H D Devegowda: ಸಿ.ಎಸ್.ಪುರದಲ್ಲಿ ನ.13 ರಂದು ಸಮುದಾಯ ಭವನ ಲೋಕಾರ್ಪಣೆ ಹಾಗೂ ದೇವೇಗೌಡರ ಪುತ್ಥಳಿ ಅನಾವರಣ : ಶಾಸಕ ಎಂ.ಟಿ.ಕೃಷ್ಣಪ್ಪ
ಕೇಂದ್ರದ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ದೇವೇಗೌಡರ ಪುತ್ಥಳಿ ಅನಾವರಣ ಗೊಳಿಸಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್(Dr G Parameshwar) ಅವರು ದಾಸೋಹ ಭವನ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುವುದು. ಹೋಬಳಿಯ ಎಲ್ಲಾ ಗ್ರಾಮದ ಮನೆಗಳಿಗೂ ಜೆಡಿಎಸ್ ಕಾರ್ಯಕರ್ತರು ಆಹ್ವಾನ ನೀಡಲಿದ್ದಾರೆ
-
ಗುಬ್ಬಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(H D Devegowda) ಅವರ ರಾಜಕೀಯ ಹಾದಿ ಹಾಗೂ ಸಮಾಜದ ಅಭಿವೃದ್ದಿ ಚಿಂತನೆಗಳು, ರೈತಪರ ಹೋರಾಟಗಳು ಸ್ಮರಿಸಿ ಅವರ ಹೆಸರಿನಲ್ಲಿ ಬಡವರು, ಮಧ್ಯಮ ವರ್ಗಕ್ಕೆ ಸಲ್ಲುವ ಸಮುದಾಯ ಭವನ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಸಿದ್ಧಗೊಂಡಿದ್ದು ಇದೇ ತಿಂಗಳ 13 ರಂದು ಲೋಕಾರ್ಪಣೆ, ಹಾಗೆಯೇ ದೇವೇಗೌಡರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಹಾಗೂ ವಿ.ಸೋಮಣ್ಣ(V Somanna) ನಡೆಸಿಕೊಡಲಿದ್ದಾರೆ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ(MLA M T Krishnappa) ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಹತ್ತು ವರ್ಷದ ಹಿಂದೆ ದೇವೇಗೌಡರ ಹೆಸರಿನಲ್ಲಿ ಗ್ರಾಮೀಣ ಜನರ ಅನುಕೂಲಕ್ಕೆ ಅತೀ ಕಡಿಮೆ ಬಾಡಿಗೆಯ ಸಮುದಾಯ ಭವನ ನಿರ್ಮಾಣಕ್ಕೆ ನಿರ್ಧಾರ ಮಾಡಲಾ ಗಿತ್ತು. ಕೆಲ ದಿನಗಳ ವಿಳಂಬ ನಂತರ ಈಗ ಸಂಪೂರ್ಣ ಸಿದ್ಧವಾದ ಸಮುದಾಯ ಭವನ ಬಡವರ ಶುಭಕಾರ್ಯಕ್ಕೆ ಸಿಗಲಿದೆ ಎಂದರು.
ನ.13 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸಮುದಾಯಭವನ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: Gubbi News: ಕೊಪ್ಪ ವಿಎಸ್ಎಸ್ಎನ್ ಪ್ರತಿಷ್ಠೆಯ ಚುನಾವಣೆ : ಅಧ್ಯಕ್ಷರಾಗಿ ಕೆ.ಎಸ್.ರಮೇಶ್, ಉಪಾಧ್ಯಕ್ಷರಾಗಿ ನಟರಾಜ್ ಆಯ್ಕೆ
ಕೇಂದ್ರದ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ದೇವೇಗೌಡರ ಪುತ್ಥಳಿ ಅನಾವರಣ ಗೊಳಿಸಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್(Dr G Parameshwar) ಅವರು ದಾಸೋಹಭವನ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುವುದು. ಹೋಬಳಿಯ ಎಲ್ಲಾ ಗ್ರಾಮದ ಮನೆಗಳಿಗೂ ಜೆಡಿಎಸ್ ಕಾರ್ಯ ಕರ್ತರು ಆಹ್ವಾನ ನೀಡಲಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸು ವಂತೆ ಮನವಿ ಮಾಡಿದರು.
ಮುಖಂಡ ಚನ್ನೇನಹಳ್ಳಿ ಮೂರ್ತಣ್ಣ ಮಾತನಾಡಿ, ಸಿ.ಎಸ್.ಪುರ ಹೋಬಳಿಯ ರೈತಾಪಿ ವರ್ಗಕ್ಕೆ ಅನುಕೂಲ ಮಾಡುವ ಉದ್ದೇಶದಲ್ಲಿ ಕಡಿಮೆ ಬಾಡಿಗೆಯ ಸಮುದಾಯಭವನ ನಿರ್ಮಿಸಿ ನವಂಬರ್ 13 ರಂದು ಲೋಕಾರ್ಪಣೆಗೊಳ್ಳಲಿದೆ. ದೇವೇಗೌಡರ ಜನಸೇವೆ ಸ್ಮರಣೆಯಲ್ಲಿ ನಿರ್ಮಿಸಲಾದ ಸಮುದಾಯ ಭವನ ಜೊತೆಗೆ ದೊಡ್ಡಗೌಡರ ಕಂಚಿನ ಪುತ್ಥಳಿ ಅನಾವರಣ ಮಾಡುವ ಕಾರ್ಯಕ್ರಮ ಕೂಡಾ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರ ಜೊತೆಗೆ ರಾಜ್ಯದ ಉಪಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ.
ಶಾಸಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್(Keshava Prasad), ಮಾಜಿ ಶಾಸಕ ಮಸಾಲಾ ಜಯರಾಮ್(Masala jayaram), ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಅಶೋಕ್.ಕೆ.ವಿ., ಜಿಪಂ ಸಿಇಓ ಅಶ್ವಿಜಾ, ಕೆಆರ್ ಡಿಐಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹೋಬಳಿಯ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾಗಿ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಬೀರಮಾರನಹಳ್ಳಿ ನರಸೇಗೌಡ, ಬೋರಪ್ಪನ ಹಳ್ಳಿ ಕುಮಾರ್, ಬಸವರಾಜು, ಹೋಬಳಿ ಅಧ್ಯಕ್ಷ ಜಗದೀಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.