ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Skill India Internship Opportunities: ವಿದೇಶಿ ಭಾಷೆಗಳು, SAP, ಡೇಟಾ ಸೈನ್ಸ್‌, ಇಂಟರ್ನ್‌ಶಿಪ್‌ಗೆ ಟ್ರೈ ಮಾಡ್ತಾ ಇದೀರಾ? ಇಲ್ಲಿದೆ ಫ್ರೀ ಕೋರ್ಸ್‌

Skill India Provides Free Internships: ಸ್ಕಿಲ್ ಇಂಡಿಯಾ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆಗಳು, SAP, ಡೇಟಾ ಸೈನ್ಸ್‌ ಮತ್ತು ಇತರೆ ಕ್ಷೇತ್ರಗಳಲ್ಲಿ 7 ಉಚಿತ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡುತ್ತಿದೆ. ಈ ಕಾರ್ಯಕ್ರಮಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ. ವಿದ್ಯಾರ್ಥಿಗಳು ಪ್ರಾಯೋಗಿಕ ಕೌಶಲ್ಯಗಳನ್ನು ಅಭ್ಯಾಸಮಾಡಿಕೊಂಡು ವಾಸ್ತವಿಕ ಪ್ರಾಜೆಕ್ಟ್ ಅನುಭವವನ್ನು ಪಡೆಯಲು ಸಹಾಯ ಮಾಡುತ್ತವೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಸ್ಕಿಲ್ ಡೆವಲಪ್‌ಮೆಂಟ್ ಮತ್ತು ಎಂಟರ್‌ಪ್ರಿನರ್‌ಶಿಪ್ (Skill Development and Entrepreneurship) ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ನ್‌ಶಿಪ್ (internship) ಅವಕಾಶಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ವಿದೇಶಿ ಭಾಷೆಗಳು, SAP, ವೈದ್ಯಕೀಯ ಬರವಣಿಗೆ, ಡೇಟಾ ಸೈನ್ಸ್ ಮತ್ತು ಇನ್ನೂ ಹಲವು ಕೋರ್ಸ್‌ಗಳಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಪಡೆಯಬಹುದು.

ಇಂಟರ್ನ್‌ಶಿಪ್ ಅವಧಿಯು 1 ತಿಂಗಳಿನಿಂದ 3 ತಿಂಗಳವರೆಗೆ ಇರುತ್ತದೆ. 10, 12ನೇ ತರಗತಿ, ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಇಂಟರ್ನ್‌ಶಿಪ್ ಅವಕಾಶಗಳನ್ನು ಪಡೆಯಬಹುದು.

ಶ್ರೀರಾಮ್‌ ಫೈನಾನ್ಸ್‌ನಲ್ಲಿ 39,618 ಕೋಟಿ ಹೂಡಿಕೆ ಘೋಷಿಸಿದ ಜಪಾನ್‌ ಬ್ಯಾಂಕ್‌

ಇಂಟರ್ನ್‌ಶಿಪ್ ಅವಕಾಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ:

ಪೈಥಾನ್ ಇಂಟರ್ನ್‌ಶಿಪ್‌ನೊಂದಿಗೆ ಡೇಟಾ ಸೈನ್ಸ್: ಈ ಇಂಟರ್ನ್‌ಶಿಪ್‌ನ ಅವಧಿ 1 ತಿಂಗಳು. ಇದು ಆನ್‌ಲೈನ್‌ ವಿಧಾನದಲ್ಲಿ ನಡೆಯಲಿದೆ. 10ನೇ ತರಗತಿ, 12ನೇ ತರಗತಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕೋರ್ಸ್‌ನ ಫಲಿತಾಂಶವು ಡೇಟಾ ಸೈನ್ಸ್‌ಗಾಗಿ ಪೈಥಾನ್ ಕಲಿಯುವುದು, ವಾಸ್ತವಿಕ (ರಿಯಲ್-ವರ್ಡ್) ಪ್ರಾಜೆಕ್ಟ್‌ಗಳ ಮೇಲೆ ಕೆಲಸ ಮಾಡುವುದು, ಡೇಟಾ ಕ್ಲೀನಿಂಗ್ ಹಾಗೂ ಡೇಟಾ ವಿಸುಯಲೈಜೆಷನ್‌ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡೆಯಬಹುದು.

