Pravasi Prapancha: ಪೇಡಾ ನಗರಿಯ ಐಷಾರಾಮಿ ರೆಸಾರ್ಟ್ ರೈಸಿಂಗ್ ಬ್ಲಿಸ್ ರಿಟ್ರೀಟ್
Rising Bliss Retreat Resort: ಸುತ್ತಲೂ ಹೊಲಗಳು, ಹಿತವಾದ ವಾತಾವರಣ, ಆಗೊಮ್ಮೆ ಈಗೊಮ್ಮೆ ದನ-ಕುರಿ ಕಾಯುವ ಜನರು. ಸುತ್ತಲೂ ಸಾಹಿತ್ಯಿಕ ಅಲೆಗಳು ಸುತ್ತುತ್ತಲೇ ಇರುತ್ತವೆ. ಇವುಗಳ ಮಧ್ಯೆ ನಿಮ್ಮನ್ನು ಮಂತ್ರಮುಗ್ಧ ಮಾಡಬಲ್ಲ ರೆಸಾರ್ಟ್ ಇದ್ದರೆ ನಿಮ್ಮ ಪ್ರವಾಸ ಅರ್ಥಪೂರ್ಣವಾಗುತ್ತದೆ. ನಿಮಗೂ ಇಂತಹದ್ದೇ ಅನುಭೂತಿ ಧಾರವಾಡದಲ್ಲಿರುವ ಹೆಸರೇ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್‌ನಲ್ಲಿ ಸಿಗುತ್ತದೆ. ಇಲ್ಲಿದೆ ಈ ರೆಸಾರ್ಟ್‌ನ ವಿವರ.
ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್ ಮತ್ತು ದುಂಡಪ್ಪ ಗಾಣಿಗೇರ -
ಹುಬ್ಬಳ್ಳಿ-ಧಾರವಾಡ ಕಡೆ ಹೋದಾಗ ʻಇನ್ನೂ ಯಾಕಾ ಬರಲಿಲ್ಲ ಅವಾ ಹುಬ್ಬಳ್ಳಿಯಾವʼ ಎನ್ನುವ ದ.ರಾ. ಬೇಂದ್ರೆಯವರ ಹಾಡಿನ ಗುಂಗು ಮನಸಲ್ಲೇ ಶುರುವಾಗುತ್ತದೆ. ಬೇಂದ್ರೆ ಅಜ್ಜಾರ ಸಾಧನಕೇರಿಯಿಂದ ಕೇವಲ 5-6 ಕಿ.ಮೀ. ದೂರದಲ್ಲಿ ಅವರ ಆ ಹಾಡಿನ ಸೊಗಡನ್ನು ನಿಮಗೆ ಕಟ್ಟಿಕೊಡಬಲ್ಲ ಒಂದು ರೆಸಾರ್ಟ್ ಸೃಷ್ಟಿಯಾಗಿದೆ. ಸುತ್ತಲೂ ಹೊಲಗಳು, ಹಿತವಾದ ವಾತಾವರಣ, ಆಗೊಮ್ಮೆ ಈಗೊಮ್ಮೆ ದನ-ಕುರಿ ಕಾಯುವ ಜನರೂ ಸಿಗುತ್ತಾರೆ. ಅವರ ಮಾತಿನ ಧಾಟಿಯು ಘಾಟಿಯಾದರೂ ಆತ್ಮೀಯವಾಗಿರುತ್ತವೆ. ಸುತ್ತಲೂ ಸಾಹಿತ್ಯಿಕ ಅಲೆಗಳು ಸುತ್ತುತ್ತಲೇ ಇರುತ್ತವೆ. ಇವುಗಳ ಮಧ್ಯೆ ನಿಮ್ಮನ್ನು ಮಂತ್ರಮುಗ್ಧ ಮಾಡಬಲ್ಲ ರೆಸಾರ್ಟ್ ಹೆಸರೇ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್.
ಬೇಂದ್ರೆ ಅಜ್ಜರ ಸಾಧನಕೇರಿ, ಸವದತ್ತಿಯ ಎಲ್ಲಮ್ಮ ದೇವಿ, ಅಥವಾ ಹುಬ್ಬಳ್ಳಿಯ ಸಿದ್ಧಾರೂಡರ ದರ್ಶನಕ್ಕಾಗಿ ಬಂದರೂ ಈ ರೆಸಾರ್ಟ್ ನಿಮ್ಮ ಆಯ್ಕೆಯಾಗಿರಲಿ.

ಇದು ಲಾಡ್ಜ್ ಅಲ್ಲ ತಾರಾಲಯ!
ರೆಸಾರ್ಟ್ ಒಳಗೆ ಅತ್ಯಂತ ಸುಸಜ್ಜಿತ ಲಾಡ್ಜ್ ಕೂಡ ಇದೆ. ಬಹಳ ಹಿತಕರ ವಾತಾವರಣ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿರುವ ಈ ಲಾಡ್ಜ್ ಸಕಲ ಸೌಲಭ್ಯಗಳನ್ನೂ ಹೊಂದಿದೆ. ಬೇರೆಡೆಯಂತೆ ಇಲ್ಲಿ ಚೆಕ್ಇನ್, ಚೆಕ್ಔಟ್ನ ಕಿರಿಕಿರಿಗಳು ನಿಮಗಿರುವುದಿಲ್ಲ. ಸದಾ ಇಲ್ಲಿ ಸಿಬ್ಬಂದಿ ಇದ್ದೇ ಇರುತ್ತಾರೆ. ಎಲ್ಲ ಫಾರ್ಮಾಲಿಟಿಗಳನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿಕೊಡುತ್ತಾರೆ. ಮಧ್ಯಾಹ್ನ 12:00 ಗಂಟೆಗೆ ಚೆಕ್ ಇನ್ ಮತ್ತು ಬೆಳಗ್ಗೆ 10 ಗಂಟೆಗೆ ಚೆಕ್ ಔಟ್ ಸಮಯ. ಈ ಲಾಡ್ಜ್‌ನ ಹೊರನೋಟ ಮತ್ತು ವಿನ್ಯಾಸ ನಿಮ್ಮ ಗಮನ ಸೆಳೆಯುತ್ತದೆ. ಇನ್ನು ನೀವು ರೀಲ್ಸ್ ಪ್ರಿಯರಾದರಂತೂ ದಿನವೊಂದರಲ್ಲಿ ಹತ್ತಾರು ರೀಲ್ಗಳನ್ನು ಇಲ್ಲಿ ಮಾಡಿಯೇ ಮಾಡುತ್ತೀರಿ. ಏಕೆಂದರೆ ಈ ಲಾಡ್ಜ್ ಹಾಗಿದೆ. ಇದರ ಆಕಾರವನ್ನು ಸುಲಭವಾಗಿ ಹೇಳೋದಾದರೆ ಆರು ಮೂಲೆಗಳಿರುವ ನಕ್ಷತ್ರ ಎನ್ನಬಹುದು. ತಾರಾಲಯ ಅಂದರೂ ತಪ್ಪಿಲ್ಲ. ಕೋಣೆಗಳೂ ಕೂಡ ಅಷ್ಟೇ ಆಕರ್ಷಕವಾಗಿವೆ. ಇಲ್ಲಿ ಒಟ್ಟು 18 ರೂಮ್ಗಳಿದ್ದು, ಅವುಗಳಲ್ಲಿ 12ಹವಾ ನಿಯಂತ್ರಿತ ಮತ್ತು 6 ಸಾಮಾನ್ಯ ರೂಮ್ಗಳು. 2026ರ ಜನವರಿಯಲ್ಲೇ ಇಲ್ಲಿ ವೈದ್ಯರ ಸಮೇತ ಎರಡು ಆಯುರ್ವೇದ ಸ್ಪಾ ಮಸಾಜ್ ಸೆಂಟರ್ಗಳೂ ಆರಂಭವಾಗಲಿವೆ. ಇಲ್ಲಿ ನಿಮಗೆ ಇಷ್ಟವಾದ ರೂಮ್ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಎಲ್ಲ ರೂಮ್ಗಳನ್ನು ಆಗಿಂದಾಗಲೇ ಶುಚಿಗೊಳಿಸಲಾಗುವುದರಿಂದ ಯಾವುದೇ ರೂಮ್ ಅನ್ನು ನೀವಿಲ್ಲಿ ಆಯ್ದುಕೊಳ್ಳಬಹುದು. ಪ್ರತೀ ರೂಮ್ನಲ್ಲೂ ಲ್ಯಾಂಡ್‌ಲೈನ್ ವ್ಯವಸ್ಥೆ ಇದ್ದು, ಊಟ ಮತ್ತಿತರ ಸೌಲಭ್ಯಗಳನ್ನು ಆರ್ಡರ್ ಮಾಡಬಹುದು. ಕ್ಷಣಮಾತ್ರದಲ್ಲಿ ಸಿಬ್ಬಂದಿ ಹಾಜರಾಗುತ್ತಾರೆ. ವೆಸ್ಟ್ರನ್ ಶೌಚಾಲಯ ಹಾಗೂ ಎಲ್ಲ ಅಗತ್ಯದ ಮೂಲಭೂತ ಸೌಕರ್ಯಗಳೊಂದಿಗೆ ಬಾಲ್ಕನಿ ಇದೆ.
ಕುಂದಾಪುರ ಎಜುಕೇಷನ್ ಸೊಸೈಟಿಗೆ ಬಂಗಾರದ ಸಿಂಗಾರ
ಕಣ್ಣ ಮುಂದೇ ಕಾರ್ ಪಾರ್ಕಿಂಗ್
ರೆಸಾರ್ಟ್‌ನಲ್ಲಿ ಉಳಿಯಲು ನೀವು ನಿಮ್ಮ ಸ್ವಂತ ವಾಹನದಲ್ಲಿಯೇ ಬಂದರೆ ಇಲ್ಲಿ ವಿಶಾಲ ಮತ್ತು ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇದೆ. ಪಾರ್ಕಿಂಗ್ ಮುಂದೆಯೇ ಒಂದು ಸುಂದರ ಲಾನ್ ನಂತರ ಲಾಡ್ಜ್ ಇದೆ. ನಿಮ್ಮ ಕಾರ್ ಅಥವಾ ಯಾವುದೇ ವಾಹನ ನಿಮ್ಮ ಕಣ್ಣ ಮುಂದೆಯೇ ಇರುತ್ತದೆ. ಅದರ ಕಣ್ಗಾವಲಿಗೆ ಇಲ್ಲಿ ಸಿಬ್ಬಂದಿಯೂ ಇದ್ದಾರೆ.

ಸಸ್ಯಾಹಾರಿಗೂ ಮಾಂಸಾಹಾರಿಗೂ ಬೇರೆ ಬೇರೆ ರೆಸ್ಟೋರೆಂಟ್
ಈ ರೆಸಾರ್ಟ್‌ನ ಮತ್ತೊಂದು ವಿಶೇಷವೆಂದರೆ ಇಲ್ಲಿರುವ ರೆಸ್ಟೋರೆಂಟ್. ಇಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಗಳೆರಡೂ ದೊರೆಯುತ್ತವೆ. ಆದರೆ, ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬೇರೆ ಬೇರೆ ಅಡುಗೆ ಮನೆಯಲ್ಲಿ ತಯಾರಾಗುತ್ತವೆ. ಇಲ್ಲಿನ ಮೆನು ನೋಡಿದರಂತೂ ಕಳೆದುಹೋಗುತ್ತೀರಿ. ಜತೆಗೆ ವೈವಿಧ್ಯಮಯ ಪಾನೀಯಗಳು, ಮಿಲ್ಕ್ಶೇಕ್ಗಳು, ಜ್ಯೂಸ್ಗಳು, ಡೆಸರ್ಟ್ಗಳು, ಚೈನೀಸ್ ನಾನ್ವೆಜ್, ಸೌತ್ ಸ್ಪೆಷಲ್ ನಾನ್ವೆಜ್ ಮೊದಲಾದವನ್ನು ಆಗಿಂದಾಗಲೇ ಮಾಡಿ ಬಡಿಸಲಾಗುತ್ತದೆ. ಸುಂದರ ಡೈನಿಗ್ ಹಾಲ್ ಇದೆ, ರೂಮ್ ಸರ್ವಿಸ್ ಸಹ ನೀಡುತ್ತಾರೆ. ಇರುವಲ್ಲಿಗೆ ಆರ್ಡರ್ಮಾಡಿ ತರಿಸಿಕೊಳ್ಳಬಹುದು. ಒಮ್ಮೆ ಇಲ್ಲಿನ ಅಡುಗೆ ಸವಿದು ನೋಡಿದರೆ, ಮತ್ತೆ ಮತ್ತೆ ತಿನ್ನುವಂತೆ ಮನ ಹಠಮಾಡುತ್ತದೆ. ಮುಗುಳ್ನಗುತ್ತ ಕುಶಲೋಪರಿ ಮಾತನಾಡಿಸುತ್ತಾ ಇಲ್ಲಿನ ಸಿಬ್ಬಂದಿ ಆಹಾರ ಬಡಿಸುತ್ತಿರುವಾಗ ಸ್ನೇಹಿತರೊಟ್ಟಿಗೆ ಕಳೆದ ಹಿಂದಿನ ದಿನಗಳ ನೆನಪಾಗಲೂಬಹುದು.
ಬಳಕೆಯಲ್ಲಿರುವುದು ಶುದ್ಧ ಗಾಣದ ಎಣ್ಣೆ
ಈ ರೆಸಾರ್ಟ್‌ನಲ್ಲಿ ಅಡುಗೆಗೆ ಬಳಸಲಾಗುವ ಎಣ್ಣೆಗೂ ಒಂದು ವಿಶೇಷವಿದೆ. ಇದನ್ನು 100 ಪರ್ಸೆಂಟ್ ಶುದ್ಧ ಎನ್ನಬಹುದು. ಏಕೆಂದರೆ ಈ ಎಣ್ಣೆಯನ್ನು ಇದೇ ರೆಸಾರ್ಟ್ನಲ್ಲಿ ತಯಾರಿಸಲಾಗುತ್ತದೆ. ಸ್ಥಳೀಯ ರೈತರಿಂದಲೇ ನೇರವಾಗಿ ಕುಶುಬೆ, ಶೇಂಗಾ ಇನ್ನಿತರ ಎಣ್ಣೆಕಾಳುಗಳನ್ನು ಖರಿದಿಸಿ, ಇಲ್ಲಿನ ಶ್ರೀ ಸಿದ್ದೇಶ್ವರ ಎಣ್ಣೆ ಘಟಕದಲ್ಲಿ ಎಣ್ಣೆ ತಯಾರಿಸಲಾಗುತ್ತದೆ. ಈ ಎಣ್ಣೆಗೂ ಸುತ್ತಮತ್ತ ಸಾಕಷ್ಟು ಬೇಡಿಕೆ ಇದ್ದು, ಉತ್ತಮ ಪ್ಯಾಕಿಂಗ್‌ನೊಂದಿಗೆ ಬಾಟಲಿಗಳಲ್ಲಿ ನೀಡಲಾಗುತ್ತದೆ. ಈ ಎಣ್ಣೆಯ ತಯಾರಿಯನ್ನು ಅಲ್ಲಿ ನೇರವಾಗಿಯೇ ಕಂಡು ಖರೀದಿಸಬಹುದು. ನೇರವಾಗಿ ರೈತರಿಂದಲೇ ಎಣ್ಣೆಕಾಳುಗಳನ್ನು ಖರೀದಿಸುವುದರಿಂದ ರೈತರಿಗೂ ಲಾಭ, ಅದರಿಂದ ತಯಾರಾಗುವ ಎಣ್ಣೆ ಊಟ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೂ ಲಾಭ.

ಉತ್ತರ ಕರ್ನಾಟಕದಲ್ಲೇ ಇದು ವಿಶಾಲ ಈಜುಕೊಳ
ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ನೀವು ಅಡ್ಡಾಡುತ್ತಿದ್ದು, ವಿಶಾಲ ಈಜುಕೊಳದಲ್ಲಿ ಮಿಂದೇಳುವ ಆಸೆ ನಿಮಗಿದ್ದರೂ ಈ ರೈಸಿಂಗ್ ಬ್ಲಿಸ್ ರೆಟ್ರೀಟ್ ರೆಸಾರ್ಟ್ ನಿಮ್ಮ ಪಟ್ಟಿಯ ಅಗ್ರ ಸ್ಥಾನದಲ್ಲಿರಲಿ. ಏಕೆಂದರೆ ಈ ರೆಸಾರ್ಟ್‌ನಲ್ಲೇ ಉತ್ತರ ಕರ್ನಾಟಕದ ರೆಸಾರ್ಟ್‌ಗಳ ಪರಿಧಿಯಲ್ಲಿನ ಅತಿದೊಡ್ಡ ಈಜುಕೊಳವಿದೆ. ನೀರನ್ನೂ ಪುನಃಪುನಃ ಬದಲಿಸುವ ಕಾರ್ಯಗಳು ಆಗುತ್ತಲೇ ಇರುತ್ತವೆ. ಬೇರೆಡೆಯಂತೆ ಇಲ್ಲಿ ನೀರನ್ನು ನೀಲಿಯಾಗಿಸಲು ರಾಸಾಯನಿಕಗಳನ್ನು ಬಳಸುವುದಿಲ್ಲ. ಈ ಈಜುಕೊಳದಲ್ಲಿ ಮಕ್ಕಳು ವಯಸ್ಕರು ಬಳಸಲು ಸುರಕ್ಷತೆ ಕ್ರಮಗಳನ್ನು ಯೋಜಿಸಿಯೇ ರೂಪಿಸಲಾಗಿದೆ. ಜತೆಗೆ ಸಿಬ್ಬಂದಿಯೂ ಇರುತ್ತಾರೆ.

