ಕೃಷಿ ಮೇಳದಲ್ಲಿ ಮೃತಪಟ್ಟಿದ್ದ ಕಾರ್ಮಿಕನ ಕುಟುಂಬಕ್ಕೆ 5 ಲಕ್ಷ ಪರಿಹಾರ
Dharwad News: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಮೇಳದ ಹಿನ್ನೆಲೆಯಲ್ಲಿ ತಂದಿದ್ದ ಟ್ರ್ಯಾಕ್ಟರ್ ಅನ್ನು ಲಾರಿಯಿಂದ ಇಳಿಸುವಾಗ ಮೈಮೇಲೆ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ. ತುಮಕೂರು ಮೂಲದ ಪರಶುರಾಮ (58) ಮೃತವ್ಯಕ್ತಿ. ಘಟನೆಯ ಸುದ್ದಿ ತಿಳಿದು ಸಮತಾ ಸೇನೆ ಧಾರವಾಡ ಜಿಲ್ಲಾ ಘಟಕದಿಂದ ವ್ಯಕ್ತಿಯ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು.