ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಐಟಿ ಮದ್ರಾಸ್‌ನಿಂದ ಎಂಜಿನಿಯರ್ ಮಾತ್ರವಲ್ಲ ಡಾಕ್ಟರ್‌ಗಳು ಹೊರಬರಲಿದ್ದಾರೆ: ಎಂಬಿಬಿಎಸ್‌ ಆರಂಭಿಸಲು ನಿರ್ದೇಶಕ ಕಾಮಕೋಟಿ ಸಿದ್ಧತೆ

ಐಐಟಿ ಮದ್ರಾಸ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಿದೆ ಎಂದು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಐಐಟಿ ಮದ್ರಾಸ್ ಎಂಜಿನಿಯರ್‌ಗಳನ್ನು ಮಾತ್ರವಲ್ಲ ಡಾಕ್ಟರ್ ಗಳನ್ನು ನಿರ್ಮಿಸಲಿದೆ ಎಂದು ಹೇಳಿದರು.

ಸಂಗ್ರಹ ಚಿತ್ರ

ಚೆನ್ನೈ: ಐಐಟಿ ಮದ್ರಾಸ್ (IIT Madras) ವೈದ್ಯಕೀಯ ವಿಜ್ಞಾನ ಶಿಕ್ಷಣ (medical sciences) ಸಂಸ್ಥೆಯನ್ನು ತೆರೆಯಲಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತನ್ನದೇ ಅದ ವೈದ್ಯಕೀಯ ಪದವಿಗಳನ್ನು ನೀಡಲಿದೆ ಎಂದು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ (IIT Madras Director Professor V. Kamakoti) ತಿಳಿಸಿದರು. ಈ ಕುರಿತು ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಸುಮಾರು 70 ವರ್ಷಗಳಿಂದ ಐಐಟಿ ಮದ್ರಾಸ್ ಎಂಜಿನಿಯರಿಂಗ್ ಗೆ ಖ್ಯಾತಿ ಪಡೆದಿದೆ. ಆದರೆ ಇನ್ನು ಮುಂದೆ ಇಲ್ಲಿ ಕೇವಲ ಯಂತ್ರ ನಿರ್ಮಾಣ, ಕೋಡ್ ಬರೆಯುವ ಪದವೀಧರರು ಮಾತ್ರವಲ್ಲ ಬೇರೆ ರೀತಿಯ ಪದವೀಧರರು ಕೂಡ ಹೊರಬರಲಿದ್ದಾರೆ ಎಂದರು.

ಐಐಟಿ ಮದ್ರಾಸ್ ಸಂಸ್ಥೆಯು ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಿದೆ. ತನ್ನದೇ ಆದ ವೈದ್ಯಕೀಯ ಪದವಿಗಳನ್ನು ನೀಡಲಿದೆ. ಇದರಲ್ಲಿ ಪದವಿ, ಪದವಿಪೂರ್ವ ಎಂಬಿಬಿಎಸ್, ಸ್ನಾತಕೋತ್ತರ ಎಂಡಿ ಮತ್ತು ಡಾಕ್ಟರೇಟ್ ಪಿಎಚ್‌ಡಿ ಸೇರಿದೆ ಎಂದರು.

ಪ್ರಾಂಶುಪಾಲನನ್ನು 27 ಬಾರಿ ಇರಿದು ಹತ್ಯೆ ಮಾಡಿದ ಶಾಲಾ ಬಾಲಕರು; ಐಷಾರಾಮಿ ಜೀವನಶೈಲಿಗೆ ಈ ಕೃತ್ಯ

ಈ ನಿಟ್ಟಿನಲ್ಲಿ ಸಂಸ್ಥೆಯು ಈಗಾಗಲೇ ಕಾರ್ಯಾರಂಭಿಸಿದೆ. 2023ರಲ್ಲಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳನ್ನು ತೆರೆದಿದೆ. ಭಾರತದಲ್ಲಿ ಇದು ಮೊದಲ ಪ್ರಯೋಗ. ಇಲ್ಲಿ ನಾಲ್ಕು ವರ್ಷಗಳ ಪದವಿಪೂರ್ವ ಪದವಿಯನ್ನು ನೀಡಲಿದೆ. ಇದರಲ್ಲಿ ಭಾಗಶಃ ಎಂಜಿನಿಯರ್, ಭಾಗಶಃ ಜೀವಶಾಸ್ತ್ರಜ್ಞರು ;ಇರಲಿದ್ದಾರೆ. ಇವರನ್ನು ರೋಗಿಗಳಿಗೆ ಚಿಕಿತ್ಸೆ ನೀಡಲು ಅಲ್ಲ ಸ್ಕ್ಯಾನರ್‌ಗಳು, ಇಂಪ್ಲಾಂಟ್‌ಗಳು ಮತ್ತು ಸಾಫ್ಟ್‌ವೇರ್ ಅನ್ನು ವಿನ್ಯಾಸಗೊಳಿಸಲು ನಿರ್ಮಿಸಲಾಗುತ್ತದೆ ಎಂದರು.

