ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮತ್ತೊಂದು ನೀಲಿ ಡ್ರಮ್‌ ಕ್ರೈಂ: ಬೆಳ್ಳಂಬೆಳಗ್ಗೆ ಯುವತಿಯ ಮೃತದೇಹ ಪತ್ತೆ; ಬೆಚ್ಚಿಬಿದ್ದ ಪಂಜಾಬ್‌

Crime News: ಪ್ಲಾಸ್ಟಿಕ್ ಡ್ರಮ್‌ನಲ್ಲಿ ಯುವತಿಯ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ ಪಟಿಯಾಲಾದ ಅರ್ಬನ್ ಎಸ್ಟೇಟ್ ಪ್ರದೇಶದಲ್ಲಿ ನಡೆದಿದೆ. ಇದು ಕೊಲೆ ಪ್ರಕರಣವಾಗಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಮೃತ ಯುವತಿ 15ರಿಂದ 20 ವರ್ಷ ವಯಸ್ಸಿನವರಾಗಿರಬಹುದು ಎನ್ನಲಾಗಿದೆ. ಆಕೆಯ ಗುರುತು ಇನ್ನೂ ದೃಢಪಟ್ಟಿಲ್ಲ.

ಸಾಂದರ್ಭಿಕ ಚಿತ್ರ

ಚಂಡೀಗಢ, ಮೇ 27: ನೀಲಿ ಪ್ಲಾಸ್ಟಿಕ್ ಡ್ರಮ್‌ ಕ್ರೈಂ ಮತ್ತೊಮ್ಮೆ ಪುನರಾವರ್ತನೆಯಾಗಿದೆ. ಪ್ಲಾಸ್ಟಿಕ್ ಡ್ರಮ್‌ನಲ್ಲಿ ಯುವತಿಯ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ ಪಟಿಯಾಲಾದ ಅರ್ಬನ್ ಎಸ್ಟೇಟ್ ಪ್ರದೇಶದಲ್ಲಿ ನಡೆದಿದೆ. ಇದು ಕೊಲೆ ಪ್ರಕರಣವಾಗಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಮಾನವ ಅವಶೇಷಗಳನ್ನು ಹೊಂದಿರುವ ಡ್ರಮ್ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಬಳಿಕ ಪೊಲೀಸ್ ತಂಡ ಪ್ರದೇಶಕ್ಕೆ ತಲುಪಿ ಪರಿಶೀಲಿಸಿದಾಗ ಕಂಬದ ಬಳಿ ಶವ ಪತ್ತೆಯಾಗಿದೆ. ನಿವಾಸಿಗಳಲ್ಲಿ ಭೀತಿ ಹರಡುತ್ತಿದ್ದಂತೆ ಅರ್ಬನ್ ಎಸ್ಟೇಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸೀಲ್ ಮಾಡಿದರು (Crime News).

ಮೃತ ಯುವತಿ 15ರಿಂದ 20 ವರ್ಷ ವಯಸ್ಸಿನವರಾಗಿರಬಹುದು ಎನ್ನಲಾಗಿದೆ. ಆಕೆಯ ಗುರುತು ಇನ್ನೂ ದೃಢಪಟ್ಟಿಲ್ಲ. ʼʼಬೆಳ್ಳಂಬೆಳಗ್ಗೆ ರಸ್ತೆಬದಿಯ ಬಳಿ ಡ್ರಮ್ ಒಳಗೆ ಶವ ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿತುʼʼ ಎಂದು ಪೊಲೀಸ್ ಅಧಿಕಾರಿ ಗುರ್ವಿಂದರ್ ಸಿಂಗ್ ತಿಳಿಸಿದ್ದಾರೆ. ʼʼಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ, ನೀಲಿ ಬಣ್ಣದ ಡ್ರಮ್ ಒಳಗೆ ಯುವತಿಯ ಶವ ಪತ್ತೆಯಾಗಿದೆʼʼ ಎಂದು ಅವರು ಹೇಳಿದರು.

ಅನೈತಿಕ ಸಂಬಂಧ ಶಂಕೆ: ನಿದ್ರಿಸುತ್ತಿದ್ದ ಪತಿಯ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ

ಮಹಿಳೆಯ ಒಂದು ಕೈಯಲ್ಲಿ ನೇಹಾ ಎಂಬ ಹೆಸರಿನ ಹಚ್ಚೆ ಇದ್ದರೆ, ಇನ್ನೊಂದು ತೋಳಿನಲ್ಲಿ ಹೃದಯ ಚಿಹ್ನೆಯನ್ನು ಹೊಂದಿರುವ ಮತ್ತೊಂದು ಹಚ್ಚೆ ಕಂಡುಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಗುರುತುಗಳು ಆಕೆಯನ್ನು ಗುರುತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಪೊಲೀಸರು ಹೇಳಿದ್ದಾರೆ. ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಸುಳಿವುಗಳಿಗಾಗಿ ಡ್ರಮ್ ಮತ್ತು ಸುತ್ತಮುತ್ತಲಿನ ಸ್ಥಳವನ್ನು ಪರಿಶೀಲಿಸಲು ವಿಧಿವಿಜ್ಞಾನ ತಂಡವನ್ನು ಕರೆಸಲಾಯಿತು.

ಮುಂದುವರಿದ ತನಿಖೆ

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ರಾಜೀಂದ್ರ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದು, ವಿಧಿವಿಜ್ಞಾನ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣ ಮತ್ತು ಯುವತಿ ಯಾವ ಸಂದರ್ಭದಲ್ಲಿ ಸಾವಿಗೀಡಾಗಿದ್ದಾಳೆ ಎಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳ ಗುರುತನ್ನು ಪತ್ತೆಹಚ್ಚಲು ಮತ್ತು ಸ್ಥಳದಲ್ಲಿ ಡ್ರಮ್ ಅನ್ನು ಯಾರು ಇಟ್ಟು ಹೋಗಿದ್ದಾರೆ ಎಂಬುದನ್ನು ಹುಡುಕುವ ಸಲುವಾಗಿ ಅಧಿಕಾರಿಗಳು, ನಾಪತ್ತೆಯಾದ ವ್ಯಕ್ತಿಗಳ ವರದಿಗಳು ಮತ್ತು ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.