ಆರ್ ಬಳಸಿ ಬ್ಯುಸಿನೆಸ್ ವಿಶ್ಲೇಷಣೆ: 10, 12ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಆಫರ್‌ಗೆ ಅರ್ಜಿ ಸಲ್ಲಿಸಬಹುದು. ಈ ಕೋರ್ಸ್‌ನ ಅವಧಿ ಒಂದು ತಿಂಗಳು ಆಗಿದ್ದು, ಇದು ಆನ್‌ಲೈನ್‌ನಲ್ಲಿ ನಡೆಯಲಿದೆ. ಈ ಕೋರ್ಸ್‌ನ ಫಲಿತಾಂಶವಾಗಿ ವ್ಯವಹಾರ ವಿಶ್ಲೇಷಣೆಗೆ (ಬಿಸಿನೆಸ್ ಅನಾಲಿಟಿಕ್ಸ್) ಅಗತ್ಯವಾದ R ಭಾಷೆಯನ್ನು ಕಲಿಯುವುದು, ಡೇಟಾ ಕ್ಲೀನಿಂಗ್ ಮತ್ತು ಟ್ರಾನ್ಸ್‌ಫಾರ್ಮೇಷನ್, ಸಂಖ್ಯಾಶಾಸ್ತ್ರೀಯ (ಸ್ಟಾಟಿಸ್ಟಿಕಲ್) ವಿಶ್ಲೇಷಣೆಯನ್ನು ಅನ್ವಯಿಸುವುದು ಸೇರಿದಂತೆ ಇತರ ಕೌಶಲ್ಯಗಳನ್ನು ಪಡೆಯಬಹುದು.

ಡಿಜಿಟಲ್ ಮಾರ್ಕೆಟಿಂಗ್ ಪ್ರೊ ಅಪ್ರೆಂಟಿಸ್‌ಶಿಪ್ ಪ್ರೋಗ್ರಾಂ: ಈ ಇಂಟರ್ನ್‌ಶಿಪ್ ಕಾರ್ಯಕ್ರಮದ ಕ್ಷೇತ್ರ ಜಾಹೀರಾತು (Advertising) ಆಗಿದೆ. ಇದರ ಅವಧಿ 1 ತಿಂಗಳು. 10ನೇ ತರಗತಿ, 12ನೇ ತರಗತಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಪ್ರಮುಖ ಡಿಜಿಟಲ್ ಮಾರ್ಕೆಟಿಂಗ್‌ ಸ್ಕಿಲ್‍ಗಳನ್ನು ಕಲಿಯಬಹುದು. ಜೊತೆಗೆ SEO, SEM, ಸೋಶಿಯಲ್ ಮೀಡಿಯಾ ಮತ್ತು ಇಮೇಲ್ ಮಾರ್ಕೆಟಿಂಗ್‌ನ ಮೂಲತತ್ವಗಳನ್ನು ಅರಿತುಕೊಳ್ಳುವ ಅವಕಾಶ ದೊರೆಯುತ್ತದೆ. ವಾಸ್ತವಿಕ (ರಿಯಲ್-ವರ್ಡ್) ಅಭಿಯಾನದಲ್ಲಿ ಕೆಲಸ ಮಾಡುವ ಅನುಭವವೂ ಈ ಕಾರ್ಯಕ್ರಮದಲ್ಲಿ ಲಭ್ಯವಾಗುತ್ತದೆ.

ಫೈನಾನ್ಶಿಯಲ್ ರಿಪೋರ್ಟಿಂಗ್ ಇಂಟರ್ನ್‌ಶಿಪ್: ಈ ಇಂಟರ್ನ್‌ಶಿಪ್ ಕಾರ್ಯಕ್ರಮವು ಹಣಕಾಸು, ಬ್ಯಾಂಕಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಉದ್ದೇಶಿಸಲಾಗಿದೆ. ಈ ಇಂಟರ್ನ್‌ಶಿಪ್ ಆನ್‌ಲೈನ್‌ ಮೋಡ್‌ನಲ್ಲಿ ನಡೆಯಲಿದ್ದು, ಇದರ ಅವಧಿ ಒಂದು ತಿಂಗಳು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಹಣಕಾಸು ವರದಿಗಳ ತಯಾರಿಯನ್ನು ಕಲಿಯುತ್ತಾರೆ. ಬ್ಯಾಲೆನ್ಸ್ ಶೀಟ್‌, ಆದಾಯ ವಿವರ ಪತ್ರ (ಇನ್‌ಕಮ್ ಸ್ಟೇಟ್‌ಮೆಂಟ್‌) ಮತ್ತು ಕ್ಯಾಶ್ ಫ್ಲೋ ಸ್ಟೇಟ್‌ಮೆಂಟ್‌ ತಯಾರಿಸುವಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯುತ್ತಾರೆ. ಜೊತೆಗೆ GAAP, IFRS ಮತ್ತು ಇತರೆ ಸಂಬಂಧಿತ ಲೆಕ್ಕಪತ್ರ ಮಾನದಂಡಗಳ ಬಗ್ಗೆಯೂ ಪರಿಚಯವಾಗುತ್ತದೆ.