ವಾಟರ್ ಪಾರ್ಕ್ ಶೀಘ್ರದಲ್ಲೇ
ಇದರ ಪಕ್ಕದಲ್ಲೇ ನೀರಿನ ಜತೆಗೆ ವಿವಿಧ ಚಟುವಟಿಕೆಗಳನ್ನು ಆರಂಭಿಸಲು ವಾಟರ್ ಪಾರ್ಕ್ ನಿರ್ಮಾಣಕ್ಕೂ ಯೋಜನೆ ಸಿದ್ಧವಾಗಿದೆ. ನಿರ್ಮಾಣ ಕಾರ್ಯಗಳೂ ಆರಂಭಿಕ ಹಂತದಲ್ಲಿವೆ. 2026ರ ವರ್ಷಾರಂಭದೊಂದಿಗೆ ಈ ಕಾರ್ಯಗಳ ಆರಂಭವೂ ಆಗಲಿವೆ ಎನ್ನುತ್ತಾರೆ ರೆಸಾರ್ಟ್ ಮಾಲಿಕರಾದ ದುಂಡಪ್ಪ. ಬಿ. ಗಾಣಿಗೇರ.
ಬೇಕೆಂದರೆ ಬಾರೊಂದಿದೆ
ಅಡ್ಡಾಡಲು ಬಂದಾಗ ಅಥವಾ ಊರಿಂದ ದೂರ ಬಂದಾಗ ಖುಷಿಗಾಗಿ ಮದ್ಯಬೇಕು ಎನ್ನುವ ಹಲವರಿದ್ದಾರೆ. ಅವರಿಗಾಗಿಯೂ ಈ ರೆಸಾರ್ಟ್ ಒಂದು ಉತ್ತಮ ಆಯ್ಕೆ. ಈ ರೆಸಾರ್ಟ್ನ ಮುಂಭಾಗದ ಎಡಮಗ್ಗುಲಿನಲ್ಲಿ ಒಂದು ಬಾರ್ ಇದೆ. ಮದ್ಯದ ಜತೆ ರಾತ್ರಿಯ ಹೊತ್ತಿಗೆ ವಿದ್ಯುತ್ ದೀಪಾಲಂಕಾರಗಳಿಂದ ಕೂಡಿದ ರೆಸಾರ್ಟ್‌ನ ನೋಟ ನಿಮ್ಮ ಸಂಗಾತಿಯಾಗುತ್ತದೆ.

ಪಿಕ್ ಅಪ್ ಮತ್ತು ಡ್ರಾಪ್
ಈ ರೆಸಾರ್ಟ್‌ನಲ್ಲಿ ಪಿಕ್ಅಪ್ ಮತ್ತು ಡ್ರಾಪ್ ವ್ಯವಸ್ಥೆ ಇದೆ. ಇದಕ್ಕಾಗಿ ರೆಸಾರ್ಟ್ ಬಳಿಯೇ ಸದಾ ಮೂರು ಕಾರ್‌ಗಳು ಸಿದ್ಧವಾಗಿರುತ್ತವೆ. ನೀವು ಸವದತ್ತಿ, ಹುಬ್ಬಳ್ಳಿ, ಧಾರವಾಡ ಅಥವಾ ಸಾಧನಕೇರಿ ಹೀಗೆ ಎಲ್ಲಿ ಉಳಿದಿದ್ದರೂ ಒಂದು ಕರೆ ಮಾಡಿದರೆ ರೆಸಾರ್ಟ್‌ಗೆ ಕರೆದೊಯ್ಯಲು ವಾಹನ ನೀವಿರುವ ಬಳಿಗೇ ಬರುತ್ತದೆ. ಸ್ಥಳ ಹುಡುಕುವುದು, ಸಾರಿಗೆ ಸಂಪರ್ಕ ಹುಡುಕುವುದು ಯಾವ ಗೋಜುಗಳೂ ಇರುವುದಿಲ್ಲ. ವಾಹನ ಚಾಲಕರೂ ನಿಮ್ಮನ್ನು ನಿಮಿಷಗಳ ಮಾತ್ರದಲ್ಲಿಯೇ ತಲುಪುತ್ತಾರೆ.
Golden Chariot: ಚಕ್ರಗಳ ಮೇಲೆ ರಾಜ್ಯದ ಸಾಮ್ರಾಜ್ಯಗಳು; 6 ದಿನ ಹೋಗಿ ಅರಸರಾಗಿ ಬನ್ನಿ
ನಿಜಾರ್ಥದಲ್ಲಿ ಕನಸುಗಾರ
ದುಂಡಪ್ಪ ಬಸಪ್ಪ ಗಾಣಿಗೇರ. ನಿಜಾರ್ಥದಲ್ಲಿ ಕನಸುಗಾರ ಮತ್ತು ಶ್ರಮಜೀವಿ ಹಾಗೂ ಸಾಧಕ. ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರಿನವರು. ಹತ್ತನೆಯ ತರಗತಿ ಓದಿರುವ ಇವರಿಗೆ ಹೆತ್ತವರ ಸಾವು, ಬಡತನದ ಅನಿವಾರ್ಯದ ನೋವುಗಳು ಮುಂದಿನ ಓದಿಗೆ ಅವಕಾಶ ನೀಡಲಿಲ್ಲ. ಜೀವನೋಪಾಯಕ್ಕಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಅಂಗಳ ಸೇರಲೇಬೇಕಾದ ಪರಿಸ್ಥಿತಿ ಅವರಿಗಿತ್ತು. ಅಂದಿನವರೆಗೆ ಅಪರಿಚಿತವಾಗಿದ್ದ ಬೆಂಗಳೂರಿಗೆ ಬಂದು ಸಾಕಷ್ಟು