ಅನೈತಿಕ ಸಂಬಂಧ ಶಂಕೆ: ನಿದ್ರಿಸುತ್ತಿದ್ದ ಪತಿಯ ಖಾಸಗಿ ಅಂಗವನ್ನೇ ಕತ್ತರಿಸಿದ ಪತ್ನಿ
ರಾತ್ರಿ ಒಟ್ಟಿಗೆ ಊಟ ಮಾಡಿ ನೆಮ್ಮದಿಯಿಂದ ಮಲಗಿದ್ದ ಪತಿಯ ಖಾಸಗಿ ಅಂಗವನ್ನೇ ಮಹಿಳೆಯೊಬ್ಬಳು ಕತ್ತರಿಸಿದ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. ಪತಿಗೆ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಹೊಂದಿರುವ ಅನುಮಾನದಿಂದ ಪತ್ನಿ ಹೀಗೆ ಮಾಡಿದ್ದಾಳೆ ಎನ್ನಲಾಗಿದೆ. ಪತಿ ಪತ್ನಿಯ ನಡುವೆ ಪದೇ ಪದೇ ಜಗಳಗಳು ಕೂಡ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಛತ್ತೀಸ್‌ಗಢ: ನಿದ್ರಿಸುತ್ತಿದ್ದ ಪತಿಯ ಖಾಸಗಿ ಅಂಗವನ್ನು ಪತ್ನಿಯೊಬ್ಬಳು (Wife attack) ಕತ್ತರಿಸಿರುವ ಘಟನೆ ಛತ್ತೀಸ್‌ಗಢದಲ್ಲಿ (Chhattisgarh) ನಡೆದಿದೆ. ಮಲಗಿದ್ದ ಪತಿಯ ಮೇಲೆ ಹಲ್ಲೆ ನಡೆಸಿದ ಪತ್ನಿ ಬಳಿಕ ಆತನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಪತಿ ಬೇರೊಬ್ಬ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ (extramarital affair) ಹೊಂದಿದ್ದಾನೆ ಎನ್ನುವ ಶಂಕೆಯಲ್ಲಿ ಪತ್ನಿ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ. ಈ ಘಟನೆಗೂ ಮೊದಲು ಪತಿ ಪತ್ನಿಯರಿಬ್ಬರು ಕೂಡ ಜೊತೆಯಾಗಿ ಊಟ ಮಾಡಿದ್ದರು. ಇವರಿಬ್ಬರ ಮಧ್ಯೆ ಪದೇ ಪದೇ ಜಗಳಗಳು ನಡೆಯುತ್ತಿತ್ತು ಎನ್ನಲಾಗಿದೆ.
ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಿದ್ರಿಸುತ್ತಿದ್ದ ರಾಜೇಶ್ ಕೌಶಿಕ್ ಮೇಲೆ ಆತನ ಪತ್ನಿ ದ್ರೌಪತಿ ಬಾಯಿ ಹಲ್ಲೆ ನಡೆಸಿ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಅಕ್ರಮ ಸಂಬಂಧದ ಶಂಕೆಯಿಂದ ಆಕೆ ರಾಜೇಶ್ ಜೊತೆ ಪದೇ ಪದೇ ಜಗಳ ನಡೆಸುತ್ತಿದ್ದಳು. ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಕಟ್ಟಡ ಕಾರ್ಮಿಕನಾಗಿದ್ದ ರಾಜೇಶ್ ಕೌಶಿಕ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸರ್ಕಾರಿ ಸ್ವಾಮ್ಯದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣ: ಆರೋಪಿಗಳಿಂದ ಉತ್ತರ ಪ್ರದೇಶ ವಿಧಾನಸಭೆ ಮೇಲೆ ದಾಳಿಗೆ ಯೋಜನೆ
ರಾಜೇಶ್ ಮತ್ತು ದ್ರೌಪತಿ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಜಗಳಗಳು ನಡೆಯುತ್ತಿದ್ದವು. ರಾಜೇಶ್ ಗೆ ಬೇರೊಬ್ಬ ಮಹಿಳೆ ಜೊತೆ ಸಂಬಂಧವಿದೆ ಎಂದು ದ್ರೌಪತಿ ಆರೋಪಿಸಿದ್ದಾಳೆ. ಘಟನೆಯ ರಾತ್ರಿ ದ್ರೌಪತಿ ಮತ್ತು ರಾಜೇಶ್ ಒಟ್ಟಿಗೆ ಊಟ ಮಾಡಿ ಬಳಿಕ ಮಲಗಿದ್ದರು. ತಡರಾತ್ರಿ ವೇಳೆ ದ್ರೌಪತಿಯು ರಾಜೇಶ್ ಮೇಲೆ ಹಲ್ಲೆ ನಡೆಸಿದ್ದಾಳೆ. ತೀವ್ರ ರಕ್ತಸ್ರಾವದಿಂದ ಗಾಯಗೊಂಡ ರಾಜೇಶ್ ಸಹಾಯಕ್ಕಾಗಿ ಕಿರುಚಿಕೊಂಡು ಕೋಣೆಯಿಂದ ಹೊರಗೆ ಓಡಿಹೋಗಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ತಂದೆಯ ಕಿರುಚಾಟದ ಸದ್ದು ಕೇಳಿ ಎಚ್ಚರಗೊಂಡ ಅಪ್ರಾಪ್ತ ಮಗ ಸಂಬಂಧಿಕರಿಗೆ ಈ ಕುರಿತು ಮಾಹಿತಿ ನೀಡಿದ್ದಾನೆ. ಇದರ ಬಳಿಕ ಕುಟುಂಬವು ರಾಜೇಶ್ ನನ್ನು ಕತ್ತರಿಸಿದ ದೇಹದ ಭಾಗದೊಂದಿಗೆ ಆಸ್ಪತ್ರೆಗೆ ದಾಖಲಿಸಿದೆ.
Kolar News: ಬೇಸಗೆ ರಜೆಗೆಂದು ತಾತನ ಮನೆಗೆ ಬಂದಿದ್ದ ಇಬ್ಬರು ಸಹೋದರರು ಕೃಷಿ ಹೊಂಡಕ್ಕೆ ಬಿದ್ದು ಸಾವು
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ದ್ರೌಪತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಕ್ಕನ ಕತ್ತು ಸೀಳಿ ಕೊಂದ ತಮ್ಮ
ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಸಹೋದರನೊಬ್ಬ ಅಕ್ಕನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿದೆ. ಸುಮಾ ಶಿವಶಂಕರ್ ವನಹಳ್ಳಿ (29) ಮೃತರು. ಶಿಗ್ಗಾವಿ ಪಟ್ಟಣದ ಮೌಲಾಲಿ ಗುಡ್ಡದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸುಮಾಳನ್ನು ತಮ್ಮ ಸಂಜು ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಂದು ಹಾಕಿದ್ದಾನೆ. ಸುಮಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರಕರಣ ದಾಖಲಿಸಿರುವ ಶಿಗ್ಗಾವಿ ಪೊಲೀಸರು ಆರೋಪಿ ಸಂಜುನನ್ನು ವಶಕ್ಕೆ ಪಡೆದಿದ್ದಾರೆ.