ಇಲ್ಲಿ ವೈದ್ಯಕೀಯ ತಂತ್ರಜ್ಞರು ಮತ್ತು ವೈದ್ಯ ವಿಜ್ಞಾನಿಗಳನ್ನು ತಯಾರಿಸಲಾಗುತ್ತದೆ ಎಂದ ಅವರು, ಅಂದರೆ ಇವರು ಮಾನವ ದೇಹ ಮತ್ತು ಯಂತ್ರ ಎರಡನ್ನೂ ಅರ್ಥಮಾಡಿಕೊಳ್ಳಲಿದ್ದಾರೆ. ವೈದ್ಯಕೀಯ ಪದವಿಗಳನ್ನು ನೀಡುವ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಮುಂದಿನ ಹೆಜ್ಜೆಯಾಗಿ ವೈದ್ಯರನ್ನು ಕೂಡ ಸಿದ್ಧಪಡಿಸಲಿದೆ ಎಂದು ತಿಳಿಸಿದರು.

ಇವತ್ತು ತಂತ್ರಜ್ಞಾನ ಸಂಸ್ಥೆಯಲ್ಲೇ ವೈದ್ಯಕೀಯ ಶಿಕ್ಷಣವನ್ನು ನೀಡುವ ಅವಶ್ಯಕತೆ ಇದೆ. ಇಲ್ಲವಾದರೆ ನಾವು ವೈದ್ಯಕೀಯ ಮಾರುಕಟ್ಟೆಯಲ್ಲಿ ಬದುಕಲು ಸಾಧ್ಯವಿಲ್ಲ. ಇವತ್ತು ವೈದ್ಯಕೀಯ ಕ್ಷೇತ್ರವು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಇದಕ್ಕಾಗಿ ನಾವು ವಿದೇಶವನ್ನು ಅವಲಂಬಿಸದೆ ನಮ್ಮಲ್ಲೇ ತಯಾರಿಸುವಂತಾಗಬೇಕು ಎಂದರು.

ಈ ಚಿಂತನೆಯು ಕೋವಿಡ್ ಸಾಂಕ್ರಾಮಿಕಕ್ಕೂ ಮೊದಲೇ ಇತ್ತು. ಭಾರತ ಇವತ್ತು ಉನ್ನತ ದರ್ಜೆಯ ವೈದ್ಯಕೀಯ ಉಪಕರಣಗಳ ದೊಡ್ಡ ಪಾಲನ್ನು ಆಮದು ಮಾಡಿಕೊಳ್ಳುತ್ತಿದೆ. ತನ್ನದೇ ಆದ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಾಗುವ ಯಂತ್ರಗಳನ್ನು ವಿನ್ಯಾಸಗೊಳಿಸಲು ಬಯಸುವ ರಾಷ್ಟ್ರದಲ್ಲಿ ವೈದ್ಯರು ಮತ್ತು ಎಂಜಿನಿಯರ್‌ಗಳಿಗೆ ಒಂದೇ ಸೂರಿನಡಿ ತರಬೇತಿ ಸಿಗಬೇಕು ಎಂದು ಹೇಳಿದರು.

ದೆಹಲಿಯಲ್ಲಿ ಉಗ್ರರ ರಾಕೆಟ್ ಲಾಂಚರ್‌ ನಾಶಕ್ಕೆ ಜಂಟಿ ಕಾರ್ಯಾಚರಣೆ

ಭಾರತದಲ್ಲಿ ವೈದ್ಯಕೀಯ ಶಿಕ್ಷಣವು ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ನಿಯಂತ್ರಿಸಲ್ಪಡುತ್ತಿದೆ. ಐಐಟಿಯಲ್ಲಿ ಇದನ್ನು ಪ್ರಾರಂಭಿಸಬೇಕಾದರೆ ಇದಕ್ಕೆ ಆಯೋಗದ ಅನುಮೋದನೆ ಅಗತ್ಯವಿದೆ. ಈಗಾಗಲೇ ಐಐಟಿ ಖರಗ್‌ಪುರ ತನ್ನದೇ ಆದ ಆಸ್ಪತ್ರೆಯನ್ನು ನಿರ್ಮಿಸಿದೆ. ಇಲ್ಲಿ ಸ್ನಾತಕೋತ್ತರ ಎಂಡಿ ಕೋರ್ಸ್ ಅನ್ನು ಪ್ರಾರಂಭಿಸಲು ಅನುಮೋದನೆ ಸಿಕ್ಕಿದೆ. ಪರಿಣತ ವೈದ್ಯರನ್ನು ತಯಾರಿಸಲು ಪದವಿ, ಪದವಿಪೂರ್ವ ಎಂಬಿಬಿಎಸ್ ಯೋಜನೆಯು ಮೂಲಸೌಕರ್ಯಕ್ಕಾಗಿ ಕಾಯುತ್ತಿದೆ. ಐಐಟಿ ಮದ್ರಾಸ್ ಕೂಡ ಇದೇ ದಾರಿಯಲ್ಲಿ ಮುಂದುವರಿಯಬೇಕಾಗುತ್ತದೆ. ಐಐಟಿ ಮದ್ರಾಸ್ ಇದಕ್ಕಾಗಿ 2023ರಿಂದ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಹಲವು ಪ್ರಮುಖ ನಗರ ಆಸ್ಪತ್ರೆಗಳೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ ಎಂದರು.

ವಿದ್ಯಾ ಇರ್ವತ್ತೂರು

View all posts by this author