Design Up Futures Challenge 2025: ಡಿಸೈನ್‌ಅಪ್‌ನಿಂದ “ಫ್ಯೂಚರ್ಸ್ ಚಾಲೆಂಜ್ 2025” - ಆಸಕ್ತರಿಗೆ ಉಚಿತ ಪ್ರವೇಶ!
Design Up Futures Challenge: ಆಗ್ನೇಯ ಏಷ್ಯಾ ಭಾಗದ ಅತಿದೊಡ್ಡ ಸಮುದಾಯ ನೇತೃತ್ವದ ವಿನ್ಯಾಸ-ತಂತ್ರಜ್ಞಾನ ಸಂಸ್ಥೆ ಡಿಸೈನ್‌ಅಪ್,” ಫ್ಯೂಚರ್ಸ್ ಚಾಲೆಂಜ್ 2025” ಎಂಬ ಸ್ಪರ್ಧೆಯನ್ನು ಪ್ರಾರಂಭಿಸಿದೆ. ಇದೊಂದು ಅಂತರಾಷ್ಟ್ರೀಯ ಮಟ್ಟದ ಡಿಸೈನ್ ಸ್ಪರ್ಧೆಯಾಗಿದ್ದು ವಿದ್ಯಾರ್ಥಿಗಳು, ಪದವೀಧರರು, ಫ್ರೀಲಾನ್ಸ್‌ರ್‌ಗಳು 2050ರಲ್ಲಿ ಕರೆನ್ಸಿ ಹೇಗೆ ಕಾಣಲಿದೆ ಎಂಬುದನ್ನು ಕಲ್ಪಿಸಿಕೊಂಡು ವಿನ್ಯಾಸಗೊಳಿಸಬೇಕಿದೆ.

-

ಬೆಂಗಳೂರು: ಆಗ್ನೇಯ ಏಷ್ಯಾ ಭಾಗದ ಅತಿದೊಡ್ಡ ಸಮುದಾಯ ನೇತೃತ್ವದ ವಿನ್ಯಾಸ-ತಂತ್ರ ಜ್ಞಾನ ಸಂಸ್ಥೆ ಡಿಸೈನ್‌ಅಪ್,” ಫ್ಯೂಚರ್ಸ್ ಚಾಲೆಂಜ್ 2025” (DesignUp Futures Challenge 2025) ಎಂಬ ಸ್ಪರ್ಧೆಯನ್ನು ಪ್ರಾರಂಭಿಸಿದೆ. ಇದೊಂದು ಅಂತರಾಷ್ಟ್ರೀಯ ಮಟ್ಟದ ಡಿಸೈನ್ ಸ್ಪರ್ಧೆಯಾಗಿದ್ದು ವಿದ್ಯಾರ್ಥಿ ಗಳು, ಪದವೀಧರರು, ಫ್ರೀಲಾನ್ಸ್‌ರ್ಸ್ "2050ರಲ್ಲಿ ಕರೆನ್ಸಿ ಹೇಗೆ ಕಾಣಲಿದೆ” ಎಂಬುದನ್ನು ಕಲ್ಪಿಸಿಕೊಂಡು ವಿನ್ಯಾಸಗೊಳಿಸಬೇಕಿದೆ. ಈ ಸ್ಫರ್ಧೆ ಭಾರತ, ಆಗ್ನೇಯ ಏಷ್ಯಾ ಮತ್ತು ಯೂರೋಪ್ ನಿಂದ ಭಾಗವಿಸುವವರಿಗೆ ಮುಕ್ತವಾಗಿದ್ದು ಸೆಪ್ಟೆಂಬರ್ 7, 2025ರಂದು ನೋಂದಣಿ ಮುಕ್ತಾಯಗೊಳ್ಳಲಿದೆ.
10 ಸ್ಪರ್ಧಿಗಳು ಪ್ರೆಸ್ಟೀಜಿಯಸ್ ಡಿಸೈನ್ ಅಪ್ ಫ್ಯೂಚರ್ಸ್ ಶಾರ್ಟ್ಲಿಸ್ಟ್ ಮತ್ತು 3 ಫೈನಲಿಸ್ಟ್ ಗಳಿಗೆ ನವೆಂಬರ್‌ನಲ್ಲಿ ನಡೆಯುವ ಡಿಸೈನ್‌ಅಪ್ 2025 ವೇದಿಕೆಯ ಮೇಲೆ ಡಿಸೈನ್ ಪ್ರಸ್ತುತಪಡಿಸಲು ಅವಕಾಶ ನೀಡಲಾಗುವುದು. ಜಗತ್ತು ವೇಗವಾಗಿ ಬದಲಾಗುತ್ತಿದೆ..ಮತ್ತು 25 ವರ್ಷಗಳ ನಂತರ ವಿಭಿನ್ನವಾಗಿ ಕಾಣಿಸಬಹುದು. ದೇಶಗಳ ಪುನರಚನೆ ಆಗಬಹುದು. ಆರ್ಥಿಕತೆಗಳು ವಿಲೀನ ಗೊಳ್ಳಬಹುದು, ವಿಭಜನೆ ಯಾಗಬಹುದು ಅಥವಾ ಕೊನೆಗೊಳ್ಳಬಹುದು. ಹವಾಮಾನ ಬದಲಾವಣೆ, AI(ಕೃತಕ ಬುದ್ದಿಮತ್ತೆ), ಬಾಹ್ಯಾಕಾಶ ತಂತ್ರಜ್ಞಾನ, ಭೌಗೋಳಿಕ ರಾಜಕೀಯ, ಇವೆಲ್ಲವೂ ನಾವು ಹೇಗೆ ಬದುಕುತ್ತೇವೆ, ಗಳಿಸುತ್ತೇವೆ, ಖರ್ಚು ಮಾಡುತ್ತೇವೆ ಮತ್ತು ಸಂಪರ್ಕ ಸಾಧಿಸುತ್ತೇವೆ ಎಂಬುದನ್ನು ಮರುರೂಪಿಸಬಹುದು.