ಕಡೆಗಳಲ್ಲಿ ಕ್ಯಾಬ್ ಡ್ರೈವರ್ ಆಗಿಯೂ ದುಂಡಪ್ಪ ಅವರು ಹಗಲಿರುಳು ದುಡಿದಿದ್ದಾರೆ. ವರ್ಷಗಳ ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇಳಿದು ಅಲ್ಲಿ ಸಾಕಷ್ಟು ಅನುಭವ ಗಳಿಸಿದರು. ಈ ಸಮಯದಲ್ಲಿ ಸಾಕಷ್ಟು ನಿವೇಶನಗಳನ್ನು ಇವರೇ ಓಡಾಡಿ ಖುದ್ದಾಗಿ ಕೊಂಡಿದ್ದಾರೆ. ಹಲವು ನಿವೇಶನಗಳನ್ನು ಕೊಡಿಸಿ ಅದರಿಂದ ಬಂದ ಆದಾಯವನ್ನು ತಮ್ಮ ಕನಸಿನ ಕೂಸಾದ ಈ ರೆಸಾರ್ಟ್‌ಗಾಗಿ ಒಟ್ಟುಮಾಡಿದ್ದಾರೆ. ಇಷ್ಟು ವರ್ಷಗಳ ಅನುಭವ, ಆದಾಯಗಳನ್ನು ಒಟ್ಟುಮಾಡಿಕೊಂಡು ಹಲವು ವರ್ಷಗಳು ಹುಡುಕಾಡಿ ರೆಸಾರ್ಟ್ ಖರೀದಿಸಿದ್ದಾರೆ. ಆಗ ಆರಂಭವಾದದ್ದೇ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್. ಎರಡುಮೂರು ದಶಕಗಳ ಸ್ನೇಹಿತರ ಜತೆಗೆ ರೆಸಾರ್ಟ್ ಆರಂಭಿಸಿದ ಇವರು ಅಂದಿನಿಂದ ಇಂದಿನವರೆಗೂ ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರತಿ ಅತಿಥಿಯನ್ನೂ ಇವರು ಮಾತನಾಡಿಸುತ್ತಾರೆ. ಅವರ ಬೇಕು-ಬೇಡ, ಅನಿಸಿಕೆಗಳು, ಸಲಹೆಗಳನ್ನು ಆಲಿಸಿ ಮತ್ತೆ ಮತ್ತೆ ನವೀನತೆಯನ್ನು ಈ ರೆಸಾರ್ಟ್‌ಗೆ ನೀಡಿದ್ದಾರೆ.
ಸದಾ ಹಸನ್ಮುಖಿಯಾಗಿರುವ ದುಂಡಪ್ಪನವರು ಇಡೀ ರೆಸಾರ್ಟ್‌ನಲ್ಲಿ ನಡೆಯುವ, ನಡೆಯಬೇಕಾದ ಕೆಲಸಗಳ ಉಸ್ತುವಾರಿ ವಹಿಸಿ ಓಡಾಡುತ್ತಲೇ ಇರುತ್ತಾರೆ. ಪ್ರತಿ ಅತಿಥಿಗೂ ಇವರು ಆಪ್ತತೆಯಿಂದ ಉಪಚರಿಸುತ್ತಾರೆ . ಅಚ್ಚ ಹುಬ್ಬಳ್ಳಿ ಸೊಗಡಿನ ಮಾತು, ಹಸನ್ಮುಖಿಯಾಗಿ ಕುಶಲೋಪರಿ ವಿಚಾರಿಸುವ ಸ್ನೇಹಜೀವಿ ದುಂಡಪ್ಪನವರು. ಸಿಬ್ಬಂದಿಯನ್ನು ಬಾಂಧವರಂತೆ ನೋಡಿಕೊಳ್ಳುತ್ತಾರೆ ಎಂಬುದು ಈ ರೆಸಾರ್ಟ್‌ಗೆ ಭೇಟಿ ನೀಡಿದ ಹಲವು ಅತಿಥಿಗಳ ಮಾತು. ತಮ್ಮ ರೆಸಾರ್ಟ್‌ಗೆ ಭೇಟಿ ನೀಡುವ ಪ್ರತಿಯೊಬ್ಬರಿಂದಲೂ ಇಲ್ಲಿನ ಸಲಹೆ ಸ್ವೀಕರಿಸಿ ಸಣ್ಣಪುಟ್ಟ ಅಗತ್ಯಗಳನ್ನೂ ಪೂರೈಸುತ್ತಾರೆ. ಧಾರವಾಡದಿಂದ ದೂರದೂರದವರೆಗೆ ಈ ಥರದ ರೆಸಾರ್ಟ್‌ಗಳು ಇರಲಿಲ್ಲ. ಇದರ ಅಗತ್ಯವಿತ್ತು. ಆದ್ದರಿಂದ ಈ ಸುಸಜ್ಜಿತ ರೆಸಾರ್ಟ್ ಮಾಡಿದ್ದೇನೆ. ಇಲ್ಲಿಗೆ ಬರುವ ಅತಿಥಿಗಳು ಆನಂದದಿಂದ ಸಮಯ ಕಳೆದು, ಸುತ್ತಲಿನ ಪ್ರವಾಸಿ ತಾಣಗಳನ್ನು ಕಂಡು ಸಂತಸದಿಂದ ಹಾರೈಸುವಂತಾಗಬೇಕು ಎನ್ನುವ ಆಶಯ ಅವರದು.
ಧಾರವಾಡದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಮಲ್ಲಿಗವಾಡಕ್ಕೊಂದು ಮೆರುಗು ಬಂದಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಧಾರವಾಡದ ಹೊರವಲಯದಲ್ಲಿ ರಂಗು ಮೂಡಿದೆ. ಅದಕ್ಕೆ ಕಾರಣ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್! ಹೊಸರೂಪದಲ್ಲಿ ಹೊಸ ಮಾಲೀಕತ್ವದಲ್ಲಿ ಹೊಸ ನಿರ್ವಹಣೆಯಲ್ಲಿ ನವೀಕರಣಕೊಂಡು ಅತಿಥಿಗಳನ್ನು ಎದುರುಗೊಳ್ಳಲು ಸಜ್ಜಾಗಿರುವ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್ ಕೇವಲ ಒಂದೇ ತಿಂಗಳಲ್ಲಿ ರಾಜ್ಯದೆಲ್ಲೆಡೆ ತನ್ನ ಹೆಸರನ್ನು ಪಸರಿಸುತ್ತಿದೆ. ಧಾರವಾಡಕ್ಕೆ ಅತ್ಯಗತ್ಯವಿದ್ದ ಐಷಾರಾಮಿ ರೆಸಾರ್ಟ್ ನ ಕೊರತೆಯನ್ನು ಈ ರೆಸಾರ್ಟ್ ಪೂರೈಸುತ್ತಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಅತ್ಯಾಕರ್ಷಕ ವಿನ್ಯಾಸ, ಕ್ಯಾಂಪಸ್, ಉತ್ಕೃಷ್ಟ ಸೌಲಭ್ಯಗಳು ಮತ್ತು ಆಹಾರ ಇವೆಲ್ಲವುಗಳ ಜತೆಗೆ ಸಿಬ್ಬಂದಿಗಳ ಹಾಗೂ ಮಾಲೀಕರ ಆದರದ ಆತಿಥ್ಯದಿಂದಾಗ ಧಾರವಾಡದ ಮನೆಮಾತಾಗುತ್ತಿದೆ ಈ ನವೀಕೃತ ರೆಸಾರ್ಟ್. ಧಾರವಾಡ ಅಥವಾ ಸುತ್ತಲಿನ ಯಾವ ಊರುಗಳಲ್ಲಿ ಇಳಿದರೂ ಒಂದು ಕರೆಯಲ್ಲಿ ಈ ರೆಸಾರ್ಟ್ ಸಿಬ್ಬಂದಿ ಅತಿಥಿಗಳ ಬಳಿ ತಲುಪುತ್ತಾರೆ. ಅಷ್ಟು ಅತ್ಯುತ್ತಮ ಕಸ್ಟಮರ್ ಕೇರ್ ಹೊಂದಿರುವ ಈ ರೆಸಾರ್ಟ್ ಇನ್ನಷ್ಟು ಜನಪ್ರಿಯವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಆತ್ಮೀಯ ಸ್ವಾಗತ, ಆತ್ಮೀಯ ವಾಸ್ತವ್ಯ, ನಗುಮೊಗದ ಸಿಬ್ಬಂದಿ ಸೇವೆ, ಶುಚಿರುಚಿ ಆಹಾರ ಸಿಗುತ್ತದೆ ಎಂಬ ಅತಿಥಿಗಳ ಅನುಭವದ ಮಾತುಗಳೇ ಈ ರೆಸಾರ್ಟ್ ಬಗ್ಗೆ ಗಟ್ಟಿ ನಂಬಿಕೆ ಮೂಡಿಸಿದೆ. ಇದಕ್ಕೆ ಪೂರಕವಾಗಿ ಎಂಬಂತೆ ಅಲ್ಲಿ ಹಲವು ಅದ್ದೂರಿ ಬರ್ತ್ ಡೇ, ವೆಡ್ಡಿಂಗ್, ಕಾರ್ಪೋರೇಟ್ ಈವೆಂಟ್‌ಗಳೂ ನಡೆಯುತ್ತಿವೆ. ಇದೀಗ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್ ಒಂದು ಅಪರೂಪದ ವರ್ಷದ ಸಂಭ್ರಮಕ್ಕೆ ಸಡಗರದಿಂದ ಸಜ್ಜುಗೊಂಡಿದೆ. ವಿಭಿನ್ನವಾಗಿ ಮತ್ತು ಅದ್ದೂರಿಯಾಗಿ ಹೊಸವರ್ಷವನ್ನು ಸ್ವಾಗತಿಸಲು ತಯಾರಾಗಿರುವ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್ ನತ್ತ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ.

ಹೊಸಕಳೆ ನೀಡುತ್ತಿದೆ ಹೊಸವರ್ಷಾಚರಣೆ
2026ರ ವರ್ಷದ ಆರಂಭದೊಂದಿಗೆ ರೈಸಿಂಗ್ ಬ್ಲಿಸ್ ರಿಟ್ರೀಟ್ ರೆಸಾರ್ಟ್ ಕಾರ್ಯ ಆರಂಭಿಸಿ ಒಂದು ತಿಂಗಳು ತುಂಬುತ್ತಿದೆ. ಬರ್ತ್ ಡೇ, ವೆಡ್ಡಿಂಗ್ ಶೂಟ್, ಸಭಾ ಕಾರ್ಯಕ್ರಮ, ಮೊದಲಾದ ಈವೆಂಟ್‌ಗಳಿಗಾಗಿ ಈಗಾಗಲೇ ಜನರು ಇಲ್ಲಿಗೆ ಬರುತ್ತಿದ್ದಾರೆ. ಆದರೆ, ಈ ಬಾರಿಯ ಹೊಸವರ್ಷದ ಭಾಗವಾಗಿ ರೆಸಾರ್ಟ್ ಒಂದು ದೊಡ್ಡ ಈವೆಂಟ್ ಆಯೋಜಿಸಿದ್ದು, ರೆಸಾರ್ಟ್ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಕಣ್ಣಿಗೆ ಬೀಳುವ ಹುಲ್ಲು ಹಾಸಿನ ಲಾನ್‌ನಲ್ಲಿ ʻಡಿಜೆ ನೈಟ್ʼ ಕಾರ್ಯಕ್ರಮವನ್ನು ಡಿ.31ರಂದು ಹಮ್ಮಿಕೊಳ್ಳಲಾಗಿದೆ. ರಾತ್ರಿ 6 ಗಂಟೆಯಿಂದ ʻಡಿಜೆ ನೈಟ್ʼ ಕಾರ್ಯಕ್ರಮ ಶುರುವಾಗಲಿದ್ದು, ಕುಟುಂಬ ಸಮೇತರಾಗಿ ಬಂದರೂ ಕಪಲ್‌ಗಳು ಬಂದರೂ ಈ ಕಾರ್ಯಕ್ರಮಕ್ಕೆ ಎಲ್ಲರೂ ಉಚಿತ ಎಂಟ್ರಿ ಪಡೆಯಬಹುದು. ಉಳಿದಂತೆ ವಿಐಪಿ ಕಪಲ್, ಸ್ಟ್ಯಾಗ್, ಸ್ಪೆಷಲ್ ಅಟ್ರ್ಯಾಕ್ಷನ್ಸ್ ಹೀಗೆ ವಿವಿಧ ಆಯ್ಕೆಗಳ ಪ್ಯಾಕೇಜ್‌ಗಳೂ ಇವೆ. ಇವುಗಳ ಜತೆಗೆ ಬೇಕಾದ ಸೇವೆ, ಸೌಲಭ್ಯಗಳು ಲಭ್ಯವಿವೆ. ಗ್ರಾಹಕರನ್ನು ಅತಿಥಿ ದೇವೋಭವ ಎಂಬಂತೆ ಉಪಚರಿಸುವ ಈ ರೆಸಾರ್ಟ್ ಎಲ್ಲ ಬೇಡಿಕೆಗಳನ್ನೂ ಈಡೇರಿಸಿಕೊಡುತ್ತಿದೆ. ಹೊಸವರ್ಷದ ಹರ್ಷ ಈ ಮೂಲಕ ಹೆಚ್ಚಲಿ ಎಂಬ ಕಾರಣಕ್ಕೆ ವಿಶೇಷ ರಿಯಾಯಿತಿ ದರದಲ್ಲಿ ಪ್ಯಾಕೇಜ್‌ಗಳನ್ನು ಸಿದ್ಧಪಡಿಸಲಾಗಿದ್ದು, ಅತಿಥಿಗಳ ಪಾಲಿಗೆ ಬಜೆಟ್ ಸ್ನೇಹಿಯೂ ಆಗಿವೆ. ಡಿಜೆ ನೈಟ್ ಜತೆಗೆ ಕುಣಿತ- ಹಿತಮಿತವಾದ ಕುಡಿತ, ಸ್ವಿಮ್ಮಿಂಗ್ ಪೂಲ್, ವೈವಿಧ್ಯ ಊಟೋಪಚಾರ ಎಲ್ಲವನ್ನೂ ಅನುಭವಿಸಿ ಬರಲು ಇದು ಅತ್ಯುತ್ತಮ ಆತಿಥ್ಯತಾಣ. ಕುಟುಂಬ ಸಮೇತ ಹೋಗುವುದಾದರೂ, ಕಪಲ್ ಗಳು ಹೋಗುವುದಾದರೂ, ಗೆಳೆಯರ ಬಳಗದೊಂದಿಗೆ ಹೋಗುವುದಾದರೂ ಇದು ಪ್ರಶಸ್ತ ಜಾಗ ಎಂಬುದರಲ್ಲಿ ಅನುಮಾನವೇ ಇಲ್ಲ. ಇದೊಂದು ಸುಂದರ ಅವಕಾಶ. ಧಾರವಾಡದಂಥ ಸಾಂಸ್ಕೃತಿಕ ಹಾಗೂ ಸಾಹಿತ್ಯನಗರಿಯ ಬಳಿ ಇರುವ ಈ ರೆಸಾರ್ಟ್ ಪ್ರವಾಸಿಗರ ಪಾಲಿಗೆ ಹೊಸ ಅನುಭವ ನೀಡುವುದು ಖಚಿತ. ಒಮ್ಮೆ ಭೇಟಿಕೊಟ್ಟರೆ ಈ ರೆಸಾರ್ಟ್ ಖಂಡಿತ ಮತ್ತೊಮ್ಮೆ ಕರೆಸಿಕೊಳ್ಳುತ್ತದೆ.
ಸಂಪರ್ಕ:
ವೆಬ್: www. Rising bliss retreat resort .com
ಸಂಪರ್ಕ ಸಂಖ್ಯೆ : 8951578555
ರೆಸಾರ್ಟ್ ಮ್ಯಾನೇಜರ್, ಮಾಬರೀರ್ : 8310334608 / 7996346815
ಮಾಲೀಕರು : ಶ್ರೀ ದುಂಡಪ್ಪ. ಬಿ. ಗಾಣಿಗರ್ / 8660258860
![]()
ಸವದತ್ತಿಯ ಆಸುಪಾಸಿನಲ್ಲಿ ಪ್ರವಾಸಿಗರಿಗೆ ಮೆಚ್ಚುಗೆಯಾಗುವಂಥ ರೆಸಾರ್ಟ್‌ಗಳಿರಲಿಲ್ಲ. ಆಕಾರಣಕ್ಕೆ ಇಲ್ಲಿನವರು 60 ಕಿ.ಮೀ. ಪ್ರಯಾಣ ಮಾಡಿ, ದಾಂಡೇಲಿಗೆ ಹೋಗುವ ಅನಿವಾರ್ಯತೆ ಇತ್ತು. ಆದರೆ ರೆಸಾರ್ಟ್ ಅನುಭವಕ್ಕಾಗಿ ಇಲ್ಲಿನ ಅನೇಕರು ಅಷ್ಟು ದೂರ ಪ್ರಯಾಣಿಸುವುದಕ್ಕೂ ಸಿದ್ಧರಿದ್ದರು. ಆದರೆ ನಮ್ಮೂರಿನಲ್ಲೇ ಇಂಥ ರೆಸಾರ್ಟ್ ಸಿದ್ಧಪಡಿಸಿದರೆ ಈ ಸಮಸ್ಯೆಯಿಂದ ಮುಕ್ತಿಹೊಂದಬಹುದು ಎನಿಸಿತು. ಇದರಿಂದ ಸವದತ್ತಿ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹತ್ತಿರದ ಅನೇಕ ನಗರಗಳ ಜನರಿಗೂ ಸಹಕಾರಿಯಾಗಲಿದೆ ಎಂದೆನಿಸಿ ಈ ರೆಸಾರ್ಟ್ ಹುಟ್ಟುಹಾಕಿದೆ. ಇದು ಫ್ಯಾಮಿಲಿ, ಫ್ರೆಂಡ್ಸ್‌ಗಷ್ಟೇ ಸೀಮಿತವಾದ ರೆಸಾರ್ಟ್ ಅಲ್ಲ, ಯಾರೇ ಬಂದರೂ ಗುಣಮಟ್ಟದ ಆತಿಥ್ಯ ನೀಡುವ ಮೂಲಕ ಹೊಸ ಅನುಭವಗಳನ್ನು ನೀಡುವ ಬೆಸ್ಟ್ ರೆಸಾರ್ಟ್.
