕೆ ಗಂಗಾವತಿ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.