Vijayapura News: ವ್ಯಕ್ತಿತ್ವ ನಿರ್ಮಾಣದಲ್ಲಿ ಸಂಗೀತದ ಪಾತ್ರ ಮಹತ್ವ
Vijayapura News: ವ್ಯಕ್ತಿತ್ವ ನಿರ್ಮಾಣದಲ್ಲಿ ಸಂಗೀತದ ಪಾತ್ರ ಮಹತ್ವ

ಇಂಡಿ: ಪಟ್ಟಣದ ಪ್ರತಿಷ್ಠಿತ ರಾಮಚಂದ ಮೋತಿಚಂದ ಶಹಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಇಂಡಿ ಇದರ ಅಂಗ ಸಂಸ್ಥೆಗಳಾದ ಆರ್. ಎಂ. ಶಹಾ (ಸಿ.ಬಿ.ಎಸ್.ಇ) ಪಬ್ಲಿಕ್ ಶಾಲೆ ಹಾಗೂ ಎಫ್.ಕೆ ದೋಶಿ ಪದವಿ ಪೂರ್ವ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ೧೨-೧೨-೨೦೨೪ ರಿಂದ ೧೫-೧೨-೨೦೨೪ರವರೆಗೆ ಉತ್ಥಾನ ಮಹೋತ್ಸವ ಕಾರ್ಯಕ್ರಮ ಜರುಗಲಿದೆ. ಈ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನ ಸಾಯಂಕಾಲ ಶೃತಿ ಸಂಗಮ ಹಮ್ಮಿಕೊಳ್ಳಲಾಗಿತ್ತು.
ಶೃತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗುಲ್ಬರ್ಗ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥೆಯಾದ ಡಾ. ಸುನಂದ ಸಾಲವಾಡಗಿ ಅವರು ಮಾತನಾಡುತ್ತಾ, ಮಕ್ಕಳ ಕಲಿಕೆಯಲ್ಲಿ ಪ್ರಮುಖವಾದದ್ದು, ಸಂಗೀತವು ಮಹಾನ್ ಶಕ್ತಿಯನ್ನು ಹೊಂದಿದ್ದು ಸಂಗೀತದ ಮೂಲಕ ಮಕ್ಕಳ ಕಲಿಕೆಯು ಫಲಪ್ರದವಾಗುತ್ತದೆ. ಆದ ಕಾರಣ ಮಕ್ಕಳು ಸಂಗೀತದ ಅಭಿರುಚಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಿ ಆರ್ ಶಹಾ ಅವರು ಮಾತನಾಡುತ್ತಾ, ಕನ್ನಡ ರಾಜ್ಯೋತ್ಸವದ ಅಂಗವಾಗಿ ನಮ್ಮ ಶಾಲೆಯಲ್ಲಿ ಸತೀಶ್ ಸಂಗಮ ಎಂಬ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ನಾಡು ಹಲವಾರು ವಿಶೇಷತೆಗಳಿಂದ ಕೂಡಿದ ನಾಡು ಇಂತಹ ನಾಡಿನಲ್ಲಿ ಜನಿಸಿದ ನಾವು ನಾಡಿಗಾಗಿ ಒಳ್ಳೆಯ ಕಾರ್ಯಗಳನ್ನು ಮಾಡಲು ವಿದ್ಯಾರ್ಥಿಗಳು ಸದಾಸಿದ್ದರಾಗಿರಬೇಕೆಂದು ಕರೆ ನೀಡಿದರು.
ಅಲ್ಲದೇ ಸಂಗೀತ ಕಾರ್ಯಕ್ರಮದ ಬಗ್ಗೆ ಮಾತನಾಡಿ ಸಂಗೀತವು ‘ಒಂದು ಅಗಾಧವಾದ ಶಕ್ತಿಯನ್ನು ಹೊಂದಿದ್ದು ಇದರ ಮೂಲಕ ವಿದ್ಯಾರ್ಥಿಗಳ ಒಳ್ಳೆಯ ವ್ಯಕ್ತಿತ್ವ ನಿರ್ಮಾಣವಾಗುತ್ತದೆ’ ಎಂದು ಮಕ್ಕಳಿಗೆ ತಿಳಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಹೇಶ್ ಡಿ ಶಹಾ, ಆಡಳಿತಾಧಿಕಾರಿಗಳಾದ ಶ್ರೀಮತಿ ಕಲ್ಪನಾ ಶಹಾ, ಆಡಳಿತ ಮಂಡಳಿಯ ಸದಸ್ಯರಾದ ರಾಜಶೇಖರ ದೋಶಿ, ಸುನಿಲ್ ಕುಲಕರ್ಣಿ, ನೀರಜಾಕ್ಷಿ ಕೆ, ಶೈಕ್ಷಣಿಕ ಮಾರ್ಗದರ್ಶಕರಾದ ನಜೀರ್ ಹುಂಡೇಕರ್, ವಿಜ್ಞಾನ ವಿಭಾಗದ ಪ್ರಾಂಶುಪಾಲರಾದ ಡಾ ದಯಾನಂದ ದಳವಾಯಿ, ಶಾಲಾ ವಿಭಾಗದ ಪ್ರಾಚಾರ್ಯರಾದ ಪ್ರಕಾಶ್ ಪಾಟೀಲ್ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು, ಪಾಲಕರು, ಪತ್ರಿಕಾ ಮಾಧ್ಯಮದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪಾಲಕರು ನಡೆಸಿಕೊಟ್ಟ ಗಾಯನ ಎಲ್ಲರ ಗಮನ ಸೆಳೆದವು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ರೂಪಾ ಕಿಟ್ಟದ ನಿರೂಪಿಸಿ ವಂದಿಸಿದರು.