HR ಬಿಸಿನೆಸ್ ಪಾರ್ಟ್ನರ್ ಇಂಟರ್ನ್‌ಶಿಪ್ (ವರ್ಕ್‌ಫೋರ್ಸ್ ಡೆವಲಪ್‌ಮೆಂಟ್, ಟ್ಯಾಲೆಂಟ್ ಸ್ಟ್ರಾಟಜಿ): 10ನೇ ತರಗತಿ, 12ನೇ ತರಗತಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಈ ಇಂಟರ್ನ್‌ಶಿಪ್‍ಗೆ ಅರ್ಜಿ ಸಲ್ಲಿಸಬಹುದು. ಈ ಕಾರ್ಯಕ್ರಮವು HR ಹೇಗೆ ವ್ಯವಹಾರ ತಂತ್ರದೊಂದಿಗೆ ಹೊಂದಾಣಿಕೆ ಸಾಧಿಸುತ್ತದೆ ಎಂಬುದನ್ನು ಕಲಿಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಮತ್ತು ಆರ್ಗನೈಸೇಷನಲ್ ಡೆವಲಪ್‌ಮೆಂಟ್ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಕಾರ್ಯಕ್ರಮದ ಅವಧಿ ಒಂದು ತಿಂಗಳು.

NPS Rules Relaxed: ರಾಷ್ಟ್ರೀಯ ಪಿಂಚಣಿ ಯೋಜನೆ ಇನ್ನಷ್ಟು ಸರಳ: ಏನೆಲ್ಲ ಸಡಿಲಿಕೆಗಳಿವೆ? ಇಲ್ಲಿದೆ ಮಾಹಿತಿ

SAP MM ಎಕ್ಸ್‌ಪರ್ಟ್ ಇಂಟರ್ನ್‌ಶಿಪ್: ಈ ಕಾರ್ಯಕ್ರಮವು SAP MM‌ನಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಖರೀದಿ (ಪ್ರೊಕ್ಯುರ್ಮೆಂಟ್), ಇನ್‌ವೆಂಟರಿ ಮತ್ತು ಮೆಟೀರಿಯಲ್ ಪ್ಲಾನಿಂಗ್ ಪ್ರಕ್ರಿಯೆಗಳ ನಿರ್ವಹಣೆಯನ್ನು ಕಲಿಯಬಹುದು. ಜೊತೆಗೆ ಸಪ್ಲೈ ಚೈನ್ ಮತ್ತು ಇನ್‌ವೆಂಟರಿ ಮ್ಯಾನೇಜ್‌ಮೆಂಟ್ ಕುರಿತು ಆಳವಾದ ಜ್ಞಾನವನ್ನು ಪಡೆಯುತ್ತಾರೆ. ಈ ಇಂಟರ್ನ್‌ಶಿಪ್‌ನ ಅವಧಿ ಒಂದು ತಿಂಗಳು ಆಗಿದ್ದು, ಇದು ಆನ್‌ಲೈನ್‌ ಮೋಡ್‌ನಲ್ಲಿ ನಡೆಯಲಿದೆ.

ಕೊರಿಯನ್ ವೊಕೇಬುಲರಿ ಎನ್‌ರಿಚ್‍ಮೆಂಟ್ ಇಂಟರ್ನ್‌ಶಿಪ್: 10, 12ನೇ ತರಗತಿಯ ವಿದ್ಯಾರ್ಥಿಗಳು, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಕೋರ್ಸ್‌ನ ಅವಧಿ ಒಂದು ತಿಂಗಳು ಮತ್ತು ಇಂಟರ್ನ್‌ಶಿಪ್ ಅನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಈ ಕಾರ್ಯಕ್ರಮವು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕೊರಿಯನ್ ಭಾಷಾ ಕೌಶಲ್ಯ, ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸಲು ವಿನ್ಯಾಸಗೊಳಿಸಲಾದ ಪ್ರಾಯೋಗಿಕ ಇಂಟರ್ನ್‌ಶಿಪ್ ಅನ್ನು ಒದಗಿಸುತ್ತದೆ.