2050ರಲ್ಲಿ "ಕರೆನ್ಸಿ" ಹೇಗಿರುತ್ತದೆ? ಅದು ನೋಟುಗಳು ಮತ್ತು ನಾಣ್ಯಗಳಿಂದ ಮಾಡಲ್ಪ ಟ್ಟಿದೆಯೇ? ಸಂಪೂರ್ಣವಾಗಿ ಡಿಜಿಟಲ್ ಇರಬಹುದೇ? ಹಚ್ಚೆ ಹಾಕಿಸಿಕೊಂಡಿದೆಯೇ, ಅಥವಾ ಅರ್ಥ ಪೂರ್ಣವಾಗಿದೆಯೇ? ಕರೆನ್ಸಿ ಎಂದರೆ ಹಣ ಅಥವಾ ಇದಕ್ಕೂ ಮೀರಿದ ವಿಚಾರವೇ - ನಂಬಿಕೆ, ಭಾವನೆ, ಖ್ಯಾತಿ, ಶಕ್ತಿ, ಗಮನ? ಅದನ್ನು ಶ್ರಮ, ಕಲಿಕೆ ಅಥವಾ ಸಹಾನುಭೂತಿ ಮೂಲಕ ಗಳಿಸಲಾಗಿದೆಯೇ? – ಈ ಸವಾಲು ಗಳು ದಿಟ್ಟ ವಿಚಾರಗಳು ಮತ್ತು ಆಳವಾದ ವಿನ್ಯಾಸ ಕಲ್ಪನೆಯನ್ನು ಬಯಸುತ್ತದೆ ಮತ್ತು ಕರೆನ್ಸಿಯ ಭವಿಷ್ಯ ವನ್ನು ಒಳಗೊಂಡಿದೆ.
ಈ ಸ್ಪರ್ಧೆಯು ಮುಖ್ಯವಾಗಿ , ಮಾರುಕಟ್ಟೆಯಲ್ಲಿ AI ಯಾಂತ್ರೀಕರಣದಿಂದ ಹೆಚ್ಚುತ್ತಿರುವ ವಿನ್ಯಾಸ ಪದವೀಧರರ ಅತಿಯಾದ ಪೂರೈಕೆ ಮತ್ತು ಕುಗ್ಗುತ್ತಿರುವ ಆರಂಭಿಕ ಹಂತದ ಅವಕಾಶಗಳ ನಡುವಿನ ಅಂತರವನ್ನು ಪರಿಹರಿಸುತ್ತದೆ. 700ಕ್ಕೂ ಹೆಚ್ಚು ಭಾಗವಹಿಸುವವರು ಈಗಾಗಲೇ ತಮ್ಮ ವಿನ್ಯಾಸವನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದು , ಸ್ಪರ್ಧೆಯು ಯುವ ವಿನ್ಯಾಸ ಕರಿಗೆ ಅರ್ಥಪೂರ್ಣ ಮತ್ತು ವೃತ್ತಿ ಮಾರ್ಗಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ:State Education Policy: ರಾಜ್ಯ ಶಿಕ್ಷಣ ನೀತಿ ಆಯೋಗದ ಅಂತಿಮ ವರದಿ ಸಿಎಂಗೆ ಸಲ್ಲಿಕೆ; ಪ್ರಮುಖ ಶಿಫಾರಸುಗಳು ಇಲ್ಲಿವೆ
ಡಿಸೈನ್‌ಅಪ್‌ನ ಸಂಸ್ಥಾಪಕ ಮತ್ತು ಕ್ಯುರೇಟರ್ ಜಯ್ ದತ್ತ ಮಾತನಾಡಿ ಇದು ಕೇವಲ ವಿನ್ಯಾಸ ಸ್ಪರ್ಧೆಯಲ್ಲ; ಇದು ಕನಸು ಕಾಣಲು ಮತ್ತು ಜಗತ್ತನ್ನು ಪುನರ್ವಿಮರ್ಶಿಸಲು ಒಂದು ಅವಕಾಶ ವಾಗಿದೆ. ಒಬ್ಬರು ವಿನ್ಯಾಸ ವಿದ್ಯಾರ್ಥಿಯಾಗಿಯೇ ಇರಬೇಕಾಗಿಲ್ಲ. ಕುತೂಹಲ ಮತ್ತು ಸೃಜನಶೀಲ ಚಿಂತನೆಯೊಂದಿಗೆ ವಿಸ್ತರಿಸಲು ಸಿದ್ಧವಾಗಿರುವ ಕಲ್ಪನೆ ಅಗತ್ಯವಿದೆ. ಇಂತಹ ಸವಾಲುಗಳು ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮನ್ನಣೆ ಮತ್ತು ಜಾಗತಿಕ ವೇದಿಕೆ ನೀಡುತ್ತದೆ. ಯುವ ಧ್ವನಿಗಳಿಗೆ ನಾವು ಚಿಂತನಶೀಲ ವೇದಿಕೆ ನೀಡಲು ಬಯಸುತ್ತೇವೆ" ಎಂದರು.
ಜ್ಯೂರಿ ಮತ್ತು ಜಾಗತಿಕ ಸಹಯೋಗ
- ಡಾ.ಇಸಾಬೆಲ್ಲಾ ಹರ್ಮನ್ - ರಾಜಕೀಯ ವಿಜ್ಞಾನಿ ಮತ್ತು ವೈಜ್ಞಾನಿಕ ಕಾದಂಬರಿ ವಿಶ್ಲೇಷಕ
- ಕಟ್ಜಾ ಫೋರ್ಬ್ಸ್ - ಕ್ಲೈಂಟ್ ಅನುಭವದ ಜಾಗತಿಕ ಮುಖ್ಯಸ್ಥರು, ಸ್ಟ್ಯಾನ್‌ಚಾರ್ಟ್ ಬ್ಯಾಂಕ್
- ಜೋಚೆನ್ ಪೇಸೆನ್ - ವಿನ್ಯಾಸ ನಿರ್ದೇಶಕರು, KIA
- ರೈನರ್ ವೆಸ್ಲರ್ - ಮುಖ್ಯ ವಿನ್ಯಾಸ ಅಧಿಕಾರಿ, DBS ಬ್ಯಾಂಕ್ ಸಿಂಗಾಪುರ
- ಸುಬೋಧ್ ಕೊಲ್ಹೆ - ಹಿರಿಯ ವಿನ್ಯಾಸ ನಾಯಕ, ಜಾರ್ ಮನಿ ಅಪ್ಲಿಕೇಶನ್
ವಿಜೇತರಿಗೆ ಏನು ಸಿಗುತ್ತದೆ?
- ಸಕಲ ವ್ಯವಸ್ಥೆ ಜತೆ ಪ್ರವೇಶ - ಉಚಿತ ಪಾಸ್‌ಗಳು, ದೇಶೀಯ ಪ್ರಯಾಣ ಮತ್ತು 50,000 ವರೆಗಿನ ಮೌಲ್ಯದ ವಾಸ್ತವ್ಯ
- ವಿಶಿಷ್ಟ ಟ್ರೋಫಿ - ಎಕ್ಸ್‌ಕ್ಲೂಸಿವ್ (ಸ್ಟುಡಿಯೋ ABD) ನಿಂದ ರಚಿಸಲಾಗಿದೆ
- ವೃತ್ತಿ ಅವಕಾಶಗಳು - ಜಾರ್, ಏಕಾ. ಕೇರ್, ಅನ್‌ಲಿಮಿಟ್ಸ್.ಎಐ, ಐಡಿಯಾ ಸ್ಪೈಸ್ ಮತ್ತು ಪಾಲುದಾರ ಕಂಪನಿಗಳೊಂದಿಗೆ 1000+ ವೃತ್ತಿಪರರಿಗೆ ಪ್ರವೇಶ ಮತ್ತು ಉದ್ಯೋಗಾವಕಾಶಗಳು
ನೋಂದಣಿ ವಿವರಗಳು: ಭಾರತ, ಆಗ್ನೇಯ ಏಷ್ಯಾ ಮತ್ತು ಯುರೋಪ್‌ನ ವಿದ್ಯಾರ್ಥಿಗಳು, ಇತ್ತೀಚಿನ ಪದವೀಧರರು ಮತ್ತು ಫ್ರೀಲ್ಯಾನ್ಸರ್‌ಗಳು ಸೆಪ್ಟೆಂಬರ್ 7ರ ಮೊದಲು 25.designup.io/challeng ನಲ್ಲಿ ನೋಂದಾಯಿಸಿ ಕೊಳ್ಳಬಹುದು. ಸ್ಪರ್ಧೆಯಲ್ಲಿ ಉಚಿತವಾಗಿ ಭಾಗವಹಿಸಬಹುದು.