ಅಹ್ಮದಾಬಾದ್: ಇತ್ತೀಚಿನ ದಿನಗಳಲ್ಲಿ ಬರ್ಬರ ಕೊಲೆಗಳು, ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಎಸೆಯುವುದು ಸರ್ವೇಸಾಮಾನ್ಯ ಎಂಬ ರೀತಿಯ ಆಗಾಗಾ ಬೆಳಕಿಗೆ ಬರುತ್ತಲೇ ಇರುತ್ತವೆ. ಕೆಲವೊಂದು ಘಟನೆಗಳು ಸಿನಿಮಾವನ್ನೇ ಮೀರಿಸುವಂತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಗುಜರಾತ್‌ನಲ್ಲಿ ನಡೆದಿದೆ. ಇಲ್ಲಿ ಪಟಾಣ್ ಜಿಲ್ಲೆಯಲ್ಲಿ ಕಿಡಿಗೇಡಿ ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ ವ್ಯಕ್ಯಿಯೊಬ್ಬನ್ನು ಬರ್ಬರವಾಗಿ ಹತ್ಯೆ ಮಾಡಿ, ನಂತರ ಶವವನ್ನು ಸುಟ್ಟು ಹಾಕಿರುವ ಭೀಕರ ಘಟನೆ ವರದಿಯಾಗಿದೆ. ಇನ್ನು ಇದರಲ್ಲಿ ಅಚ್ಚರಿಯ ವಿಚಾರ ಏನೆಂದರೆ ತಾನು ಹತ್ಯೆ ಮಾಡಿರುವ ವ್ಯಕ್ತಿಯನ್ನು ತನ್ನದೇ ಶವ ಎಂಬಂತೆ ಬಿಂಬಿಸಿದ್ದಳಂತೆ ಈ ಖತರ್ನಾಕ್ ಹಂತಕಿ. ಸದ್ಯ ಹಂತಕರಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಇನ್ನು ಬಂಧಿತರನ್ನು ಗೀತಾ ಹಾಗೂ ಭರತ್ ಎಂದು ಗುರುತಿಸಲಾಗಿದೆ.
ಘಟನೆ ವಿವರ
ಪಠಾಣ್ ಪೊಲೀಸ್ ವರಿಷ್ಠಾಧಿಕಾರಿ ವಿ.ಕೆ. ನಾಯ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮದುವೆಯಾಗಿದ್ದರೂ ಗೀತಾ ಭರತ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಹೀಗಾಗಿ ಇವರಿಬ್ಬರು ಮನೆಯವರ ಕಣ್ಣಿಗೆ ಮಣ್ಣೆರಚಿ ಓಡಿ ಹೋಗಲು ಮುಂದಾಗಿದ್ದರು. ಇದಕ್ಕಾಗಿ ಇವರಿಬ್ಬರು ಖತರ್ನಾಕ್ ಪ್ಲ್ಯಾನ್ ಅನ್ನೇ ಮಾಡಿದ್ದರು. ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ನೋಡಿ ಗೀತಾ ಸಾವನ್ನಪ್ಪಿರುವಂತೆ ನಾಟಕವಾಡಿ ಮನೆಯವರನ್ನು ನಂಬಿಸಲು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ ರಾತ್ರಿ ಮನೆಯವರೆಲ್ಲರೂ ಮಲಗಿದ್ದ ಸಮಯದಲ್ಲಿ ಗೀತಾ ಮನೆ ಬಿಟ್ಟು ಬಂದಿದ್ದಾಳೆ. ಅನಂತರ ಆಕೆಯನ್ನು ಪತಿ ಸೇರಿದಂತೆ ಮನೆಯವರೆಲ್ಲರೂ ಹುಡುಕಲು ಶುರು ಮಾಡಿದ್ದಾರೆ. ನಂತರ ಊರಿನ ಸಮೀಪವಿರುವ ಕೊಳದ ಹತ್ತಿರ ಅರ್ಧ ಸುಟ್ಟಿರುವ ದೇಹ ಪತ್ತೆಯಾಗಿತ್ತು. ದೇಹದ ಮೇಲಿನ ಬಟ್ಟೆ ಮತ್ತು ಕಾಲಿನಲ್ಲಿದ್ದ ಕಾಲ್ಗೆಜ್ಜೆ ನೋಡಿ ಮನೆಯವರು ಅದು ಗೀತಾಳ ಮೃತದೇಹ ಎಂದು ಭಾವಿಸಿದ್ದಾರೆ. ಆದರೆ, ಶವವನ್ನು ಮನೆಗೆ ತಂದ ನಂತರ, ಅದು ಪುರುಷನೋರ್ವನ ಮೃತದೇಹ ಎಂಬುದು ಬಯಲಾಗಿದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Murder Case: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಟ್ವಿಸ್ಟ್, ಅತ್ತೆಯೇ ಕೊಲೆಗಾತಿ!
ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಮರ್ಡರ್ ಮಿಸ್ಟ್ರಿ!
ಇನ್ನು ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಗೀತಾ ಮತ್ತು ಭರತ್‌ನಲ್ಲಿ ಪತ್ತೆಹಚ್ಚಿ ತನಿಖೆ ನಡೆಸಿದಾಗ ರಣಭೀಕರ ಸಂಗತಿಯನ್ನು ಹಂತಕರು ಬಾಯ್ಬಿಟ್ಟಿದ್ದಾರೆ. ಮೇ 26ರಂದು 56 ವರ್ಷದ ಹರ್ಜಿಭಾಯ್ ಸೋಲಂಕಿ ಎಂಬಾತನನ್ನು ಲಿಫ್ಟ್ ಕೊಡುವ ನೆಪದಲ್ಲಿ ಕರೆದೊಯ್ದು ಗೀತಾ ಮತ್ತು ಭರತ್ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಇನ್ನು ಆ ಮೃತದೇಹ ಗೀತಾಳದ್ದೇ ಎಂದು ನಂಬಿಸಲು ಆಕೆಯ ಬಟ್ಟೆ ಹಾಗೂ ಕಾಲ್ಗೆಜ್ಜೆಯನ್ನು ಆ ಮೃತದೇಹಕ್ಕೆ ಹಾಕಿ ಅವರಿಬ್ಬರೂ ರಾಜಸ್ಥಾನಕ್ಕೆ ಪರಾರಿಯಾಗಿದ್ದರು ಎನ್ನಲಾಗಿದೆ.