ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊವಿಡ್ ರೋಗಿಗಳಿಗೆ ಭಾರತದ ಮೊದಲ ಮೇಲ್ವಿಚಾರಣಾ ವ್ಯವಸ್ಥೆ ‘ಕೊವಿಡ್‍ ಬೀಪ್‍’ಗೆ ಡಾ.ಜಿತೇಂದ್ರ ಸಿಂಗ್ ಚಾಲನೆ

ಕೊವಿಡ್ ರೋಗಿಗಳಿಗೆ ಭಾರತದ ಮೊದಲ ಮೇಲ್ವಿಚಾರಣಾ ವ್ಯವಸ್ಥೆ ‘ಕೊವಿಡ್‍ ಬೀಪ್‍’ಗೆ ಡಾ.ಜಿತೇಂದ್ರ ಸಿಂಗ್ ಚಾಲನೆ

Profile
Vishwavani News Jun 7, 2020 8:43 PM
ದೆಹಲಿ, ಕೊವಿಡ್‍ ರೋಗಿಗಳಿಗೆ ಮಾನಸಿಕ ಮಾನದಂಡಗಳ ಮೇಲ್ವಿಚಾರಣೆ ಮಾಡುವ ವೈರ್ ಲೆಸ್‍ ವ್ಯವಸ್ಥೆ ’ಕೊವಿಡ್‍-ಬೀಪ್‍’ ಗೆ ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಭಾನುವಾರ ಇಲ್ಲಿ ಚಾಲನೆ ನೀಡಿದರು. ಕೊವಿಡ್‍-ಬೀಪ್‍ ಭಾರತದ ಮೊದಲ ದೇಶೀಯ ಮತ್ತು ಕಡಿಮೆ ವೆಚ್ಚದ ವ್ಯವಸ್ಥೆಯಾಗಿದ್ದು, ಇದನ್ನು ಹೈದರಾಬಾದ್‌ನ ಇಎಸ್‌ಐಸಿ ವೈದ್ಯಕೀಯ ಕಾಲೇಜು ಅಭಿವೃದ್ಧಿಪಡಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅರಿವು ಬೇಕು, ಆತಂಕವಲ್ಲ ಎಂದು ಪ್ರತಿಪಾದಿಸಿದ ಸಚಿವರು, ಲಾಕ್‍ಡೌನ್‍ ತೆರವಾಗುತ್ತಿರುವ ಸಮಯದಲ್ಲಿ ಈ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬೇಕಿದ್ದು, ಜಾಗೃತಿ ಹೆಚ್ಚು ಅಗತ್ಯವಾಗಿದೆ ಎಂದು ಹೇಳಿದರು. ಕೊವಿಡ್‍ ಲಾಕ್‍ಡೌನ್‍ ಬಿಕ್ಕಟ್ಟು ಸಮಯದಲ್ಲಿ ಐಐಟಿ-ಹೈದರಾಬಾದ್‍ ಮತ್ತು ಪರಮಾಣು ಇಂಧನ ಇಲಾಖೆ ಸಹಯೋಗದೊಂದಿಗೆ ಇಎಸ್‌ಐಸಿ ವೈದ್ಯಕೀಯ ಕಾಲೇಜು ವಿಮಾದಾರರಿಗೆ ಮತ್ತೊಂದು ಆವಿಷ್ಕಾರ ಮಾಡಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಭಾರತದ ಪ್ರತಿಷ್ಠಿತ ಸಂಸ್ಥೆಗಳು ಹೇಗೆ ಕಂಡುಹಿಡಿಯಬಲ್ಲವು ಎಂಬುದಕ್ಕೆ ಕೊವಿಡ್‍-ಬೀಪ್‍ ನಿದರ್ಶನವಾಗಿದೆ. ಕಡಿಮೆ ವೆಚ್ಚದ ಈ ವ್ಯವಸ್ಥೆಯ ಆವಿಷ್ಕಾರದಿಂದ ‘ಆತ್ಮ ನಿರ್ಭರ್ ಭಾರತ್‍’ಗೆ ನಿಜವಾದ ಅರ್ಥ ಕಲ್ಪಿಸಲಾಗಿದೆ ಎಂದು ಜಿತೇಂದ್ರ ಸಿಂಗ್‍ ಹೇಳಿದ್ದಾರೆ.