-ದುಂಡಪ್ಪ ಬಸಪ್ಪ ಗಾಣಿಗೇರ, ಮಾಲೀಕರು
![]()
ಎರಡು ಎಕರೆ ಪ್ರದೇಶದಲ್ಲಿ 18 ರೂಮ್‌ಗಳಿವೆ ವಿಶಾಲವಾದ ರೆಸಾರ್ಟ್ ಇದು. ಅವುಗಳಲ್ಲಿ 12 ಎಸಿ, 6 ನಾನ್ ಎಸಿ ರೂಮ್‌ಗಳಿವೆ. ಆನ್ ಲೈನ್ ಅಷ್ಟೇ ಅಲ್ಲದೆ ಆಫ್ ಲೈನ್ ಮೂಲಕವೂ ಬುಕಿಂಗ್ ಮಾಡಿಕೊಳ್ಳುವ ಸೌಲಭ್ಯವಿರುವುದರಿಂದ ವಿಸಿಟರ್ಸ್ ಫ್ರೆಂಡ್ಲೀ ಎನಿಸಿಕೊಂಡಿದೆ. ಇನ್ನು ಮುಂಚಿತವಾಗಿ ಬುಕಿಂಗ್ ಮಾಡಿಕೊಂಡಿದ್ದರೆ ಪಿಕ್ ಅಪ್ ಹಾಗೂ ಡ್ರಾಪ್ ಸೌಲಭ್ಯವನ್ನೂ ರೆಸಾರ್ಟ್ ಕಡೆಯಿಂದಲೇ ಮಾಡುವುದರಿಂದ ಪ್ರಯಾಣದ ಬಗೆಗೂ ಚಿಂತಿಸಬೇಕಿಲ್ಲ. ಅಲ್ಲದೆ ಹುಬ್ಬಳ್ಳಿ, ಧಾರವಾಡದಲ್ಲೇ ಅತಿದೊಡ್ಡ ಸ್ವಿಮ್ಮಿಂಗ್ ಪೂಲ್ ಇರುವುದು ನಮ್ಮ ರೆಸಾರ್ಟ್ನಲ್ಲಿ. ಸಧ್ಯದಲ್ಲೇ ವಿಶೇಷವಾದ ವಾಟರ್ ಪಾರ್ಕ್ ತಯಾರಿಯ ಹಂತದಲ್ಲಿದ್ದು, ಸಕಲ ಸೌಕರ್ಯಗಳನ್ನೂ ಗ್ರಾಹಕರಿಗಾಗಿ ಸಿದ್ಧಗೊಳಿಸಲಾಗಿದೆ.
-ಮಹಾವೀರ್ ಸಂಕೇಶ್ವರ, ಮ್ಯಾನೇಜರ್
![]()
ದುಂಡಪ್ಪ ಬಸಪ್ಪ ಗಾಣಿಗೇರ ಅವರು ರಿಯಲ್ ಎಸ್ಟೇಟ್ ಉದ್ಯಮಿ. ಮೊದಲಿನಿಂದಲೇ ಅನೇಕ ಬಾರಿ ಈ ಪ್ರಾಪರ್ಟಿಗೆ ಬಂದುಹೋಗಿದ್ದಾರೆ. ಲಾಡ್ಜ್ ಆಗಿ ಗುರುತಿಸಿಕೊಂಡಿದ್ದ ಈ ಪ್ರಾಪರ್ಟಿಯನ್ನು ರೆಸಾರ್ಟ್ ಆಗಿ ರೂಪಾಂತರಗೊಳಿಸುವಲ್ಲಿ ಅವರ ಪಾತ್ರ ಪ್ರಮುಖವಾದುದು. ಧಾರವಾಡ- ಹುಬ್ಬಳ್ಳಿಯ ಜನತೆಗೆ ರೆಸಾರ್ಟ್ ಅನುಭವ ಏನು ಎಂಬುದನ್ನು ತಿಳಿಸಿಕೊಟ್ಟ ಹಿರಿಮೆ ಇವರಿಗೆ ಸಲ್ಲುತ್ತದೆ. ಲಕ್ಸೂರಿಯಸ್ ರೂಮ್ಗಳು, ರೆಸ್ಟೋರೆಂಟ್, ಬಾರ್, ಸ್ವಿಮ್ಮಿಂಗ್ ಪೂಲ್ ಹೀಗೆ ಎಲ್ಲ ಸೌಕರ್ಯಗಳನ್ನೂ ನೀಡಲಾಗಿದೆ.
-ಸಚಿನ್, ದುಂಡಪ್ಪ ಬಸಪ್ಪ ಗಾಣಿಗೇರರ ಸ್ನೇಹಿತ
![]()
ನಾನು ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಆದರೆ ನನಗೆ ವರ್ಕ್ ಫ್ರಂ ಹೋಮ್ ಅವಕಾಶವಿರುವುದರಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಕೆಲಸದ ಒತ್ತಡದಿಂದ ಹೊರಬರುವುದಕ್ಕಾಗಿ ಸಮೀಪವಿರುವ ರೆಸಾರ್ಟ್ಗಳನ್ನು ಹುಡುಕಾಡಿದಾಗ ಸಿಕ್ಕಿರುವುದು ಈ ರೆಸಾರ್ಟ್ನ ಸಂಪರ್ಕ. ಇಲ್ಲಿನ ಪರಿಸರ, ಯುನೀಕ್ ಸ್ಟ್ರಕ್ಚರ್, ವಿಶೇಷವಾದ ಆಹಾರ, ವಾಟರ್ ಆಕ್ಟಿವಿಟೀಸ್, ಸ್ಟಾಫ್ ಹಾಗೂ ಸರ್ವಿಸ್ ಸಹ ಅದ್ಭುತವಾಗಿದೆ. ಬಜೆಟ್ ಫ್ರೆಂಡ್ಲಿ ಆಗಿರುವ ಈ ರೆಸಾರ್ಟ್ ನನಗಂತೂ ತುಂಬಾ ಮೆಚ್ಚುಗೆಯಾಗಿದೆ.
-ಅಭಿನಂದನ್, ರೆಸಾರ್ಟ್ ಪ್ರಿಯ